ವಿಶ್ವಮಾನ ಎಕ್ಸ್‌ಪ್ರೆಸ್ ಬೆಳಗಾವಿ ತನಕ ವಿಸ್ತರಣೆ, ವೇಳಾಪಟ್ಟಿ
ಮೈಸೂರು, ಅಕ್ಟೋಬರ್ 29 : ಮೈಸೂರು-ಹುಬ್ಬಳ್ಳಿ ನಡುವೆ ಸಂಚಾರ ನಡೆಸುವ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲಾಗಿದೆ. ನವೆಂಬರ್ 1 ರಿಂದ ರೈಲು ಸಂಚಾರ ನಡೆಸಲಿದ್ದು, ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
ಮೈಸೂರು (ಅಶೋಕಪುರಂ) - ಹುಬ್ಬಳ್ಳಿ ನಡುವೆ ಸಂಚಾರ ನಡೆಸುವ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲಾಗಿದೆ. ನೈಋತ್ಯ ರೈಲ್ವೆ ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ನವೆಂಬರ್ 1ರಂದು ಮೈಸೂರಿನಿಂದ ಹೊರಡುವ ರೈಲು ಬೆಳಗಾವಿ ತನಕ ಸಂಚಾರ ನಡೆಸಲಿದೆ.
ರೈಲು ನಂಬರ್ 17325/17326 ಮೈಸೂರು-ಬೆಳಗಾವಿ ನಡುವೆ ಸಂಚಾರ ನಡೆಸಲಿದೆ. ಬೆಳಗಾವಿಯಿಂದ ನವೆಂಬರ್ 2ರಂದು ಹೊರಡುವ ರೈಲು ಮೈಸೂರು ತನಕ ಸಂಚಾರ ನಡೆಸಲಿವೆ.

ವೇಳಾಪಟ್ಟಿ: ಬೆಳಗ್ಗೆ 5.15ಕ್ಕೆ ಮೈಸೂರಿನ ಅಶೋಕಪುರಂನಿಂದ ಹೊರಡುವ ರೈಲು ಸಂಜೆ 6.53ಕ್ಕೆ ಹುಬ್ಬಳ್ಳಿ ತಲುಪಲಿದೆ. ರಾತ್ರಿ 7.32ಕ್ಕೆ ಅಲ್ಲಿಂದ ಹೊರಟು ರಾತ್ರಿ 11.15ಕ್ಕೆ ಬೆಳಗಾವಿಗೆ ತಲುಪಲಿದೆ.
ಬೆಳಗಾವಿಯಿಂದ ಬೆಳಗ್ಗೆ 5ಕ್ಕೆ ಹೊರಡುವ ರೈಲು, 8.25ಕ್ಕೆ ಹುಬ್ಬಳ್ಳಿ ತಲುಪಲಿದೆ. 8.45ಕ್ಕೆ ಹುಬ್ಬಳ್ಳಿಯಿಂದ ಹೊರಡುವ ರೈಲು ರಾತ್ರಿ 9.15ಕ್ಕೆ ಮೈಸೂರು ತಲುಪಲಿದೆ.












Click it and Unblock the Notifications