ಮೈಸೂರಲ್ಲಿ ಪವಿತ್ರಾ ಲೋಕೇಶ್, ನರೇಶ್ ಪ್ರತ್ಯಕ್ಷ್ಯ: ರಮ್ಯ ರಂಪಾಟ

ಮೈಸೂರು, ಜುಲೈ 3: ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಕಾಣಿಸಿಕೊಂಡ ಪವಿತ್ರ ಲೋಕೇಶ್ ಹಾಗೂ ನರೇಶ್ ರನ್ನು ಅಡ್ಡಗಟ್ಟಿದ ನರೇಶ್ ಹಾಲಿ ಪತ್ನಿ ರಮ್ಯ ರಂಪಾಟ ನಡೆಸಿರುವ ಘಟನೆ ಭಾನುಬಾರ ಬೆಳಗ್ಗೆ ನಡೆದಿದೆ.

ಹುಣಸೂರು ರಸ್ತೆಯಲ್ಲಿರುವ ಹೋಟೆಲ್ ಒಂದರಲ್ಲಿ ಟಾಲಿವುಡ್ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್‌ ಒಂದೇ ಕೊಠಡಿಯಲ್ಲಿದ್ದರು. ಹಾಗಾಗಿ ರಾತ್ರಿ ಪೂರ್ತಿ ಮಾಧ್ಯಮದವರೊಂದಿಗೆ ಹೋಟೆಲ್ ಕೋಣೆಯ ಮುಂದೆ ರಮ್ಯಾ ರಘಪತಿ ಕಾದು ಕುಳಿತಿದ್ದರು. ಈ ವೇಳೆ ಎಷ್ಟು ಬೆಲ್ ಮಾಡಿದರೂ ಅವರಿಬ್ಬರು ಹೊರ ಬರಲಿಲ್ಲ.‌ ಕೊನೆಗೆ ಪವಿತ್ರ ಲೋಕೇಶ್ ಹಾಗೂ ನರೇಶ್ ಪೊಲೀಸ್ ಭದ್ರತೆಯಲ್ಲಿ ಹೋಟೆಲ್ ನಿಂದ ಹೊರಬಂದರು.

ಭಾನುವಾರ ಪೊಲೀಸ್ ಭದ್ರತೆಯಲ್ಲಿ ನರೇಶ್, ಪವಿತ್ರಾ ಹೊರ ಬರುತ್ತಿದ್ದಂತೆ ರಮ್ಯಾ ಚಪ್ಪಲಿಯಲ್ಲಿ ಹಲ್ಲೆ ಮಾಡಲು ಮುಂದಾದರು. ಅದರೆ ಪೊಲೀಸರು ರಮ್ಯಾರನ್ನು ತಡೆದರು. ಆದರೂ ಪವಿತ್ರಾ ಲೋಕೇಶ್ ಹಾಗೂ ನರೇಶ್‌ಗೆ ರಮ್ಯಾ ಅವಾಚ್ಯ ಶಬ್ಧಗಳಿಂದ ನಿಂದಿಸಿದರು.

ಇತ್ತ ಹೋಟೆಲ್ ರೂಮಿನಿಂದ ನರೇಶ್ ಹೊರಬರುತ್ತಿದ್ದಂತೆ ವಿಚಿತ್ರವಾಗಿ ನೃತ್ಯ ಮಾಡುತ್ತಲೇ ಲಿಫ್ಟ್ ಕಡೆ ತೆರಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನರೇಶ್ ನೀನೊಬ್ಬಳು ಮೋಸಗಾತಿ, ವಂಚಕಿ ಎಂದು ಜೋರಾಗಿ ಕಿರುಚುತ್ತಾ ವಿಜಲ್ ಹೊಡೆದುಕೊಂಡು ಹೋದರು.

ಪೊಲೀಸ್ ಠಾಣೆಯಲ್ಲಿ ಪವಿತ್ರಾ ಲೋಕೇಶ್ ಪ್ರತ್ಯಕ್ಷ

ಪೊಲೀಸ್ ಠಾಣೆಯಲ್ಲಿ ಪವಿತ್ರಾ ಲೋಕೇಶ್ ಪ್ರತ್ಯಕ್ಷ

ನರೇಶ್ ಜೊತೆಗಿನ ಸಂಬಂಧದಿಂದ ವಿವಾದಕ್ಕೊಳಗಾಗಿರುವ ನಟಿ ಪವಿತ್ರಾ ಲೋಕೇಶ್ ಶನಿವಾರ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದಿಢೀರ್ ಪ್ರತ್ಯಕ್ಷರಾಗಿದ್ದರು.‌ ಇವರ ನಡೆ ತೀವ್ರ ಕುತೂಹಲಕ್ಕೆಡೆ ಮಾಡಿಕೊಟ್ಟಿತ್ತು. ಸುಮಾರು ಒಂದು ಗಂಟೆ ಕಾಲ ಪೊಲೀಸ್ ಠಾಣೆಯಲ್ಲಿದ್ದ ನಟಿ ಪವಿತ್ರಾ ಲೋಕೇಶ್ ಆ ಬಳಿಕ ಠಾಣೆಯಿಂದ ಹೊರಟಿದ್ದರು. ಈ ವೇಳೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಎರಡು ವರ್ಷ ಮಾತ್ರ ಅನ್ಯೋನ್ಯವಾಗಿದ್ದರು

ಎರಡು ವರ್ಷ ಮಾತ್ರ ಅನ್ಯೋನ್ಯವಾಗಿದ್ದರು

ಮೈಸೂರಿನಲ್ಲಿ ನರೇಶ್ ಜೊತೆಗೆ ಮಾತನಾಡಿದ ರಮ್ಯಾ, "ನರೇಶ್ ನನ್ನನ್ನು ಮದುವೆಯಾದ ಮೇಲೆ ಎರಡು ವರ್ಷಗಳ ಕಾಲ ಮಾತ್ರ ನನ್ನ ಜೊತೆಗೆ ಅನ್ಯೋನ್ಯವಾಗಿದ್ದರು. ಆದರೆ ಬಳಿಕ ನನಗೆ ತೊಂದರೆ ಕೊಡಲು ಶುರು ಮಾಡಿದರು. ಆದರೂ ನಾನು ಅದನ್ನೆಲ್ಲಾ ಸಹಿಸಿಕೊಂಡು ಬಂದಿದ್ದೆ. ನನ್ನ ಮಗನಿಗೋಸ್ಕರ ಅವರ ನೀಡಿದ ಕಷ್ಟಗಳನ್ನು ನಾನು ಅನುಭವಿಸಿದ್ದೆ. ಆದರೆ ಈಗ ನನಗೆ ಡಿವೋರ್ಸ್ ನೊಟೀಸ್ ಕಳುಹಿಸಿದ್ದಾರೆ. ಆದರೆ ನಾನು ಯಾವುದೇ ಕಾರಣಕ್ಕೂ ಡಿವೋರ್ಸ್ ನೀಡುವುದಿಲ್ಲ, ನ್ಯಾಯಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಡೈಮಂಡ್ ನೆಕ್ಲೆಸ್ ವಿವಾಧ

ಡೈಮಂಡ್ ನೆಕ್ಲೆಸ್ ವಿವಾಧ

"ಪವಿತ್ರಾ ಲೋಕೇಸ್‌ ಇತ್ತೀಚೆಗೆ ಧರಿಸಿದ್ದ ಡೈಮಂಡ್ ನೆಕ್ಲೆಸ್‌ ನನ್ಮ ಅತ್ತೆ ಅವರುದು. ಅವರು 2014ರಲ್ಲಿ ಅದನ್ನು ಖರೀದಿಸಿದ್ದರು. ನಮ್ಮತ್ತೆ ಪ್ರತಿ ಜನ್ಮದಿನಕ್ಕೂ ಚಿನ್ನಾಭರಣ ಖರೀದಿಸುತ್ತಿದ್ದರು. ಪವಿತ್ರಾ ಧರಿಸಿದ್ದ ನಮ್ಮ ಅತ್ತೆಯ ನೆಕ್ಲೇಸ್, ನಾನು ಅದು ನಮ್ಮತ್ತೆ ಬಳಿಯಿದ್ದಾಗ ನೋಡಿದ್ದೇನೆ" ಎಂದು ರಮ್ಯಾ ಆರೋಪ ಮಾಡಿದ್ದರು.

ನನ್ನ ಎಲ್ಲಾ ಆಸ್ತಿಗೆ ದಾಖಲೆಗಳಿವೆ

ನನ್ನ ಎಲ್ಲಾ ಆಸ್ತಿಗೆ ದಾಖಲೆಗಳಿವೆ

ಈ ಆರೋಪವನ್ನು ಅಲ್ಲಗೆಳೆದಿರುವ ಪವಿತ್ರಾ ಲೋಕೇಶ್, "ನಾನೊಬ್ಬಳು ನಟಿ, ನನಗೆ ಬೇಕಾದ ವಸ್ತುಗಳನ್ನು ಖರೀದಿಸುವ ಶಕ್ತಿ ನನಗಿದೆ. ಕೇವಲ ಚಿನ್ನಾಭರಣ ಮಾತ್ರವಲ್ಲ, ನಾನು ಆಸ್ತಿಯನ್ನು ಮಾಡಿದ್ದೇನೆ. ಫ್ಲಾಟ್‌, ಸೈಟ್‌ಗಳನ್ನು ನಾನು ಖರೀದಿಸಿದ್ದೇನೆ. ಇವೆಲ್ಲಕ್ಕೆ ನನ್ನ ಬಳಿ ದಾಖಲೆಗಳಿವೆ . ನಾನು ಚಿನ್ನಾಭರಣಗಳನ್ನು ಬೆಂಗಳೂರಿನಲ್ಲೇ ಖರೀದಿಸುತ್ತೇನೆ. ಇದನ್ನು ನನಗೆ ಯಾರೂ ಉಡುಗೊರೆ ನೀಡಿಲ್ಲ" ಎಂದು ಹೇಳಿದ್ದಾರೆ.

Recommended Video

      ಮೆಕ್ಸಿಕೋದಲ್ಲಿ ಇದೇ ಕಾರಣಕ್ಕೆ ಮೇಯರ್ ಮೊಸಳೆನ ಮದುವೆ ಆಗಿರೋದು !! | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+