Breaking: ವಾಣಿ ವಿಲಾಸ ಮಹಿಳಾ ಕಾಲೇಜಿನ ಬಳಿ ವಿದ್ಯಾರ್ಥಿಗಳ ಮಾರಾಮಾರಿ
ಮೈಸೂರು, ಆಗಸ್ಟ್ 25: ನಗರದ ವಾಣಿವಿಲಾಸ ಮಹಿಳಾ ಕಾಲೇಜು ಸನಿಹದಲ್ಲಿ ಯುವಕರ ಗುಂಪಿನ ನಡುವೆ ಗಲಾಟೆ ನಡೆದಿದ್ದು , ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಹಬದಿಗೆ ಬಂದಿದೆ.
ನಗರದ ನಜರ್ ಬಾದ್‌ನಲ್ಲಿರುವ ವಾಣಿ ವಿಲಾಸ ಮಹಿಳಾ ಕಾಲೇಜಿನಲ್ಲಿ ಗುರುವಾರ ವಾರ್ಷಿಕ ಕಾರ್ಯಕ್ರಮ ಇತ್ತು. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು. ಇದು ಮಹಿಳಾ ಕಾಲೇಜು ಆದರೂ ಇಂದಿನ ಕಾರ್ಯಕ್ರಮಕ್ರಮಕ್ಕೆ ಹುಡುಗರಿಗೂ ಅವಕಾಶ ಕಲ್ಪಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ನಟ ಧನ್ವೀರ್ ಗೌಡ ಆಗಮಿಸಬೇಕಿತ್ತು . ಆದರೆ, ಏಕಾಏಕಿ ಕಾಲೇಜು ಬಳಿ ಯುವಕರ ಗುಂಪಿನ ನಡುವೆ ಗಲಾಟೆ ಆಗಿದೆ. ಆದರೆ, ಗಲಾಟೆಗೆ ಗಲಾಟೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೂಲಗಳ ಪ್ರಕಾರ ಹುಡುಗಿ ವಿಚಾರಕ್ಕೆ ಜಗಳ ನಡೆದಿದೆ ಎಂದು ತಿಳಿದುಬಂದಿದೆ. 100ಕ್ಕೂ ಹೆಚ್ಚು ವಿದ್ಯಾರ್ಥಿಗಳ ನಡುವೆ ಪರಸ್ಪರ ಹೊಡೆದಾಟ ನಡೆದಿದೆ.

ಲಘು ಲಾಠಿ ಪ್ರಹಾರ
ಮೈಸೂರು ನಗರ ಪೊಲೀಸ್ ಕಮೀಷನರ್ ಆಯುಕ್ತರ ಕಚೇರಿ ಸಮೀಪದಲ್ಲೇ ಈ ಘಟನೆ ನಡೆದಿದ್ದು, ವಿದ್ಯಾರ್ಥಿಗಳ ಗುಂಪು ಹೊಡೆದಾಡಿಕೊಂಡಿದ್ದಾರೆ. ಪೊಲೀಸ್ ಆಯುಕ್ತರ ಕಚೇರಿಯ ಕಾಪೌಂಡ್ ಪಕ್ಕದಲ್ಲೇ ಯುವಕನೊಬ್ಬನಿಗೆ ಯುವಕರ ಗುಂಪು ಥಳಿಸುತ್ತಿರುವ ದೃಶ್ಯ ಮೊಬೈಲ್‌ಗಳಲ್ಲಿ ಸೆರೆಯಾಗಿದೆ. ಗಲಾಟೆ ವಿಷಯ ತಿಳಿದು ಸ್ಥಳಕ್ಕಾಗಿಮಿಸಿದ ಪೊಲೀಸರು ಗುಂಪು ಚದುರಿಸಿದ್ದಾರೆ.
ಮೈಸೂರು ನಗರದ ವಾಣಿವಿಲಾಸ ಮಹಿಳಾ ಕಾಲೇಜು ಸನಿಹದಲ್ಲಿ ಯುವಕರ ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ನಗರ ಪೊಲೀಸ್ ಕಮೀಷನರ್ ಆಯುಕ್ತರ ಕಚೇರಿ ಸಮೀಪದಲ್ಲೇ ಈ ಘಟನೆ ನಡೆದಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.#Mysuru #Vanivilascollege #Mysurunews pic.twitter.com/GWlIvU1vbe
— oneindiakannada (@OneindiaKannada) Augus…












Click it and Unblock the Notifications