ಪ್ರೋಟೋಕಾಲ್ ನಲ್ಲಿ ಹೆಸರಿಲ್ಲದಿದ್ದರೂ ದಸರಾ ವೇದಿಕೆ ಏರಿದರು ಆ ಮಹಿಳೆ!

Recommended Video

      Mysore Dasara 2018 : ಕಾರ್ಯಕ್ರಮದ ಪ್ರೋಟೋಕಾಲ್ ನಲ್ಲಿ ಹೆಸರಿಲ್ಲದಿದ್ರೂ ಆ ಅಪರಿಚಿತ ಮಹಿಳೆ ವೇದಿಕೆ ಏರಿದ್ದು ಹೇಗೆ

      ಮೈಸೂರು, ಅಕ್ಟೋಬರ್. 10: ನಾಡಹಬ್ಬ ದಸರೆ ವೀಕ್ಷಣೆಗೆ ದೇಶ ವಿದೇಶದಿಂದ ಜನರು ಆಗಮಿಸುತ್ತಾರೆ. ಅವರೆಲ್ಲರೂ ದಸರಾ ವೈಭವವನ್ನು ಕಣ್ತುಂಬಿಕೊಳ್ಳಬೇಕೆಂಬ ಕುತೂಹಲದಿಂದ ತುದಿಗಾಲಲ್ಲಿ ನಿಂತಿರುತ್ತಾರೆ.

      ಅಂದಹಾಗೆ ದಸರೆಯ ವೇಳೆ ಸೂಕ್ತ ಭದ್ರತೆ ಕೂಡ ಕೈಗೊಳ್ಳಲಾಗುತ್ತದೆ. ಯಾರಿಗೂ ಸಹ ಕಾರ್ಯಕ್ರಮದ ವೇದಿಕೆಯ ಬಳಿ ಬರಲು ಬಿಡುವುದಿಲ್ಲ. ಅಂತಹದ್ದರಲ್ಲಿ ದಸರೆ ಉದ್ಘಾಟನೆಯ ವೇಳೆ ಅಪರಿಚಿತವೆನಿಸಿದ ಮಹಿಳೆಯೋರ್ವರು ದಸರೆ ಉದ್ಘಾಟನೆ ಸಮಯ ಹಾಗೂ ವೇದಿಕೆಯ ಮೊದಲ ಸಾಲಿನಲ್ಲಿ ಕಂಡುಬಂದರು. ಅವರು ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಿತು.

      ಪ್ರೋಟೋಕಾಲ್ ಪ್ರಕಾರ ದಸರಾ ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಿದ ಹೆಸರಿನ ಮುಖಂಡರು, ನಾಯಕರು, ಗಣ್ಯರೇ ವೇದಿಕೆಗೆ ಆಗಮಿಸರಲಿಲ್ಲ. ಅಂತಹದ್ದರಲ್ಲಿ ಓರ್ವ ಮಹಿಳೆ ವೇದಿಕೆ ಮೇಲೆ ಹತ್ತಿ ಬಂದಿದ್ದರು. ಅವರು ಬೇರೇ ಯಾರು ಅಲ್ಲ, ಬೆಂಗಳೂರಿನ ಚರ್ಮ ರೋಗ ತಜ್ಞೆ ವೈದ್ಯೆ ಸುಮಾ ಕೃಪಾ ಶಂಕರ್.

      That Women name not mentioned in protocol

      ಅವರ ಹೆಸರು ಕೂಡ ಆಮಂತ್ರಣ ಪತ್ರಿಕೆಯಲ್ಲಿರಲಿಲ್ಲ. ಆದರೂ ವೇದಿಕೆಯ ಮೇಲಿದ್ದರು. ಸುಧಾಮೂರ್ತಿಯವರೊಂದಿಗೆ ಬಂದಿರಬಹುದೆಂದುಕೊಂಡ ಹಲವರು ಸುಮ್ಮನಿದ್ದರು.

      That Women name not mentioned in protocol

      ಆದರೆ ಎಲ್ಲರಿಗೂ ಕೊರೆಯುತ್ತಿದ್ದ ಪ್ರಶ್ನೆಯೆಂದರೆ ಸುಧಾಮೂರ್ತಿಯವರ ಪತಿ ನಾರಾಯಣ ಮೂರ್ತಿಯವರೇ ವೇದಿಕೆಯ ಮೇಲಿರಲಿಲ್ಲ. ಆದರೆ ಇವರು ಬಂದಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಸಂಘಟಕರ ಬಳಿ ಪ್ರಶ್ನಿಸಿದರೇ ಹಾರಿಕೆಯ ಉತ್ತರ ನೀಡಿದರು. ಮುಂದಾದರೂ ಆಯೋಜಕರು ಇಂತಹ ಅಚಾತುರ್ಯವನ್ನು ಮರುಕಳಿಸದಂತೆ ನಡೆದುಕೊಳ್ಳಬೇಕಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+