• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದರ್ಶನ್ ಗನ್ ಮ್ಯಾನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಏನಿದೆ?

|

ಮೈಸೂರು, ಸೆಪ್ಟೆಂಬರ್ 25: ನಟ ದರ್ಶನ್ ಕಾರು ಅಪಘಾತದ ನಂತರ ಅವರ ಗನ್ ಮ್ಯಾನ್ ಲಕ್ಷ್ಮಣ್ ಎಫ್ ಐಆರ್ ದಾಖಲಿಸಿದ್ದಾರೆ. ಮೈಸೂರಿನ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅಪಘಾತಕ್ಕೆ ಚಾಲಕ ರಾಯ್ ಆಂಥೋನಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದು, ಒಟ್ಟಾರೆ ದೂರಿನ ಸಾರಾಂಶ ಹೀಗಿವೆ.

ಸೆಪ್ಟೆಂಬರ್ 24, 2018ರಂದು ಮಧ್ಯರಾತ್ರಿ 2.30ಕ್ಕೆ ಸಿ ಪೆಟ್ ರಸ್ತೆ, ಜಂಕ್ಷನ್ ತಿರುವಿನಲ್ಲಿ KA-51, Z-7999 ಕಾರು ಅಪಘಾತಕ್ಕೆ ಈಡಾಯಿತು. ನಿರ್ಲಕ್ಷ್ಯದಿಂದ ಕಾರು ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ, ಅಪಘಾತವಾಯಿತು. ಇದರಿಂದ ದರ್ಶನ್ ಅವರ ಬಲದ ಕೈ ಮೂಳೆ ಮುರಿದಿದೆ. ದೇವರಾಜ್ ಅವರ ಎದೆಯ ಭಾಗ ಹಾಗೂ ಎಡಗೈ ಬೆರಳಿಗೆ ಪೆಟ್ಟಾಗಿದೆ. ಪ್ರಜ್ವಲ್ ದೇವರಾಜ್ ಗೆ ಸಣ್ಣ-ಪುಟ್ಟ ಪೆಟ್ಟಾಗಿದೆ.

ಕಾರು ಅಪಘಾತ ಪ್ರಕರಣ: ಕೇಸ್ ನಿಂದ ಬಚಾವ್ ಆಗಲು ಮುಂದಾದ್ರಾ ದರ್ಶನ್ ?

ಆದ್ದರಿಂದ ಇವರೆಲ್ಲರನ್ನೂ ಚಿಕಿತ್ಸೆಗಾಗಿ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಸುದ್ದಿ ಗೊತ್ತಾದ ಮೇಲೆ ದೂರುದಾರರು (ಲಕ್ಷ್ಮಣ್) ಆಸ್ಪತ್ರೆಗೆ ಬಂದು, ಗಾಯಗೊಂಡಿದ್ದ ನಟರನ್ನು ನೋಡಿ, ಅಪಘಾತಕ್ಕೆ ಕಾರಣನಾದ ಕಾರು ಚಾಲಕ ರಾಯ್ ಆಂಥೋನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ದೂರಿನ ಮೇರೆಗೆ ಎಫ್ ಐಆರ್ ಸಿದ್ಧಪಡಿಸಲಾಗಿದೆ.

ನಟ ದರ್ಶನ್ ಕಾರು ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ

ಸೆಪ್ಟೆಂಬರ್ 24ರಂದು ಬೆಳಗ್ಗೆ 9.30ಕ್ಕೆ ದೂರನ್ನು ದಾಖಲು ಮಾಡಿಕೊಳ್ಳಲಾಗಿದೆ. ಘಟನೆ ಸಂಭವಿಸಿದ ವೇಳೆಯಲ್ಲಿ ಒಂದು ಸಾವಿರ ರುಪಾಯಿ ಮೌಲ್ಯದ ಸ್ವತ್ತು ಕಳುವಾಗಿರುವ ಬಗ್ಗೆ ತಿಳಿಸಲಾಗಿದೆ.

English summary
Star actor Darshan's driver Lakshamn has registered FIR about accident which was occurred on Sunday late night in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X