ಜಂಬೂಸವಾರಿ ಪಾಸ್ ಗೊಂದಲ; ಸ್ಪಷ್ಟ ಉತ್ತರ ನೀಡದ ಸೋಮಣ್ಣ
ಮೈಸೂರು, ಅಕ್ಟೋಬರ್ 5: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆ ಹಾಗೂ ಪಂಜಿನ ಕವಾಯತು ವೀಕ್ಷಣೆಯ ಪಾಸ್ ಗಳ ವಿತರಣೆಯಲ್ಲಿ ಉಂಟಾಗಿರುವ ಗೊಂದಲದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸ್ಪಷ್ಟ ಉತ್ತರ ನೀಡದೇ ಪ್ರತಿ ಬಾರಿಯಂತೆ ಪಾಸ್ ಗಳನ್ನು ವಿತರಿಸಲಾಗುವುದು ಎಂದಷ್ಟೇ ಹೇಳಿದ್ದಾರೆ.
ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆ ಹಾಗೂ ಪಂಜಿನ ಕವಾಯತು ವೀಕ್ಷಣೆಯ ಪಾಸ್ ಗಳಿಗಾಗಿ ಎರಡು ದಿನಗಳಿಂದ ಕ್ಯೂನಲ್ಲಿ ನಿಂತಿದ್ದರೂ ಪಾಸ್ ಸಿಕ್ಕಿಲ್ಲ ಎಂದು ಸಾರ್ವಜನಿಕರು ಡಿ.ಸಿ ಕಚೇರಿಯಲ್ಲೇ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಅಧಿಕಾರಿಗಳು ದಸರಾ ಪಾಸ್ ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಪಾಸ್ ಸಿಗದೇ ಸಾರ್ವಜನಿಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಪಾಸ್ ವಿತರಣೆ ಕುರಿತು ಸ್ಪಷ್ಟ ಉತ್ತರ ನೀಡದ ಸಚಿವ ಸೋಮಣ್ಣ, "ದಸರಾ ಪಾಸ್ ವಿತರಣೆ ಸಾಕಷ್ಟು ಒತ್ತಡ ಉಂಟು ಮಾಡಿದೆ. ಆದರೂ ಪ್ರತಿ ಬಾರಿಯಂತೆ ಪಾಸ್ ಗಳನ್ನು ವಿತರಿಸಲಾಗುವುದು" ಎಂದು ಹೇಳಿದರು












Click it and Unblock the Notifications