ಆನೆ ಅರ್ಜುನನ ಸಾವಿಗೆ ಕಾರಣ ಹೇಳಿದ ಅರಣ್ಯ ಅಧಿಕಾರಿ
ಮೈಸೂರು, ಡಿಸೆಂಬರ್ 11: ಅಂಬಾರಿ ಆನೆ ಅರ್ಜುನನ ಸಾವಿಗೆ ಇಡೀ ಕರುನಾಡೇ ಕಂಬನಿ ಮಿಡಿದಿದೆ. ಅರಣ್ಯ ಇಲಾಖೆ ವೈಜ್ಞಾನಿಕವಾಗಿ ಶಿಸ್ತುಬದ್ಧವಾಗಿ ಕಾರ್ಯಾಚರಣೆ ನಡೆಸದ ಪರಿಣಾಮ ಅರ್ಜುನ ಮೃತಪಡಬೇಕಾಗಿ ಬಂತು ಎಂಬ ಮಾತುಗಳು ಕೇಳಿ ಬರುತ್ತಿದೆ. ಇದೀಗ ಅಂದು ಕಾರ್ಯಾಚರಣೆಯಲ್ಲಿದ್ದ ಪಶು ವೈದ್ಯ ಡಾ.ರಮೇಶ್, ಅರ್ಜುನನ ಮೇಲೆ ಕಾಡಾನೆ ದಾಳಿಯನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಗುಂಡೇಟಿನಿಂದ ಆತ ಮೃತಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅರ್ಜುನ ಆನೆ ನನ್ನ ನೆಚ್ಚಿನ ಆನೆ. ಕಾರ್ಯಾಚರಣೆ ವೇಳೆ ಹಠಾತ್ತನೆ ಕಾಡಾನೆ ದಾಳಿ ಮಾಡಿತು. ಏಕಾಏಕಿ ಅರ್ಜುನನ ಕುತ್ತಿಗೆ ಭಾಗಕ್ಕೆ ತಿವಿಯಿತು. 5 ನಿಮಿಷ ಆನೆಗಳ ಮಧ್ಯೆ ಕಾಳಗ ನಡೆಯಿತು. ನಾವು ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲಘಿ ಎಂದು ಆ ದಿನದ ಘಟನೆಯನ್ನು ನೆನಪು ಮಾಡಿಕೊಂಡರು.

ಸಾಮಾನ್ಯವಾಗಿ ನಮಗೆ ಡಬ್ಬಲ್ ಬ್ಯಾರೆಲ್ ಗನ್ ಕೊಟ್ಟಿರುತ್ತಾರೆ ನಿಜ. ಆದರೆ, ನಾವು ಅದನ್ನು ಗಾಳಿಯಲ್ಲಿ ಗುಂಡು ಹಾರಿಸಬೇಕು ಅಷ್ಟೇಘಿ. ನೇರವಾಗಿ ಯಾವ ಪ್ರಾಣಿಗೂ ಹೊಡೆಯುವಂತಿಲ್ಲ. ಹಾಗೆ ನೋಡಿದರೆ ನಾವು ಗನ್ ಬಳಸಿಲ್ಲಘಿ. ಅದು ಗುಂಡೇಟಿನಿಂದ ಅರ್ಜುನ ಸಾಯಲಿಲ್ಲಘಿ. ಹಠಾತ್ತನೆ ಕಾಡಾನೆ ಅರ್ಜುನನ ಮೇಲೆ ದಾಳಿ ನಡೆಸಿತು. ನಮ್ಮ ಕಣ್ಣೆದುರಿಗೆ ಅರ್ಜುನ ನೆಲಕ್ಕೊರಗಿದ್ದು ಕಂಡು ಆಘಾತವಾಯಿತು ಎಂದು ಬೇಸರ ಹೊರ ಹಾಕಿದರು.
ಅರ್ಜುನನ ಕಾಲಿಗೆ ಕಾಡಾನೆಯೊಂದಿಗಿನ ಕಾಳಗದ ವೇಳೆ ಚೂಪಾದ ಮರದ ತುಂಡು ತಗುಲಿ ಅದರ ಉಗುರಿನ ಬಳಿ ರಕ್ತ ಕಾಣಿಸಿಕೊಂಡಿದೆ ಎಂದು ಕಾಳಗ ನಡೆಯುತ್ತಿದ್ದಾಗಲೇ ಮಾವುತ ತಿಳಿಸಿದ್ದ. ಹೀಗಾಗಿ ಅದು ಗುಂಡೇಟಿನಿಂದ ಆದ ಗಾಯ ಅಲ್ಲ ಎಂದು ಸ್ಪಷ್ಟಪಡಿಸಿದರು.
ಯಸಳೂರು ಭಾಗದಲ್ಲಿ ಕಾಡಾನೆ ಹೆಚ್ಚು ಉಪಟಳ ನೀಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಶುರು ಮಾಡಲಾಗಿತ್ತು. ವಿಕ್ರಾಂತ್ ಎಂಬ ಆನೆ ಹಾಗೂ ಉದ್ದದ ದಂತವಿರುವ ಮತ್ತೊಂದು ಆನೆಯನ್ನು ಉಪಟಳ ನೀಡುತ್ತಿದ್ದ ಆನೆಗಳೆಂದು ಗುರುತಿಸಲಾಗಿತ್ತು. ಅವುಗಳನ್ನು ಸೆರೆ ಹಿಡಿಯಲು ೆಟೋಗಳನ್ನೂ ಕೂಡ ನಮಗೆ ನೀಡಲಾಗಿತ್ತು. ಆ ಎರಡು ಆನೆಗಳ ಸೆರೆಗಾಗಿಯೇ ನಮ್ಮ ಕಾರ್ಯಾಚರಣೆ ನಡೆದಿತ್ತು. ನ.23ರಿಂದ ನಾವು ಕಾರ್ಯಾಚರಣೆ ಶುರು ಮಾಡಿದ್ದೆವು. ಅದರಲ್ಲಿ 6 ಆನೆಗಳನ್ನು ಹಿಡಿದು ಅದಕ್ಕೆ ರೇಡಿಯೋ ಕಾಲರ್ ಹಾಕಲಾಗಿತ್ತು ಎಂದು ತಿಳಿಸಿದರು.
ಈ ಕಾಳಗದಲ್ಲಿ ಅರ್ಜುನ ಕಾಡಾನೆಯನ್ನು ಓಡಿಸಿತು. ಈ ಸಂದರ್ಭದಲ್ಲಿ ಅರ್ಜುನನ ಮೇಲಿದ್ದ ನಾವು ಕೆಳಗೆ ಬೀಳುವಂತಾಗಿ ನಾನು ಒಂದು ಕೈಯಲ್ಲಿ ಹಗ್ಗ ಹಾಗೂ ಮತ್ತೊಂದು ಕೈಯಲ್ಲಿ ಅರಿವಳಿಕೆ ಶೂಟ್ ಮಾಡುವ ಗನ್ ಹಿಡಿದುಕೊಂಡು ಹೋರಾಡುತ್ತಿದ್ದೆ. ಈ ಸಂದರ್ಭದಲ್ಲಿ ಅರಿವಳಿಕೆ ಚುಚ್ಚುಮದ್ದು ನೀಡುವ ಗನ್ ಸೇಫ್ಟಿ ಬಟನ್ ಓಪನ್ ಆಗಿ ಟ್ರಿಗರ್ ಪ್ರೆಸ್ ಆಗಿದೆ.
ಆ ವೇಳೆ ಮೇಲಕ್ಕೆ ಹಾರಿದ ಚುಚ್ಚುಮದ್ದು ಕೆಳಕ್ಕೆ ಬೀಳುವಾಗ ಮತ್ತೊಂದು ಬದಿಯಲ್ಲಿ ನಿಂತಿದ್ದ ಪ್ರಶಾಂತ್ ಕಾಲಿಗೆ ಚುಚ್ಚಿದೆ. ಡಿಆರ್‌ಒ ರಂಜನ್ ಅವರು ಕರೆ ಮಾಡಿ ಹೇಳಿದಾಗಲೇ ಈ ವಿಷಯ ನನಗೆ ಗೊತ್ತಾಗಿದ್ದು, ತಕ್ಷಣವೇ ರಿವರ್ಸ್ ಇಂಜೆಕ್ಷನ್ ನೀಡಿದ್ದರಿಂದ ಎರಡು ನಿಮಿಷದಲ್ಲಿ ಪ್ರಶಾಂತ ಸಾಮಾನ್ಯ ಸ್ಥಿತಿಗೆ ಬಂದ ಎಂದು ವಿವರಿಸಿದರು.












Click it and Unblock the Notifications