• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಚಿವ ಸೋಮಶೇಖರ್ ಮನವಿಗೆ ಸ್ಪಂದಿಸಿದ ಸುಧಾ ಮೂರ್ತಿ

|

ಮೈಸೂರು, ಮೇ 7: ಮೈಸೂರು ಜಯಚಾಮರಾಜೇಂದ್ರ ಮೃಗಾಲಯದ ನಿರ್ವಹಣೆಗಾಗಿ ದೇಣಿಗೆ ನೀಡುವಂತೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮನವಿ ಮಾಡಿಕೊಂಡಿದ್ದರು.

ಮೈಸೂರು ಉಸ್ತುವಾರಿ ಸಚಿವರ ಮನವಿಗೆ ಸ್ಪಂದಿಸಿದ ಸುಧಾ ಮೂರ್ತಿ ಅವರು ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಮೃಗಾಲಯದ ನಿರ್ವಹಣೆಗಾಗಿ 20 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಮೈಸೂರು ಮೃಗಾಲಯಕ್ಕೆ ಆರ್ಥಿಕ‌ ನೆರವು ನೀಡುವುದರ ಮೂಲಕ ಪ್ರಾಣಿಗಳ ಆಹಾರ ನಿರ್ವಹಣೆಗೆ ಆಸರೆಯಾಗಿದ್ದಾರೆ.

ವನ್ಯಜೀವಿ ಸಂರಕ್ಷಣೆ ಸಂಬಂಧ ಮೈಸೂರು ಮೃಗಾಲಯಕ್ಕೆ ನೆರವು ನೀಡುವಂತೆ ಸಚಿವ ಸೋಮಶೇಖರ್ ಮನವಿ ಮಾಡಿದ್ದರು. ಇದಕ್ಕೂ ಮುನ್ನ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರು ಮೃಗಾಲಯ ನಿರ್ವಹಣೆಗಾಗಿ 84 ಲಕ್ಷ ರುಪಾಯಿ ಚೆಕ್ ನೀಡಿದ್ದರು.

ಜಯಚಾಮರಾಜೇಂದ್ರ ಮೃಗಾಲಯಕ್ಕೆ ಗುರುವಾರ ಒಂದೇ ದಿನ 1.7 ಕೋಟಿ ರೂ. ಸಂಗ್ರಹವಾಗಿದ್ದು, ಒಟ್ಟಾರೆ 2.52 ಕೋಟಿ ರುಪಾಯಿ ಸಂಗ್ರಹವಾಗಿದೆ.

English summary
Sudhamurthy has donated Rs 20 lakh for the maintenance of the Mysuru Zoo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X