ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಿಂದ ಅಸ್ಸಾಂಗೆ ಬೈಕ್‌ ಸಾಗಟ ಮಾಡಲಿದೆ ರೈಲ್ವೆ

|
Google Oneindia Kannada News

ಮೈಸೂರು, ಅಕ್ಟೋಬರ್ 11: ಲಾಕ್ ಡೌನ್ ಅವಧಿಯಲ್ಲಿ ನೈಋತ್ಯ ರೈಲ್ವೆ ಟ್ರಾಕ್ಟರ್ ಮತ್ತು ಕಾರುಗಳನ್ನು ರೈಲಿನಲ್ಲಿ ಸಾಗಾಟ ಮಾಡಿತ್ತು. ರೈಲಿನಲ್ಲಿ ವಾಹನ ಸಾಗಾಟ ಹೆಚ್ಚು ಮಾಡಿದ್ದು, ಈಗ ಬೈಕ್‌ಗಳನ್ನು ಸಾಗಾಟ ಮಾಡಲು ಆರಂಭಿಸಲಾಗಿದೆ.

ನೈಋತ್ಯ ರೈಲ್ವೆ ಮೈಸೂರಿನ ಕಡಕೊಳದಿಂದ ಅಸ್ಸಾಂ ರಾಜ್ಯದ ಗುವಾಹಟಿಗೆ100 ಬೈಕ್‌ಗಳನ್ನು ಸಾಗಾಟ ಮಾಡಿದೆ. 1000 ಬೈಕ್‌ಗಳನ್ನು ಹೊತ್ತ ರೈಲು 3000 ಸಾವಿರ ಕಿ. ಮೀ. ಸಂಚಾರ ನಡೆಸಲಿದೆ.

ರೈಲು ಹೊರಡುವ 5 ನಿಮಿಷ ಮುನ್ನವೂ ಟಿಕೆಟ್ ಲಭ್ಯ: ನಿಮಗೆ ತಿಳಿದಿರಬೇಕಾದ ಸಂಗತಿಗಳುರೈಲು ಹೊರಡುವ 5 ನಿಮಿಷ ಮುನ್ನವೂ ಟಿಕೆಟ್ ಲಭ್ಯ: ನಿಮಗೆ ತಿಳಿದಿರಬೇಕಾದ ಸಂಗತಿಗಳು

ವಾಹನಗಳನ್ನು ಸಾಗಣೆ ಮಾಡಲು ಅನುಕೂಲವಾಗುವಂತೆ ಬೋಗಿಗಳನ್ನು (ಎನ್‌ಎಂಜಿ ರೇಕ್‌)ಗಳಾಗಿ ಪರಿವರ್ತನೆ ಮಾಡಲಾಗಿದೆ. ವಾಹನಗಳನ್ನು ಸಾಗಣೆ ಮಾಡುವ ರೈಲು 25 ಬೋಗಿಗಳನ್ನು ಹೊಂದಿರುತ್ತದೆ. ಪ್ರತಿ ಬೋಗಿಯಲ್ಲಿ 40 ಬೈಕ್‌ಗಳನ್ನು ಸಾಗಣೆ ಮಾಡಲು ಅವಕಾಶವಿದೆ.

 ಮೈಸೂರು ರೈಲ್ವೆ ನಿಲ್ದಾಣದಲ್ಲೂ ಪ್ಲಾಟ್ ಫಾರಂ ಟಿಕೆಟ್ ದರ ಹೆಚ್ಚಳ ಮೈಸೂರು ರೈಲ್ವೆ ನಿಲ್ದಾಣದಲ್ಲೂ ಪ್ಲಾಟ್ ಫಾರಂ ಟಿಕೆಟ್ ದರ ಹೆಚ್ಚಳ

SWR Transporting Bike From Mysuru To Assam

ರೈಲಿನಲ್ಲಿ ಸರಕುಗಳನ್ನು ಸಾಗಣೆ ಮಾಡುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳವಾಗಿ ಮಾಡಲು ನೈಋತ್ಯ ರೈಲ್ವೆ ಮೈಸೂರು ವಿಭಾಗ ಸ್ವಿಫ್ಟ್‌ ಎಂಬ ಹೆಸರಿನ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ.

ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗದ ಸಮೀಕ್ಷೆಗೆ ಒಪ್ಪಿಗೆ ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗದ ಸಮೀಕ್ಷೆಗೆ ಒಪ್ಪಿಗೆ

ಸರಕು ಸಾಗಣೆ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಈ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಪಾರ್ಸೆಲ್ ಕಳಿಸುವ ವ್ಯವಸ್ಥೆ, ಸ್ಥಳೀಯ ಗೂಡ್ಸ್ ಶೆಡ್ ಮಾಹಿತಿಗಳು ಇಲ್ಲಿವೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಅಪ್ಲಿಕೇಶನ್ ಡೌನ್‌ ಲೋಡ್ ಮಾಡಿಕೊಳ್ಳಬಹುದು.

SWR Transporting Bike From Mysuru To Assam

ನೈಋತ್ಯ ರೈಲ್ವೆ ಜೂನ್ ತಿಂಗಳಿನಲ್ಲಿ ಬೆಂಗಳೂರಿನಿಂದ ದೆಹಲಿಗೆ ಕಾರುಗಳನ್ನು ಸಾಗಣೆ ಮಾಡಿತ್ತು. ಲಾಕ್ ಡೌನ್ ಅವಧಿಯಲ್ಲಿ ದೊಡ್ಡಬಳ್ಳಾಪುರದಿಂದ ಗುಜರಾತ್ ಮತ್ತು ರಾಜಸ್ಥಾನ ರಾಜ್ಯಕ್ಕೆ ಟ್ರಾಕ್ಟರ್‌ಗಳನ್ನು ಸಾಗಣೆ ಮಾಡಲಾಗಿತ್ತು.

English summary
South western railway transporting bike from Mysuru to Assam. Train will run 3000 km with 1000 bike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X