ಮೈಸೂರಿನ ನೂತನ ಉಸ್ತುವಾರಿ ಸಚಿವರಾಗಿ ಸೋಮಣ್ಣ ನೇಮಕ
ಮೈಸೂರು, ಆಗಸ್ಟ್ 22: ಸಚಿವ ವಿ.ಸೋಮಣ್ಣ ಅವರು ಮೈಸೂರು ಜಿಲ್ಲಾ ಉಸ್ತುವಾರಿಯಾಗಿ ನೇಮಕವಾಗಿದ್ದು, ಸರ್ಕಾರದ ತುರ್ತು ಆದೇಶ ಹೊರಬಂದಿದೆ.
ಪತ್ರದಲ್ಲಿ ವಿ ಸೋಮಣ್ಣ ಅವರನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಲಾಗಿದೆ. ನಾಡ ಹಬ್ಬ ದಸರಾ ಸಮೀಪಿಸುತ್ತಿದ್ದು, ದಸರಾ ಸಿದ್ಧತೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಅವಶ್ಯಕತೆ ತುರ್ತು ಇರುವುದರಿಂದ ರಾಜ್ಯ ಸರ್ಕಾರ ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿಯವರನ್ನು ಮಾತ್ರವೇ ನೇಮಕ ಮಾಡಿದೆ ಎನ್ನಲಾಗಿದೆ.

ಸಚಿವ ಸಂಪುಟ ವಿಸ್ತರಣೆ ಬಳಿಕ ಪ್ರವಾಹ ಪರಿಶೀಲನೆಗಾಗಿ ಆರ್. ಅಶೋಕ್ ಅವರನ್ನು ಮೈಸೂರಿನ ಉಸ್ತುವಾರಿ ಆಗಿ ಮಾಡಲಾಗಿತ್ತು. ಆಗ ಅಶೋಕ್ ಅವರೇ ಜಿಲ್ಲಾ ಉಸ್ತುವಾರಿ ಆಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇಂದು ಬೆಳಗ್ಗೆ ದಸರಾ ಗಜಪಡೆಗೆ ಚಾಲನೆ ನೀಡುವಾಗ ಸೋಮಣ್ಣ ಅವರು "ಮೈಸೂರಿನ ಉಸ್ತುವಾರಿ ಆರ್. ಅಶೋಕ್ ಆದರೆ ನನಗೆ ಸಂತೋಷ" ಎಂದು ಹೇಳಿದ್ದರು. ಇದೀಗ ಸರ್ಕಾರ ವಿ. ಸೋಮಣ್ಣ ಅವರನ್ನು ಜಿಲ್ಲಾ ಉಸ್ತುವಾರಿ ಆಗಿ ನೇಮಿಸಿ ಆದೇಶ ಹೊರಡಿಸಿದೆ.












Click it and Unblock the Notifications