• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿ. ಜಿ. ಸಿದ್ದಾರ್ಥ ತಂದೆ ಗಂಗಯ್ಯ ಹೆಗ್ಡೆ ವಿಧಿವಶ

|

ಮೈಸೂರು, ಆಗಸ್ಟ್ 25 : ಕೆಫೆ ಕಾಫಿ ಡೇ ಮಾಲೀಕ ದಿ.ವಿ. ಜಿ. ಸಿದ್ದಾರ್ಥ ಕುಟುಂಬಕ್ಕೆ ಮತ್ತೊಂದು ಅಘಾತ ಎದುರಾಗಿದೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿ. ಜಿ. ಸಿದ್ದಾರ್ಥ ತಂದೆ ಗಂಗಯ್ಯ ಹೆಗ್ಡೆ ವಿಧಿವಶರಾದರು.

ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಗಂಗಯ್ಯ ಹೆಗ್ಡೆ (94) ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಹಲವು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

   V G Siddhartha : ತಮ್ಮ ಮಗನ ಮುಖವನ್ನ ಕೊನೇ ಬಾರಿಗೆ ನೋಡಲು ಸಿದ್ಧಾರ್ಥ ತಂದೆಗೆ ಅದೃಷ್ಟ ಇಲ್ಲ | Oneindia Kannada

   ಸಿದ್ಧಾರ್ಥ ಮೇಲಿದ್ದ 9409 ಕೋಟಿ ಸಾಲದ ಪೂರ್ಣ ಅಂಕಿ-ಅಂಶ

   ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅಳಿಯ ವಿ.ಜಿ. ಸಿದ್ಧಾರ್ಥ ಜುಲೈ 29ರಂದು ಸಾವನ್ನಪ್ಪಿದ್ದರು. ವಿ.ಜಿ. ಸಿದ್ಧಾರ್ಥ ಸಾವನ್ನಪ್ಪುವ ಮೊದಲೇ ಗಂಗಯ್ಯ ಹೆಗ್ಡೆ ಕೋಮಾಕ್ಕೆ ಜಾರಿದ್ದರು. ಆದ್ದರಿಂದ, ಕೊನೆಯ ತನಕ ಪುತ್ರನ ಸಾವಿನ ವಿಚಾರ ಅವರಿಗೆ ತಿಳಿಯಲೇ ಇಲ್ಲ.

   ನನ್ನ ಗೆಳೆಯ ಸಿದ್ಧಾರ್ಥ ಬುದ್ಧನಾಗಲು ಹೋದ: ಪೊಲೀಸ್ ಅಧಿಕಾರಿಯ ಆಪ್ತ ಬರಹ

   ವಿ.ಜಿ. ಸಿದ್ಧಾರ್ಥ ಮಂಗಳೂರಿಗೆ ಭೇಟಿ ನೀಡುವ ಹಿಂದಿನ ದಿನ ಮೈಸೂರಿಗೆ ತೆರಳಿ ತಂದೆಯ ಆರೋಗ್ಯ ವಿಚಾರಿಸಿದ್ದರು. ತಂದೆಯ ಜೊತೆ ಅವರು ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

   ಅಪ್ಪನ ಜೊತೆ ಚಿಂತಾಕ್ರಾಂತರಾಗಿ ಕುಳಿತಿದ್ದ ಸಿದ್ಧಾರ್ಥ್; ವೈರಲ್ ಆಗಿದೆ ಈ ಚಿತ್ರ

   ಗಂಗಯ್ಯ ಹೆಗ್ಡೆ ಮೂಲತಃ ಕೃಷಿಕರು. ಚೇತನಹಳ್ಳಿಯಲ್ಲಿ ತೋಟವನ್ನು ಮಾಡಿದವರು ಅವರೇ. ಊರಿನ ಜನರು ಪ್ರೀತಿಯಿಂದ ಅವರನ್ನು ಅಯ್ಯ ಎನ್ನುತ್ತಿದ್ದರು. ನಾಲ್ಕು ವರ್ಷದ ಹಿಂದೆ ಅವರು 90 ವರ್ಷಕ್ಕೆ ಪಾದಾರ್ಪಣೆ ಮಾಡಿದಾಗ 'ಚೇತನ' ಎಂಬ ಪುಸ್ತಕವನ್ನು ಹೊರತರಲಾಗಿತ್ತು. ಎಸ್. ಎಂ. ಕೃಷ್ಣ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.

   English summary
   Father of Cafe Coffee Day (CCD) founder V.G.Siddhartha father Gangaiah Hegde passed away at Mysuru in a private hospital.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X