ಸಿದ್ದರಾಮಯ್ಯ ಕಾಂಗ್ರೆಸ್ ಖಾಲಿ ಮಾಡಿ ಮನೆಗೆ ಹೋಗ್ತಾರೆ: ಶ್ರೀನಿವಾಸ ಪ್ರಸಾದ್

ಮೈಸೂರು. ಡಿಸೆಂಬರ್ 01: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೊಂದು ದಿನ ಕಾಂಗ್ರೆಸ್ ನ್ನು ಖಾಲಿ ಮಾಡಿಯೇ ಮನಗೆ ಹೋಗ್ತಾರೆ ಎಂದು ಸಂಸದ ಶ್ರೀನಿವಾಸ ಪ್ರಸಾದ್ ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಸಾಲು ಸಾಲು ಸೋಲು ತಂದುಕೊಡುತ್ತಿರುವ ಸಿದ್ದರಾಮಯ್ಯ ವೈಟ್ ವಾಶ್ ಮಾಡಲಿದ್ದಾರೆ, ಕಾಂಗ್ರೆಸ್ ಪಕ್ಷಕ್ಕೆ ಬಿಳಿ ಬಣ್ಣ ಬಳಿದು ಹೋಗುತ್ತಾರೆ ಎಂದು ಶ್ರೀನಿವಾಸ್ ಪ್ರಸಾದ್ ವ್ಯಂಗ್ಯ ಮಾಡಿದ್ದಾರೆ.

ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಿಸೆಂಬರ್ 09 ರ ನಂತರ ರಾಜಕೀಯದಲ್ಲಿ ಬದಲಾವಣೆ ಆಗುತ್ತಿದೆ ಅನ್ನುವ ವಿಷಯಕ್ಕೆ ಸಂಬಂಧಿಸಿದಂತೆ, ಜೆಡಿಎಸ್ ಅದು ಒಂದು ಪಕ್ಷವೇ ಆಗಿರಲ್ಲ, ಕಾಂಗ್ರೆಸ್ ಪಕ್ಷಕ್ಕೆ ಬಿಳಿ ಬಣ್ಣ ಬಳಿದು ಹೋಗುವ ಸಿದ್ದರಾಮಯ್ಯ, ಇದೇ ಡಿಸೆಂಬರ್ 09 ರಂದು ಆಗುವ ಬದಲಾವಣೆ ಎಂದು ತಮಾಷೆ ಮಾಡಿದರು.

Siddaramaiah Vacates Congress And Goes To Home

ಮೊದಲು ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಗ್ಗರಿಸಿತು, ಎರಡನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗೆದ್ದರು. ಇದಕ್ಕಿಂತ ಅವಮಾನ ಮತ್ತೊಂದಿಲ್ಲ. ಇಷ್ಟೊತ್ತಿಗೆ ರಾಜೀನಾಮೆ ನೀಡಿ ಮನೆಯಲ್ಲಿರಬೇಕಿತ್ತು.

ರಾಜ್ಯದಲ್ಲಿ ಈಗ ನಡೆಯುತ್ತಿರುವ ಉಪ ಚುನಾವಣೆ ಮೂರನೆಯದು, ಇದರಲ್ಲಿಯೂ ಅವರ ಸೋಲು ಖಚಿತ. ಕ್ರಿಕೆಟ್ ನಲ್ಲಿ ಸತತ ಸೋಲುನ ಕಂಡರೆ ವೈಟ್ ವಾಶ್ ಅಂತಾರೆ, ಅದೇ ರೀತಿ ಚುನಾವಣೆಯಲ್ಲಿ ಸತತವಾಗಿ ಕಾಂಗ್ರೆಸ್ ನ್ನು ಸೋಲಿಸಿ ವೈಟ್ ವಾಶ್ ಮಾಡಲಿದ್ದಾರೆ ಎಂದರು.

ಸಿದ್ದರಾಮಯ್ಯ ಮಾತೆತ್ತಿದರೆ ತಾನು ಸಮಾಜವಾದಿ ಅಂತಾರೆ, ಆದರೆ ಅವರು ಕೈಗೆ ಕಟ್ಟುವ ವಾಚ್ ಮಾತ್ರ ೮೦ ಲಕ್ಷ ರೂಪಾಯಿದ್ದಾಗಿರುತ್ತೆ. ಅನ್ನಭಾಗ್ಯ ಯೋಜನೆ ಕೊಟ್ಟೆ ಅಂತಾರೆ, ಏನು ಅವರ ಮನೆಯಿಂದ ತಂದು ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು. ಇವರ ಭಾಗ್ಯಗನ್ನು ಜನಗಳು ನೋಡಿ ಬಿಟ್ಟಿದ್ದಾರೆ ಎಂದರು.

ಸಿದ್ದರಾಮಯ್ಯ ಎಲ್ಲಿ ಕಿಟ್ಟಿ ಪಾರ್ಟಿ ಮಾಡುತ್ತಿದ್ದರು ಎಂಬುದು ಗೊತ್ತಿದೆ, ಆ ಪಾರ್ಟಿಗಳಿಗೆ ಯಾರ್ಯಾರು ಹೋಗುತ್ತಿದ್ದರು ಅನ್ನೋದು ಗೊತ್ತಿದೆ ಎಂದರು. ಆ ಕಿಟ್ಟಿ ಪಾರ್ಟಿಗೆ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಕೂಡಾ ಹೋಗುತ್ತಿದ್ದರು ಎಂದು ಆರೋಪಿಸಿದರು.

ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಹೆಚ್.ವಿಶ್ವನಾಥ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಚ್.ಪಿ.ಮಂಜುನಾಥ್ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಸೋಮಶೇಖರ್ ಉಪ ಚುನಾವಣಾ ಆಖಾಡದಲ್ಲಿದ್ದಾರೆ. ಡಿಸೆಂಬರ್ 05 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+