ಮೈಸೂರಿನ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರ ಒಳ ಉಡುಪು ಕದ್ದ ವ್ಯಕ್ತಿ

ಮೈಸೂರು, ಜುಲೈ 22 : ವ್ಯಕ್ತಿಯೊಬ್ಬ ರಾತ್ರೋರಾತ್ರಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ನುಗ್ಗಿ ದಾಂಧಲೆ ನಡೆಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಹಾಸ್ಟೆಲ್‌ಗೆ ನುಗ್ಗಿದವನು ವಿದ್ಯಾರ್ಥಿನಿಯರ ಒಳುಡು ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಗರದ ಕೆ.ಆರ್.ಆಸ್ಪತ್ರೆ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ. 3 ಅಂತಸ್ತಿನ ಹಾಸ್ಟೆಲ್‌ಗೆ ನುಗ್ಗಿದ ವ್ಯಕ್ತಿ ವಿದ್ಯಾರ್ಥಿನಿಯರಲ್ಲಿ ಆತಂಕ ಮೂಡಿಸಿದ್ದಾನೆ.

ವಿದ್ಯಾರ್ಥಿನಿಯರ ರೂಂಗೆ ನುಗ್ಗಿದ ಆತ ಅವರ ಮೊಬೈಲ್ ಕಸಿದುಕೊಳ್ಳಲು ಪ್ರಯತ್ನ ನಡೆಸಿದ್ದಾನೆ. ಕಳ್ಳತನ ನೋಡಿದ ವಿದ್ಯಾರ್ಥಿನಿಯ ಕತ್ತು ಹಿಸಕಲು ಪ್ರಯತ್ನ ನಡೆಸಿದ್ದಾನೆ.

Video shows man stealing womens inner wear from hostel

ಜುಲೈ 20ರಂದು ಬೆಳಗಿನ ಜಾವ ಸುಮಾರು 3 ಗಂಟೆವರೆಗೂ ಹಾಸ್ಟೆಲ್ ಆವರಣದಲ್ಲಿ ವ್ಯಕ್ತಿ ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಸ್ಟೆಲ್‌ನ ಯುವತಿಯರ ಒಳ ಉಡುಪುಗಳನ್ನು ತೆಗೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಿದ್ದಾನೆ.

ಹಾಸ್ಟೆಲ್ ಹಿಂಭಾಗದಿಂದ ಕಾಂಪೌಂಡ್ ಹಾರಿ ವ್ಯಕ್ತಿ ಬಂದಿರುವ ಶಂಕೆ ಇದೆ. ಕಳೆದ ವರ್ಷವೂ ಇದೇ ರೀತಿ ಘಟನೆ ಹಾಸ್ಟೆಲ್‌ನಲ್ಲಿ ನಡೆದಿತ್ತು. ಬಳಿಕ ಸಿಸಿಟಿವಿ ಆಳವಡಿಸಲಾಗಿತ್ತು. ಹಾಸ್ಟೆಲ್‌ನಲ್ಲಿ ಗ್ರಾಮೀಣ ಪ್ರದೇಶಕ್ಕೆ ಸೇರಿದ ವಿದ್ಯಾರ್ಥಿನಿಯರು ಅಧಿಕವಾಗಿದ್ದಾರೆ.

Video shows man stealing womens inner wear from hostel

ಸುಮಾರು 30 ವರ್ಷ ಇತಿಹಾಸವನ್ನು ಕೆ.ಆರ್.ಆಸ್ಪತ್ರೆಯ ನರ್ಸಿಂಗ್ ಕಾಲೇಜು ಹಾಸ್ಟೆಲ್‌ ಹೊಂದಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ದೇವರಾಜ ಠಾಣೆ ಪೊಲೀಸರು ವ್ಯಕ್ತಿಯನ್ನು ಬಂಧಿಸಲು ಕ್ರಮ ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+