ಕೆಎಸ್‌ಒಯು ಕೋರ್ಸ್‌ಗಳ ಮಾನ್ಯತೆ ನವೀಕರಣಕ್ಕೆ ಯುಜಿಸಿ ಒಪ್ಪಿಗೆ

ಬೆಂಗಳೂರು, ನವೆಂಬರ್ 05 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 2015-16ನೇ ಸಾಲಿನ ಕೋರ್ಸ್‌ಗಳ ಮಾನ್ಯತೆ ನವೀಕರಣಕ್ಕೆ ಯುಜಿಸಿ ಒಪ್ಪಿಗೆ ನೀಡಿದೆ. ಕೆಲವು ತಿಂಗಳ ಹಿಂದೆ ಯುಜಿಸಿ 2012-13ರ ನಂತರ ಕೆಎಸ್‌ಒಯುದಿಂದ ಪಡೆದ ಎಲ್ಲಾ ಕೋರ್ಸ್‌ಗಳ ಮಾನ್ಯತೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು.

ಕೆಎಸ್‌ಒಯು ಕುಲಪತಿ ಎಂ.ಜಿ. ಕೃಷ್ಣನ್‌ ಅವರು ಈ ಕುರಿತು ಮಾಹಿತಿ ನೀಡಿದ್ದು, 'ಅಕ್ಟೋಬರ್ 28ರಂದು ದೆಹಲಿಯಲ್ಲಿ ನಡೆದ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸಭೆಯಲ್ಲಿ 2015-16 ನೇ ಸಾಲಿಗೆ ಕೆಎಸ್ಒಯು ಕೋರ್ಸ್‌ಗಳ ಮಾನ್ಯತೆ ನವೀಕರಣಕ್ಕೆ ಅನುಮತಿ ದೊರೆತಿದೆ' ಎಂದು ಹೇಳಿದ್ದಾರೆ. [ಕೆಎಸ್ ಒಯು ಮಾನ್ಯತೆ ರದ್ದು ಏಕೆ, ಮುಂದೇನು?]

ksou

'ಯುಜಿಸಿಯ ನಿರ್ದೇಶನದಂತೆ ಹೊರರಾಜ್ಯಗಳ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಒಪ್ಪಂದ, ಆನ್‌ಲೈನ್‌ ಮತ್ತು ತಾಂತ್ರಿಕ ಕೋರ್ಸ್‌ಗಳನ್ನು ಕೆಎಸ್‌ಒಯು ರದ್ದುಗೊಳಿಸಿದೆ. ಈ ಬಗ್ಗೆ ಪ್ರಮಾಣಪತ್ರವನ್ನು ಸಲ್ಲಿಸಲಾಗಿದೆ' ಎಂದು ಕುಲಪತಿಗಳು ಮಾಹಿತಿ ನೀಡಿದರು. [ಹೊರ ರಾಜ್ಯಗಳಲ್ಲಿ ಕೆಎಸ್ ಒಯು ಕೋರ್ಸಿಗೆ ಪ್ರವೇಶವಿಲ್ಲ]

ಆದರೆ, ಕೋರ್ಸ್ ನವೀಕರಣದ ಬಗ್ಗೆ ಯುಜಿಸಿಯಿಂದ ಅಧಿಕೃತವಾದ ಆದೇಶ ಇನ್ನೂ ಹೊರಬಿದ್ದಿಲ್ಲ. 'ಒಂದೆರಡು ದಿನಗಳಲ್ಲಿ ಯುಜಿಸಿಯಿಂದ ಅಧಿಕೃತವಾಗಿ ಪತ್ರ ಬರಲಿದೆ. ಪತ್ರ ತಲುಪಿದ ನಂತರ ಈ ಸಾಲಿನ ಪ್ರವೇಶಾತಿಗೆ ಅಧಿಸೂಚನೆ ಹೊರಡಿಸಲಾಗುವುದು' ಎಂದು ಎಂ.ಜಿ. ಕೃಷ್ಣನ್‌ ತಿಳಿಸಿದರು.

ಪತ್ರ ವ್ಯವಹಾರ ಮುಂದುವರೆದಿದೆ : 2012-13ರ ನಂತರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ (ಕೆಎಸ್‌ಒಯು) ಪಡೆದ ಎಲ್ಲಾ ಕೋರ್ಸ್‌ಗಳ ಮಾನ್ಯತೆಯನ್ನು ರದ್ದುಪಡಿಸಿ ಯುಜಿಸಿ 2015ರ ಜೂನ್‌ನಲ್ಲಿ ಆದೇಶ ಹೊರಡಿಸಿತ್ತು.

ಸದ್ಯ 2015-16ನೇ ಸಾಲಿನ ಕೋರ್ಸ್‌ಗಳ ಮಾನ್ಯತೆ ನವೀಕರಣಕ್ಕೆ ಯುಜಿಸಿ ಅನುಮತಿ ನೀಡಿದೆ. 2012-13, 2014-15ನೇ ಸಾಲಿನ ಕೋರ್ಸ್‌ಗಳಿಗೆ ಮಾನ್ಯತೆ ನೀಡುವ ಕುರಿತು ಯುಜಿಸಿಯೊಂದಿಗೆ ಕೆಎಸ್‌ಒಯು ಪತ್ರ ವ್ಯವಹಾರ ಮುಂದುವರಿದಿದೆ.

ಮಾನ್ಯತೆ ರದ್ದು ಏಕೆ? : ಕೆಎಸ್‌ಒಯು ತನ್ನ ವ್ಯಾಪ್ತಿಯನ್ನು ಮೀರಿ ಹೊರ ರಾಜ್ಯಗಳಲ್ಲಿ ಖಾಸಗಿ ಸಂಸ್ಥೆಗಳು, ಕೋಚಿಂಗ್‌ ಕೇಂದ್ರಗಳ ಸಹಯೋಗದಲ್ಲಿ ದೂರ ಶಿಕ್ಷಣದಡಿ ವಿವಿಧ ಕೋರ್ಸ್‌ಗಳನ್ನು ನಡೆಸುತ್ತಿದೆ. ಮಾನವ ಸಂಪನ್ಮೂಲ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಯುಜಿಸಿ 2012-13ರ ನಂತರ ಕೆಎಸ್‌ಒಯುನಿಂದ ಪಡೆದ ಎಲ್ಲಾ ಕೋರ್ಸ್‌ಗಳ ಮಾನ್ಯತೆಯನ್ನು ರದ್ದುಪಡಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+