ಸೋಂಕಿತ ಚುಚ್ಚುಮದ್ದು ಕೊಟ್ಟಿದ್ದಕ್ಕೆ ಯುವತಿ ಸಾವು
ಮೈಸೂರು, ನವೆಂಬರ್ 14:- ಸೋಂಕಿತ ಚುಚ್ಚುಮದ್ದು ತಡಗೆದುಕೊಂಡಿದ್ದಕ್ಕಾಗಿ ಬಿಎಸ್ಸಿ ಪದವೀಧರೆ ಸಾವನ್ನಪ್ಪಿದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಹಂಪಾಪುರದ ಕಾಳಿಹುಂಡಿಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಕಾಳಿಹುಂಡಿ ಗ್ರಾಮದ ಅಂಕುಶ (21) ಎಂದು ಗುರುತಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ವೈದ್ಯ ರಾಜು ಪರಾರಿಯಾಗಿದ್ದಾರೆ. ಹಂಪಾಪುರದ ಕ್ಲಿನಿಕ್ ನಡೆಸುತ್ತಿದ್ದ ವೈದ್ಯ ಡಾ.ರಾಜು ಚುಚ್ಚು ಮದ್ದು ನೀಡಿದ್ದರು.

ಇಂಜೆಕ್ಷನ್ ನೀಡಿದ್ದ ಜಾಗದಲ್ಲಿ ಸೋಂಕು ಉಂಟಾಗಿದ್ದ ಹಿನ್ನೆಲೆಯಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದು, ಹಂಪಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













Click it and Unblock the Notifications