ಉಗ್ರರನ್ನು ಹೊಡೆದುರುಳಿಸಿದ್ದಕ್ಕೆ ಮೈಸೂರಿನಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ
ಮೈಸೂರು, ಫೆಬ್ರವರಿ 26:ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್ ಗೆ ತಕ್ಕ ಪಾಠ ಕಲಿಸಿದೆ. ಇಂದು ಮುಂಜಾನೆ ಪಾಕ್ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿ ಉಡೀಸ್ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಸಂಭ್ರಮಾಚರಣೆ ನಡೆಯುತ್ತಿದೆ.
ಇತ್ತ ಮೈಸೂರಿನಲ್ಲಿಯೂ "ಭಾರತೀಯ ಸೈನಿಕರೇ ಮುನ್ನುಗ್ಗಿ ನಿಮ್ಮೊಂದಿಗೆ ನಾವು ಇದ್ದೇವೆ" ಎಂಬ ಭಿತ್ತಿ ಪತ್ರಗಳನ್ನು ಹಿಡಿದು ಸೈನಿಕರ ಪರವಾಗಿ ಮೈಸೂರಿನಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆ ಮತ್ತು ವೀರ ಸಾವರ್ಕರ್ ಬಳಗದ ವತಿಯಿಂದ ಸಂಭ್ರಮಾಚರಣೆ ಆಚರಿಸಲಾಯಿತು. ಸೈನಿಕರಿಗೆ ನೈತಿಕವಾಗಿ ಬೆಂಬಲ ನೀಡುವ ಸಲುವಾಗಿ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಸಿಹಿ ಹಂಚಿ ಸಂಭ್ರಮಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಮಾಜ ಸೇವಕ ಡಿ.ಟಿ.ಪ್ರಕಾಶ್, ಭಾರತ ಪಾಕಿಸ್ತಾನದ ವಿರುದ್ಧ ಯುದ್ಧ ಸಾರಬೇಕು. ನಮ್ಮ ಸೈನಿಕರ ಸಾವಿಗೆ ಸರಿಯಾಗಿ ಸೇಡು ತೀರಿಸಿಕೊಳ್ಳಬೇಕು. ಸೈನ್ಯ ಹಾಗೂ ಸರ್ಕಾರಕ್ಕೆ ತನು ಮನ ಧನ ಸಹಕಾರವನ್ನು ನೀಡಲು ಜನ ತಯಾರಿದ್ದಾರೆ ಎಂದು ತಿಳಿಸಿದರು.












Click it and Unblock the Notifications