ಡಿಕೆಶಿ ಬೆಂಬಲಿಗನ ಕೆನ್ನೆಗೆ ಬಾರಿಸಿದ ಸಿದ್ದರಾಮಯ್ಯ
Recommended Video
ಮೈಸೂರು, ಸೆಪ್ಟೆಂಬರ್ 4: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಕಾರ್ಯಕರ್ತನ ಕೆನ್ನೆಗೆ ಬಾರಿಸಿದ ಘಟನೆ ಮೈಸೂರಿನ ಏರ್‌ಪೋರ್ಟ್‌ನಲ್ಲಿ ಬುಧವಾರ ನಡೆದಿದೆ.
ಸಿದ್ದರಾಮಯ್ಯ ತಮಾಷೆಗೆ ಹಲವು ಬಾರಿ ತಮ್ಮ ಬೆಂಬಲಿಗರು ಕಾರ್ಯಕರ್ತರ ಕೆನ್ನೆಗೆ, ಭುಜಕ್ಕೆ ಹೊಡೆದದ್ದುಂಟು ಆದರೆ ಕೋಪದಲ್ಲಿ ಇದೇ ಮೊದಲ ಬಾರಿಗೆ ಕಾರ್ಯಕರ್ತನ ಕೆನ್ನೆಗೆ ಬಾರಿಸಿದ್ದಾರೆ.
ಸಿದ್ದರಾಮಯ್ಯ ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಬೆಳಗ್ಗೆ 9 ಗಂಟೆಗೆ ಎಚ್ಎಎಲ್ ವಿಶೇಷ ವಿಮಾನ ನಿಲ್ದಾಣದ ಮೂಲಕ ಮೈಸೂರಿಗೆ ತೆರಳಿದ್ದರು. ಈ ವೇಳೆ ಅವರು ಮಾಧ್ಯಮದ ಜೊತೆ ಮೈಸೂರಿನಲ್ಲಿ ಮಾತನಾಡಿದ್ದಾರೆ. ನಂತರ ಕಾರ್ಯಕರ್ತನ ಕೆನ್ನೆಗೆ ಸಿದ್ದು ಬಾರಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತ ರವಿ ಎಂಬುವವರು ಯಾವುದೋ ವ್ಯಕ್ತಿಗೆ ಕರೆ ಮಾಡಿದ್ದರು. ಅದಾದ ನಂತರ ಹತ್ತಿರ ಬಂದ ಸಿದ್ದರಾಮಯ್ಯ ಅವರಿಗೆ ಮೊಬೈಲ್ ನೀಡಲು ರವಿ ಮುಂದಾಗಿದ್ದರು. ಅಷ್ಟೇ ಅಲ್ಲ, ದೂರವಾಣಿ ಸಂಪರ್ಕದಲ್ಲಿರುವವರ ಜೊತೆ ಮಾತನಾಡುವಂತೆ ಕೋರಿದ್ದರು. 'ನಾನು ಮಾತಾನಡುವುದಿಲ್ಲ ಹೋಗ್' ಎಂದು ಸಿದ್ದರಾಮಯ್ಯ ರವಿ ಕೆನ್ನೆಗೆ ಬಾರಿಸಿ , ಪಕ್ಕಕ್ಕೆ ತಳ್ಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರವಿಯು ಮೈಸೂರಿನ ಡಿಕೆಶಿವಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದಾರೆ.
ಹಬ್ಬದ ದಿನವೂ ಡಿಕೆಶಿ ಅವರನ್ನು ಅವರನ್ನು ಇಡಿ ಬಿಟ್ಟಿಲ್ಲ, ಅವರ ತಂದೆಯ ಕಾರ್ಯಕ್ರಮಕ್ಕೆ ಹೋಗಲೂ ಬಿಟ್ಟಿಲ್ಲ. ಮನುಷ್ಯತ್ವ ಇರುವ ಯಾರೂ ಹೀಗೆ ಮಾಡುವುದಿಲ್ಲ. ಡಿಕೆಶಿ ಕಣ್ಣೀರು ಹಾಕಿದ್ದರು. ಹಬ್ಬದ ದಿನದಂದಾದರೂ ಬಿಡಬಹುದಿತ್ತು ಎಂದು ಮರುಗಿದ್ದರು.
ಸಿದ್ದರಾಮಯ್ಯ ಕಾರ್ಯಕರ್ತನ ಕೆನ್ನೆಗೆ ಹೊಡೆದಿದ್ದಂತೂ ಸತ್ಯ ಹಾಗಾದರೆ ಕಾರ್ಯಕರ್ತ ಯಾರ ಬಳಿ ಮಾತನಾಲು ಹೇಳಿದ್ದರು ಎನ್ನುವ ಮಾಹಿತಿ ಮಾತ್ರ ಲಭ್ಯವಾಗಿಲ್ಲ.












Click it and Unblock the Notifications