ಮೈಸೂರಿನ ಕಲಾಮಂದಿರದಲ್ಲಿ ಮದುವೆ ಹೆಣ್ಣು ನಾಟಕ: ತಪ್ಪದೆ ಬನ್ನಿ
ಬೆಂಗಳೂರು, ಮೇ 11: ಸಮುರಾಯ್ ಕಲ್ಚರಲ್ ಟ್ರಸ್ಟ್ ಹೆಚ್.ಎಸ್.ಶಿವಪ್ರಕಾಶ್ ನಿರ್ದೇಶಿಸಿರುವ 'ಮದುವೆ ಹೆಣ್ಣು ' ನಾಟಕ ಮೇ 13ರಂದು ಮೈಸೂರಿನ ಕಲಾಮಂದಿರದಲ್ಲಿ ನಡೆಯಲಿದೆ.
ಹೆಚ್.ಎಸ್.ಶಿವಪ್ರಕಾಶ್ರ ಮದುವೆ ಹೆಣ್ಣುಜಪಾನಿ ರೌದ್ರ ನಾಟಕ ಪರಂಪರೆಯಾದ ನೋಹ್ ದುರಂತ ಈಗಾಗಲೇ ನಡೆದುಹೋಗಿದೆ. ತದನಂತರ ಆ ದುರಂತವನ್ನು ಇನ್ಯಾವುದೋ ಅವಸ್ಥಾಂತರದಲ್ಲಿ ಪುನರಭಿನಯಿಸುತ್ತಾ ಹುಟ್ಟು ಸಾವು ವಿಧಿಗಳ ಆಚೆಗಿನ ಮಹಾಕರುಣೆ. ಮಹಾಕ್ಷಮೆ, ಶಾಂತಿ ಸ್ವೀಕೃತಿಯ ಸ್ಥಿತಿಯನ್ನು ತಲುಪುತ್ತದೆ. ಪ್ರವೇಶ ಶುಲ್ಕ 50 ರೂ.ನಿಗದಿಪಡಿಸಲಾಗಿದೆ. ಟಿಕೇಟ್‌ಗಳಿಗಾಗಿ 9448871815/ 9964656482 ಸಂಪರ್ಕಿಸಬಹುದು.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಭಾನ್ವಿತ ರಂಗ ನಿರ್ದೇಶಕ ಪಬಿತ್ರಾ ರಾಭಾ(ಅಸ್ಸಾಂ) ಅವರು ನಿರ್ದೇಶಿಸಿರುವ ಹೆಚ್.ಎಸ್.ಶಿವಪ್ರಕಾಶ್ ಅವರ ನಾಟಕ ಮದುವೆ ಹೆಣ್ಣು ಇದೇ ಮೇ ತಿಂಗಳ 13ನೇ ತಾರೀಖು ಭಾನುವಾರ ಕಲಾಮಂದಿರದಲ್ಲಿ ಸಂಜೆ 7ಗಂಟೆಗೆ ಪ್ರದರ್ಶನಗೊಳ್ಳಲಿದೆ.

ನಿರ್ದೇಶಕರ ಬಗ್ಗೆ: ಮೂಲತ: ಅಸ್ಸಾಮಿನವರಾದ ಶ್ರೀಯುತ ಪಬಿತ್ರಾ ರಾಭಾ ರವರು 31 ಜನವರಿ 1976 ರಂದು ಅಸ್ಸಾಮಿನ ಬೋಡೋ ಜಿಲ್ಲೆಯ ಒಂದು ಪುಟ್ಟ ಗ್ರಾಮದಲ್ಲಿ ಜನಿಸಿದರು. ಇವರು ದೇಶದ ಪ್ರತಿಷ್ಠಿತ ರಂಗಶಾಲೆಯಾದ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮ ನಲ್ಲಿ ಉನ್ನತ ಶಿಕ್ಷಣವನ್ನು ಪಡೆದರು.
ಅಭಿನಯದಲ್ಲಿ ಅಪಾರವಾದ ಪ್ರೌಢಿಮೆಯನ್ನು ಹೊಂದಿದ್ದರೂ ಕೇವಲ ಅಭಿನಯಕ್ಕಷ್ಟೇ ಸೀಮಿತವಾದ ರಂಗಭೂಮಿಯ ಎಲ್ಲ ವಿಭಾಗಗಳಲ್ಲೂ ಅತ್ಯಂತ ಆಸಕ್ತಿ ಹೊಂದಿರುವ ಇವರು ಅನೇಕ ನಾಟಕಕಗಳನ್ನು ದೇಶದ ವಿವಿದ ಭಾಷೆಗಳಲ್ಲಿ ನಿರ್ದೇಶಿಸಿದ್ದಾರೆ. ಇವರು 2003ರಲ್ಲಿ ದಾಪೋನ್ ದ ಮಿರರ್ ಎಂಬ ಸಾಮಾಜಿಕ ಕಲಾತಂಡವನ್ನು ಸ್ಥಾಪಿಸಿದ್ದಾರೆ.
ಇದು ಪ್ರಪಂಚದ ಏಕೈಕ ಕುಬ್ಜರ ರಂಗತಂಡವಾಗಿದೆ. ಇವರು ಸಾಧನೆಗೆ ಉಸ್ತಾದ್ ಬಿಸ್ಮಿಲ್ಲಾಖಾನ್ ಯುವ ಪುರಸ್ಕಾರ್, ರಿಲಯನ್ಸ್ ಫೌಡೇಶನ್ ಸಿ ಎನ್ ಎನ್ ಐ ಬಿ ಎನ್ ರಿಯಲ್ ಹೀರೊ ಅವಾರ್ಡ ಮತ್ತು ಜೂನಿಯರ್ ಫೆಲೋಷಿಪ್ ಮತ್ತಿತರ ಪ್ರಶಸ್ತಿಗಳು ಸಂದಿವೆ.
ನಾಟಕ: ಮದವೆ ಹೆಣ್ಣು
ರಚನೆ: ಹೆಚ್.ಎಸ್.ಶಿವಪ್ರಕಾಶ್
ವಿನ್ಯಾಸ ಮತ್ತು ನಿರ್ದೇಶನ: ಪಬಿತ್ರಾ ರಾಭಾ(ಅಸ್ಸಾಂ)
ತಂಡ: ಥಿಯೇಟರ್ ಸಮುರಾಯ್ ಕಲ್ಚರಲ್ ಟ್ರಸ್ಟ್(ರಿ)
ದಿನಾಂಖ: 13-05-2018 ಸಂಜೆ 7ಕ್ಕೆ
ಸ್ಥಳ: ಕಲಾಮಂದಿರ, ಮೈಸೂರು












Click it and Unblock the Notifications