ವಿಷ್ಣು ಸ್ಮಾರಕಕ್ಕೆ ಸ್ವಂತ ಜಾಗ ಕೊಡಲು ಮುಂದೆ ಬಂದ ಅಭಿಮಾನಿ
Recommended Video

ಮೈಸೂರು, ನವೆಂಬರ್. 29:ನಟ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಿಸುವ ವಿಚಾರ ಗೊಂದಲವಾಗುತ್ತಿರುವ ಹಿನ್ನೆಲೆಯಲ್ಲಿ ತಮ್ಮ 13 ಗುಂಟೆ ಜಾಗವನ್ನು ಸ್ಮಾರಕ ನಿರ್ಮಾಣಕ್ಕೆ ನೀಡಲು ಅಭಿಮಾನಿಯೊಬ್ಬರು ಮುಂದಾಗಿದ್ದಾರೆ.
ಮೂಲತಃ ಮಂಡ್ಯ ನಿವಾಸಿಯಾಗಿರುವ ಕೆ.ಸಿ.ಪಿ ರಾಜಣ್ಣ ಸ್ಮಾರಕ ನಿರ್ಮಾಣಕ್ಕೆ ಜಮೀನು ನೀಡಲು ಮುಂದಾಗಿದ್ದಾರೆ. ಮೈಸೂರಿನ ಕೆ.ಆರ್.ಎಸ್. ಜಲಾಶಯದ ಸಮೀಪವಿರುವ 100*80 ನಿವೇಶನ ಹಾಗೂ ಪಕ್ಕದಲ್ಲೇ ಇರುವ 13 ಗುಂಟೆ ಜಾಗವನ್ನು ಸ್ವಂತ ಹಣದಲ್ಲಿ ಖರೀದಿ ಮಾಡಿ ಸ್ಮಾರಕಕ್ಕೆ ನೀಡಲು ಮುಂದಾಗಿದ್ದಾರೆ.
"ಕೆ.ಆರ್.ಎಸ್ ಬಳಿ ಇರುವ ನನ್ನ ಭೂಮಿಯಲ್ಲಿ ಶನಿಸಿಂಗಪುರ ಮಾದರಿಯಲ್ಲೇ ದೇವಾಲಯವನ್ನು ನಿರ್ಮಾಣ ಮಾಡಲು ತೀರ್ಮಾನ ಮಾಡಿ ಸ್ಥಳ ಖರೀದಿಸಿದ್ದೆ.ಇದರ ಪಕ್ಕದಲ್ಲೇ 13 ಗುಂಟೆ ಖಾಸಗಿ ವ್ಯಕ್ತಿಯ ಸ್ಥಳವಿದೆ. ಅದನ್ನು ಖರೀದಿ ಮಾಡಿ ಸರ್ಕಾರಕ್ಕೆ ನೀಡುತ್ತೇನೆ. ಅಲ್ಲದೇ ಈ ಸ್ಥಳದಲ್ಲಿ ಸರ್ಕಾರದ 4 ಎಕರೆ ಪ್ರದೇಶವಿದೆ.

ಈ ಜಾಗದಲ್ಲಿ ನಾನು ಆಶ್ರಮ ಮಾಡಬೇಕು ಎಂದುಕೊಂಡಿದ್ದೆ. ಆದರೆ ವಿಷ್ಣು ಸ್ಮಾರಕಕ್ಕೆ ಉಂಟಾಗಿರುವ ಗೊಂದಲ ನಿವಾರಣೆ ಮಾಡಬೇಕಿದೆ. ನಾನು ವಿಷ್ಣುರವರ ದೊಡ್ಡ ಅಭಿಮಾನಿ. ಹಾಗಾಗಿ ನಮ್ಮ ಕುಟುಂಬಸ್ಥರು ಸೇರಿ ಈ ನಿರ್ಧಾರ ಮಾಡಿದೆವು" ಎಂದರು.
ವಿಷ್ಣು ಅವರ ಸ್ಮಾರಕ ವಿಚಾರಕ್ಕೆ ಸುಮ್ಮನೆ ಹೋರಾಟ, ಗೊಂದಲ ಉಂಟಾಗುವುದು ಬೇಡ. ಇದರಿಂದ ನಮ್ಮ ವಿಷ್ಣು ಕುಟುಂಬಕ್ಕೆ ಸಮಸ್ಯೆ ಉಂಟಾಗುತ್ತದೆ. ಅಲ್ಲದೇ ಅಭಿಮಾನಿಗಳಿಗೂ ಒಂದು ರೀತಿ ಅವಮಾನ ಆಗುತ್ತದೆ.
ಸರ್ಕಾರ ಹಾಗೂ ಭಾರತಿ ವಿಷ್ಣುವರ್ಧನ್ ಅಮ್ಮನವರು ಈ ಬಗ್ಗೆ ಮಾತನಾಡಿ ತೀರ್ಮಾನ ತೆಗೆದುಕೊಂಡರೆ ನಾನು ಈ ಕ್ಷಣಕ್ಕೆ ಜಾಗ ನೀಡಲು ಸಿದ್ಧ ಎಂದು ತಿಳಿಸಿದರು.
ಕಂಠೀರವ ಸ್ಟುಡಿಯೋಗೆ ವಿಷ್ಣು ಸ್ಮಾರಕ ಸ್ಥಳಾಂತರ ಖಂಡಿತ ಆಗಲ್ಲ, ಯಾಕೆ.?
ರಾಜಣ್ಣ ಕಳೆದ ಮೂರು ತಿಂಗಳ ಹಿಂದೆಯಷ್ಟೆ 100*80 ಜಾಗವನ್ನು ಖರೀದಿಸಿದ್ದರು. ವೃತ್ತಿಯಲ್ಲಿ ಕಂಟ್ರ್ಯಾಕ್ಟರ್ ಆಗಿರುವ ರಾಜಣ್ಣ ಅವರ ಈ ಅಭಿಮಾನಕ್ಕೆ ಎಲ್ಲರೂ ಭೇಷ್ ಅನ್ನುತ್ತಿದ್ದಾರೆ. ಕಳೆದ ಕೆಲವು ತಿಂಗಳ ಕೆಳಗಷ್ಟೇ ಆರ್ವ ಬಸವಟ್ಟಿ ಎಂಬ ನಟರು ಸಹ ಚಾಮರಾಜನಗರದಲ್ಲಿರುವ ತಮ್ಮ ಜಮೀನನ್ನು ನೀಡಲು ಮುಂದೆ ಬಂದಿದ್ದನ್ನು ಇದೇ ವೇಳೆ ಸ್ಮರಿಸಬಹುದಾಗಿದೆ.












Click it and Unblock the Notifications