ಮೈಸೂರು: ಗಮನ ಸೆಳೆದ ಬಗೆಬಗೆಯ ಯಂತ್ರಗಳು ಮತ್ತು ಆಹಾರ ಉತ್ಪನ್ನಗಳು; ಏನಿದು ಕಾರ್ಯಕ್ರಮ?, ಇಲ್ಲಿದೆ ವಿವರ
ಮೈಸೂರು, ಜುಲೈ, 07: ಸಿಎಫ್‌ಟಿಆರ್‌ಐನಲ್ಲಿ ನಡೆದ ಮುಕ್ತ ದಿನ ಕಾರ್ಯಕ್ರಮದಲ್ಲಿ ವಿಶೇಷ ಯಂತ್ರಗಳು, ಆಹಾರ ಉತ್ಪನ್ನಗಳು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ನಿಬ್ಬೆರರಾಗುವಂತೆ ಮಾಡಿದವು.
ದೋಸೆ-ಚಪಾತಿ-ಜೋಳದ ರೊಟ್ಟಿ ಮಾಡುವ ಯಂತ್ರಗಳು, ಕಿರುಧಾನ್ಯಗಳ ಹೊಟ್ಟು ತೆಗೆಯುವ ಪೆಡಲ್ ಚಾಲಿತ ಸೈಕಲ್, ಬೀಜಗಳನ್ನು ಹುರಿಯುವ ಉಪಕರಣ, ಹಾಲಿನ ಗುಣಮಟ್ಟ ಅಳೆಯುವ ಮಾಪನಗಳು ವಿದ್ಯಾರ್ಥಿಗಳ ಕುತೂಹಲ ತಣಿಸಿದವು. ಮುಕ್ತ ದಿನದ ಅಂಗವಾಗಿ ನಗರದ ವಿವಿಧ ಶಾಲಾ-ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು, ನಾಗರಿಕರು ಭೇಟಿ ನೀಡಿ ಆಹಾರ ಉತ್ಪನ್ನಗಳು, ಯಂತ್ರಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಪೆಡಲ್ ಚಾಲಿತ ಸಿರಿಧಾನ್ಯಗಳ ಹೊಟ್ಟು ತೆಗೆಯುವ ಯಂತ್ರದಲ್ಲಿ ಪೆಡಲ್, ಬ್ಲೋವರ್ ಹಾಗೂ ಪ್ರತ್ಯೇಕಗೊಳಿಸುವ ಕೊಳವೆ ಹೀಗೆ 3 ಭಾಗಗಳಿವೆ. ಪೆಡಲ್ ತುಳಿಯುತ್ತಿದ್ದಂತೆ, ಅದಕ್ಕೆ ಜೋಡಿಸಿರುವ ಚಿಕ್ಕ ಫ್ಯಾನ್ ತಿರುಗಲು ಆರಂಭವಾಗುತ್ತದೆ. ಅದರ ಮೇಲ್ಭಾಗದಲ್ಲಿ ಚಿಕ್ಕದಾದ ಕಿಂಡಿಯಿದ್ದು, ಅದಕ್ಕೆ ಕಾಳನ್ನು ಸುರಿದರೆ ಕಾಳು ಮತ್ತು ಹೊಟ್ಟು ಬೇರ್ಪಡುತ್ತದೆ.
ಇದು ಜುಲೈ 7ರಂದು ಬೆಳಗ್ಗೆ 10ರಿಂದ ಆರಂಭವಾಗುದ್ದು, ಸಂಜೆ 4 ಗಂಟೆವರೆಗೂ ಆಸಕ್ತ ಸಾರ್ವಜನಿಕರು ಮತ್ತು ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಿಎಫ್‌ಟಿಆರ್ ಸಂಸ್ಥೆಗೆ ಭೇಟಿ ನೀಡಬಹುದಾಗಿದೆ.
ಗಮನ ಸೆಳೆದ ಜೋಳದ ರೊಟ್ಟಿ ತಯಾರಿಸುವ ಯಂತ್ರ
ಇನ್ನು ಗಂಟೆಗೆ ಸುಮಾರು 250 ಜೋಳದ ರೊಟ್ಟಿಯನ್ನು ಮಾಡುವ ಹೊಸ ಯಂತ್ರವು ನೋಡುಗರನ್ನು ಆಕರ್ಷಿಸಿತು. ಬೆಂಗಳೂರು ಜಿಲ್ಲೆಯಲ್ಲೇ ವಾರಕ್ಕೆ 15ರಿಂದ 20 ಲಕ್ಷ ರೊಟ್ಟಿಗೆ ಬೇಡಿಕೆ ಬರುತ್ತದೆ ಎಂದು ಹಿರಿಯ ತಾಂತ್ರಿಕ ಅಧಿಕಾರಿ ರಮೇಶ್ ತಿಳಿಸಿದರು.
9 ಉತ್ಪನ್ನಗಳ ಬಿಡುಗಡೆ
ಸಭಾ ಕಾರ್ಯಕ್ರಮದಲ್ಲಿ ರಾಗಿ ಕೇಸರಿ ಹಲ್ವ ಮಿಶ್ರಣ, ರಾಗಿ ಕಿಚಡಿ ಮಿಶ್ರಣ, ರಾಗಿ ಉಪ್ಪಿಟ್ಟು ಮಿಶ್ರಣ, ರಾಗಿ ರವೆ, ರಾಗಿ ರವಾ ಇಡ್ಲಿ ಮಿಶ್ರಣ, ಸಿರಿಧಾನ್ಯಗಳ ಪುಟ್ಟು ಪುಡಿ, ರಾಗಿ ಮಾಲ್ಟ್, ಮಕ್ಕಳಿಗಾಗಿ ಅಕ್ಕಿ ಗಂಜಿ ಮಿಶ್ರಣ ಹಾಗೂ ಬಯೋಡೀಗ್ರೇಡಬಲ್ ಕೀ ಬಂಚ್ ಅನ್ನು ಬಿಡುಗಡೆ ಮಾಡಲಾಯಿತು.












Click it and Unblock the Notifications