Get Updates
Get notified of breaking news, exclusive insights, and must-see stories!

ದಸರಾ ತಿಂಗಳಲ್ಲಿ ಮೈಸೂರಿಗೆ ಲಗ್ಗೆ ಇಟ್ಟ 4 ಲಕ್ಷ ಪ್ರವಾಸಿಗರು

ಮೈಸೂರು, ನವೆಂಬರ್ 07: ದಸರಾ ಹಬ್ಬದ ಸಂದರ್ಭದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು ಅರಮನೆ ನಗರಿ ಮೈಸೂರಿಗೆ ಭೇಟಿ ನೀಡಿದ್ದಾರೆ. ಅಂಕಿ ಅಂಶಗಳ ಪ್ರಕಾರ ಒಟ್ಟು 4,11,709 ಪ್ರವಾಸಿಗರು ಭೇಟಿ ನೀಡಿದ್ದಾರೆ.

ವಾರಾಂತ್ಯದ ಜೊತೆಗೆ ದಸರಾ ಹಬ್ಬ ಪ್ರಯುಕ್ತ ಅಕ್ಟೋಬರ್‌ನಲ್ಲಿ ಸಾಲು ಸಾಲು ರಜೆಗಳು ಇದ್ದ ಕಾರಣ ದಾಖಲೆ ಸಂಖ್ಯೆಯ ಪ್ರವಾಸಿಗರು ಮೈಸೂರು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಹಬ್ಬಕ್ಕೂ ತಿಂಗಳಿಗೂ ಮುನ್ನ ಹಾಗೂ ಹಬ್ಬಗಳ ನಂತರ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆ ಆಗುತ್ತಾ ಸಾಗಿದೆ. ಹಬ್ಬದ ನಂತರ ಅಕ್ಟೋಬರ್ 19 ರಂದು 27,643 ಮಂದಿ, ಅಕ್ಟೋಬರ್ 20ರಂದು 4,196 ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ಪೈಕಿ ವಿದೇಶಿಗರ ಸಂಖ್ಯೆ 1,474 ಇದೆ.

ಕೋವಿಡ್ ಭೀತಿ ಕಡಿಮೆಯಾಗಿರುವ ಹಿನ್ನೆಲೆ ಹಾಗೂ ಎಲ್ಲ ಪ್ರವಾಸಿತಾಣಗಳು ಪ್ರವಾಸಿಗರು ಮುಕ್ತವಾಗಿರುವ ಕಾರಣಕ್ಕೆ ಪ್ರವಾಸಿಗರು ನಿರ್ಭೀತಿಯಿಂದ ಆಗಮಿಸುತ್ತಿದ್ದಾರೆ. 2020ರಲ್ಲಿ 45,886 ಪ್ರವಾಸಿಗರು ಅರಮನೆಗೆ ಭೇಟಿ ನೀಡಿದ್ದರೆ,ಇದೇ ಅಕ್ಟೋಬರ್ ತಿಂಗಳ 2021 ರಲ್ಲಿ ಅಂದಾಜು ಸುಮಾರು 1,73,834 ಪ್ರವಾಸಿಗರು ಮೈಸೂರು ಅರಮನೆಯನ್ನು ಕಣ್ತುಂಬಿಕೊಂಡಿದ್ದರು. ಇನ್ನು 2022 ಮೇ ತಿಂಗಳಲ್ಲಿ ಅಧಿಕ 3,69,070 ಜನ ಆಗಮಿಸಿದ್ದರು.

Tourists visited in huge numbers to Mysuru Palace during the month of Dasara festival

ಅರಮನೆಯ ಅಂಕಿ ಅಂಶಗಳ ಪ್ರಕಾರ, ಅಕ್ಟೋಬರ್ 2022 ರಲ್ಲಿ ಅರಮನೆಗೆ ಭೇಟಿ ನೀಡಿದ 4,11,709 ಪ್ರವಾಸಿಗರಲ್ಲಿ 3,34,259 ವಯಸ್ಕರು, 1,474 ವಿದೇಶಿಗರು, 25,878 ವಿದ್ಯಾರ್ಥಿಗಳು ಮತ್ತು 50,098 ಮಕ್ಕಳು ಇದ್ದಾರೆ. ಬೇಸಿಗೆಯ ರಜಾದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಇನ್ನೂ ಹೆಚ್ಚೆ ಎನ್ನಬಹುದು. ಕಳೆದ ಏಪ್ರಿಲ್‌ನಲ್ಲಿ 2.02 ಲಕ್ಷ, ಮೇನಲ್ಲಿ 3.69 ಲಕ್ಷ, ಜೂನ್ ತಿಂಗಳಲ್ಲಿ 2.36 ಲಕ್ಷ, ಜುಲೈ ನಲ್ಲಿ 2.1 ಲಕ್ಷ, ಪ್ರವಾಸಿಗರು ಅರಮನೆಗೆ ಭೇಟಿ ಕೊಟ್ಟಿದ್ದಾರೆ.

ವಾರಂತ್ಯ ಮತ್ತು ಹಬ್ಬದ ಹಿನ್ನೆಲೆ ಸಾಲು ಸಾಲು ರಜೆಗಳಲ್ಲಿ ಹೆಚ್ಚೆಚ್ಚು ಪ್ರವಾಸಿಗರು ಅರಮನೆಗೆ ಬರುತ್ತಾರೆ. ಅಕ್ಟೋಬರ್‌ನಲ್ಲಿ ಸುಮಾರು ಶೇ. 50ರಷ್ಟು ಪ್ರವಾಸಿಗರು ಪಕ್ಕದ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದಿಂದ ಬಂದಿದ್ದರು ಎಂದು ಪ್ರವಾಸೋದ್ಯಮದ ಮಧ್ಯಸ್ಥಗಾರರು ಹೇಳಿದರು.

Tourists visited in huge numbers to Mysuru Palace during the month of Dasara festival

ಕೋವಿಡ್ ಕಾಲದಲ್ಲಿ ನಡೆದ ದಸರಾಗಿಂತಲೂ ಈ ವರ್ಷ ದಸರಾ ಹಬ್ಬದಂದು ಹೆಚ್ಚು ಜನದಟ್ಟಣೆ ಕಂಡು ಬಂದಿದೆ. ವಾರಾಂತ್ಯದ ಸುತ್ತಾಟಕ್ಕಾಗಿ ಪ್ರವಾಸಿಗರು ಈ ಜಿಲ್ಲೆಗೆ ಆಗಮಿಸುವುದು ಹೆಚ್ಚು. ಅರಮನೆ, ಚಾಮುಂಡಿ ಬೆಟ್ಟ ಹಾಗೂ ಇನ್ನಿತರ ಪ್ರದೇಶಗಳನ್ನು ಜನ ಹೆಚ್ಚು ವೀಕ್ಷಣೆ ಮಾಡುತ್ತಾರೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+