Get Updates
Get notified of breaking news, exclusive insights, and must-see stories!

ಟಿ ನರಸೀಪುರ ಕಾಂಗ್ರೆಸ್‌ ಅಭ್ಯರ್ಥಿ ವಿವರ, ಇಲ್ಲಿದೆ ಮಾಹಿತಿ

ಟಿ ನರಸೀಪುರ, ಮಾರ್ಚ್‌ 25: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ 124 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅದರಂತೆ ಟಿ ನರಸೀಪುರದಲ್ಲಿ ಮಾಜಿ ಸಚಿವ ಎಚ್ ಸಿ ಮಹದೇವಪ್ಪಗೆ ಟಿಕೆಟ್‌ ನೀಡಲಾಗಿದೆ.

ಟಿ ನರಸೀಪುರದಿಂದ ಮಾಜಿ ಸಚಿವ ಎಚ್ ಸಿ ಮಹದೇವಪ್ಪ ನಿಲ್ಲುವ ಯೋಚನೆ ಇರಲಿಲ್ಲ. 2018ರ ಕಳೆದ ವಿಧಾನಸಭಾ ಚುನಾವಣೆಯಲ್ಲೂ ಎಚ್‌ಸಿ ಎಚ್ ಸಿ ಮಹದೇವಪ್ಪ ಇಲ್ಲೇ ನಿಂತು ಸೋತಿದ್ದರು. ಹೀಗಾಗಿ ತಾವು ಈ ಬಾರಿ ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಯಕೆ ಹೊಂದಿದ್ದರು.

T Narsipur Assembly Constituency Details of Congress candidate, here is the information

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌ ಧ್ರುವನಾರಾಯಣ್‌ ಅವರು ಈ ವಿಧಾನಸಭಾ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದ ಸ್ಪರ್ಧೆ ಮಾಡುವ ಆಕಾಂಕ್ಷೆ ಹೊಂದಿದ್ದರು. ಆದರೆ ಅಕಾಲಿಕವಾಗಿ ನಿಧನ ಹೊಂದಿದರು. ಹೀಗಾಗಿ ಕಾರ್ಯಕರ್ತರ ಒತ್ತಾಸೆಯ ಮೇರೆಗೆ ಧ್ರುವನಾರಾಯಣ್‌ ಅವರ ಮಗ ದರ್ಶನ್‌ಗೆ ಈಗ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ.

ಹೀಗಾಗಿ ನಂಜನಗೂಡಿನಿಂದ ಸ್ಪರ್ಧೆ ಮಾಡುವ ನಿರ್ಧಾರ ಕೈಬಿಟ್ಟ ಎಚ್ ಸಿ ಮಹದೇವಪ್ಪ ಅವರು ಟಿ ನರಸೀಪುರದಿಂದ ಸ್ಪರ್ಧೆ ಮಾಡುವ ನಿರ್ಧಾರ ಮಾಡಿದರು. ಇದಕ್ಕೂ ಮೊದಲು ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ನಿರ್ಧಾರ ಮಾಡಿದ್ದರು. ನಂಜನಗೂಡಿನಿಂದ ತಾನು ನಿಂತು ಟಿ ನರಸೀಪುರದಿಂದ ತಮ್ಮ ಪುತ್ರ ಸುನೀಲ್‌ ಬೋಸ್‌ಗೆ ಟಿಕೆಟ್‌ ಕೊಡಿಸುವ ಪ್ರಯತ್ನವನ್ನು ಮಹದೇವಪ್ಪ ಮಾಡಿದ್ದರು.

T Narsipur Assembly Constituency Details of Congress candidate, here is the information

ಸಿದ್ದರಾಮಯ್ಯ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವ ಆಗಿದ್ದ ಎಚ್‌ಸಿ ಮಹದೇವಪ್ಪ ಕಳೆದ 2018 ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಅಶ್ವಿನ್‌ ಕುಮಾರ್‌ ವಿರುದ್ಧ ಸೋಲು ಕಂಡಿದ್ದರು. ಚುನಾವಣೆಗೂ ಮುನ್ನ ಮಹಾದೇವಪ್ಪರೆ ಗೆಲ್ಲುತ್ತಾರೆ ಎಂದು ಭಾವಿಸಲಾಗಿತ್ತು. ಅದರೆ ಕೊನೆಯಲ್ಲಿ ಫಲಿತಾಂಶವೇ ಬೇರೆ ಆಯಿತು. ಆದ್ದರಿಂದ ಈ ಬಾರಿ ತಾವು ನಂಜನಗೂಡಿನಿಂದ ನಿಂತು ತಮ್ಮ ಮಗ ಸುನೀಲ್‌ ಬೋಸ್‌ಗೆ ಟಿ ನರಸೀಪುರದಲ್ಲಿ ಟಿಕೆಟ್‌ ಕೊಡಿಸಲು ಅವರು ಭಾರೀ ಪ್ರಯತ್ನವನ್ನು ಮಾಡಿದ್ದರು.

ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ತಮ್ಮ ಆಪ್ತರಾಗಿರುವ ಎಚ್ ಸಿ ಮಹದೇವಪ್ಪರಿಗೆ ನಂಜನಗೂಡಿನಿಂದ ಟಿಕೆಟ್‌ ಕೊಡಿಸಲು ಬೆಂಬಲ ನೀಡಿದ್ದರು ಎನ್ನಲಾಗಿತ್ತು. ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಸಿಗದಿದ್ದರೆ ತನ್ನ ರಾಜಕೀಯ ಭವಿಷ್ಯ ಕಷ್ಟ ಎಂಬುದು ಸುನೀಲ್ ಬೋಸ್ ವಾದವಾಗಿತ್ತು. ಹಾಗಾಗಿ ಎಚ್ ಸಿ ಮಹದೇವಪ್ಪ ಅಕ್ಕಪಕ್ಕ ಕ್ಷೇತ್ರಗಳ ಟಿಕೆಟ್ ಸಿಕ್ಕರೆ ಟಿ.ನರಸೀಪುರ, ನಂಜನಗೂಡು ಕ್ಷೇತ್ರಗಳ ಮೇಲೆ ಕಣ್ಣು ಇಟ್ಟು ಕುಳಿತಿದ್ದರು.

ಆದರೆ ನಂಜನಗೂಡು ಕ್ಷೇತ್ರದ ಮೇಲೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಕಣ್ಣಿಟ್ಟಿದ್ದರು. ಈ ನಡುವೆ ಅಕ್ಕಪಕ್ಕದ ಕ್ಷೇತ್ರಗಳಲ್ಲೇ ಅಪ್ಪ ಮಕ್ಕಳಿಗೆ ಟಿಕೆಟ್ ಕೊಡುವ ಬಗ್ಗೆ ಕಾಂಗ್ರೆಸ್‍ನಲ್ಲಿ ಕೆಲವರಿಂದ ಆಕ್ಷೇಪ ವ್ಯಕ್ತವಾಗಿತ್ತು. ಇದು ಮತ್ತೆ ಕುಟುಂಬ ರಾಜರಾರಣಕ್ಕೆ ಎಂದು ಬಿಜೆಪಿ ಸೇರಿದಂತೆ ಅನೇಕ ಪಕ್ಷಗಳ ಟೀಕೆಗೆ ಗುರಿಯಾಗಬೇಕಾಗುತ್ತದೆ ಎನ್ನಲಾಗಿತ್ತು.

ಈಗ ಟಿ ನರಸೀಪುರದಿಂದ ಎಚ್ ಸಿ ಮಹದೇವಪ್ಪ ನಿಂತರೂ ಅವರ ಗೆಲುವು ಅಷ್ಟು ಸುಲಭವಾಗಿಲ್ಲ. ಕಾರಣ ಇಲ್ಲಿ ಹಾಲಿ ಶಾಸಕ ಜೆಡಿಎಸ್‌ನ ಅಶ್ವಿನಿ ಕುಮಾರ್‌ ಅವರು ಕ್ಷೇತ್ರದಲ್ಲಿ ತಮ್ಮದೇ ಆದ ಐಡೆಂಟಿಟಿ ಹೊಂದಿದ್ದು, ಜನರಿಗೆ ಹೆಚ್ಚು ನಿಲುಕುವಂತಾರಾಗಿದ್ದಾರೆ. ಈ ಬಾರಿಯೂ ಅವರು ತಮ್ಮ ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಮೇಲೆ ಒತ್ತಡ ತಂದು ಕೆಲವು ಕೆಲಸಗಳನ್ನು ಮಾಡಿಸಿಕೊಂಡಿದ್ದಾರೆ. ಅವರನ್ನು ಈ ಬಾರಿ ಮಹಾದೇವಪ್ಪ ಮಣಿಸುತ್ತಾರಾ ನೋಡಬೇಕಿದೆ.

ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿಯು ಬಿಡುಗಡೆಯಾಗಿದ್ದು ಎಲ್ಲಾ ಅಭ್ಯರ್ಥಿಗಳಿಗೂ ಅಭಿನಂದನೆಗಳು. ವಿಶೇಷವಾಗಿ ನಮ್ಮ ನಂಜನಗೂಡು ಕ್ಷೇತ್ರಕ್ಕೆ ದರ್ಶನ್ ಅವರ ಹೆಸರನ್ನೇ ನಾವು ಅಂತಿಮಗೊಳಿಸಿದ್ದು ನುಡಿದಂತೆ ನಡೆದಿರುತ್ತೇವೆ. ಈ ಬಾರಿ ಮೈಸೂರು ಚಾಮರಾಜನಗರ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷವು ಜಯಭೇರಿ ಬಾರಿಸುವುದು ಶತಸಿದ್ಧ ಎಂದು ಎಚ್ ಸಿ ಮಹದೇವಪ್ಪ ಟ್ವೀಟ್‌ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+