H.D.ಕೋಟೆ: ದಯವಿಟ್ಟು ನಮ್ಗೆ ಒಂದೇ.. ಒಂದು KSRTC ಬಸ್ ಕಲ್ಪಿಸಿಕೊಡಿ ಸಾರ್, ಶಾಲಾ ಮಕ್ಕಳ ಅಳಲು
ಮೈಸೂರು, ಸೆಪ್ಟೆಂಬರ್, 06: ಎಚ್.ಡಿ.ಕೋಟೆ ಹಿಂದುಳಿದ ತಾಲೂಕು ಆಗಿದ್ದು, ಇಲ್ಲಿನ ಗ್ರಾಮೀಣ ಪ್ರದೇಶಗಳು ಇನ್ನೂ ಕೂಡ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಆದಿವಾಸಿಗಳು ಕುಗ್ರಾಮಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಸಾರಿಗೆ ಸೌಲಭ್ಯಗಳು ಸಮರ್ಪಕವಾಗಿ ಇಲ್ಲದ ಕಾರಣ ಪಟ್ಟಣದ ಶಾಲೆಗೆ ಬರುವ ವಿದ್ಯಾರ್ಥಿಗಳು ಹಾಗೂ ಕೆಲಸದ ನಿಮಿತ್ತ ಬರುವ ಕೂಲಿ ಕಾರ್ಮಿಕರು, ಇನ್ನಿತರರು ನಡಿಗೆ ಮೂಲಕ ಅಥವಾ ಯಾವುದಾದರೂ ಖಾಸಗಿ ವಾಹನಗಳನ್ನು ಆಶ್ರಯಿಸುವುದು ಅನಿವಾರ್ಯವಾಗಿದೆ. ಆದರೆ ಈ ಖಾಸಗಿ ವಾಹನಗಳಲ್ಲಿ ಕುರಿಗಳಂತೆ ತುಂಬುತ್ತಿದ್ದಾರೆ.
ಸುತ್ತಮುತ್ತಲ ಗ್ರಾಮಗಳ ಜನರು ಕೆಲಸಕ್ಕೆ, ವಿದ್ಯಾರ್ಥಿಗಳು ಶಾಲೆಗೆ ತಾಲೂಕು ಕೇಂದ್ರವಾದ ಎಚ್.ಡಿ.ಕೋಟೆ ಪಟ್ಟಣಕ್ಕೆ ಬರಲೇಬೇಕಾಗಿದೆ. ಅದರಲ್ಲೂ ಫೋಷಕರು ತಮ್ಮ ಮಕ್ಕಳು ಒಂದೊಳ್ಳೆಯ ಶಾಲೆಯಲ್ಲಿ ಕಲಿಯಬೇಕೆಂದು ಬಯಸಿ ಪಟ್ಟಣದ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಮತ್ತು ಶಾಲೆಗೆ ತಮ್ಮ ಊರಿನಿಂದ ಹೋಗಿ ಬರಲು ಬಸ್ ವ್ಯವಸ್ಥೆ ಇಲ್ಲದ ಕಾರಣದಿಂದ ಖಾಸಗಿ ವಾಹನಗಳಾದ ಪ್ಯಾಸೇಂಜರ್ ಮತ್ತು ಗೂಡ್ಸ್ ಆಟೋಗಳಲ್ಲಿ ಕಳಿಸುವುದು ಅನಿವಾರ್ಯವಾಗಿದೆ.

ಇದೆಲ್ಲದರ ಪರಿಣಾಮದಿಂದ ಹೆಚ್.ಡಿ.ಕೋಟೆ ಪಟ್ಟಣದಲ್ಲಿ ಸರ್ಕಾರಿ ಮತ್ತು ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಬರುವ ಮಕ್ಕಳನ್ನು ಪ್ಯಾಸೇಂಜರ್ ಮತ್ತು ಗೂಡ್ಸ್ ಆಟೋಗಳಲ್ಲಿ ಕುರಿಗಳಂತೆ ತುಂಬಿಕೊಂಡು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ. ಮಕ್ಕಳನ್ನು ಶಾಲೆಗಳಿಗೆ ಕರೆತರುವ ಪ್ಯಾಸೇಂಜರ್ ಆಟೋಗಳ ಚಾಲಕರು ಇಲ್ಲಿ ಅಕ್ಷರಶಃ ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ ವಾಹನದ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಮತ್ತು ಮಕ್ಕಳನ್ನು ತುಂಬಿಕೊಂಡು ತಾಲೂಕಿನ ಸುತ್ತಮುತ್ತಲ ಗ್ರಾಮಗಳಿಂದ ಸಂಚಾರ ನಡೆಸುತ್ತಿರುವುದು ಅಪಾಯಕಾರಿಯಾಗಿದೆ.
ಮುಂದೆ ನಡೆಯುವ ಅನಾಹುತ ತಡೆಯಬೇಕು
ಒಂದೆಡೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದರೆ, ಮತ್ತೊಂದು ಕಡೆ ಕೇರಳಿಗರು ಶುಂಠಿ ಜಮೀನುಗಳಿಗೆ ಬಡ ಕೂಲಿ ಕಾರ್ಮಿಕರನ್ನು ಥೇಟ್ ಕುರಿಗಳಂತೆ ತುಂಬಿಕೊಂಡು ಪ್ಯಾಸೇಂಜರ್ ಹಾಗೂ ಗೂಡ್ಸ್ ವಾಹನಗಳಲ್ಲಿ ಕರೆದೊಯ್ಯುವುದು ನಿರಂತರವಾಗಿ ನಡೆಯುತ್ತಿದೆ. ಆದರೆ ಇಂತಹ ವಾಹನಗಳ ಚಾಲಕರನ್ನು ತಡೆದು ದಂಡ ವಿಧಿಸುವುದಿರಲಿ, ಕನಿಷ್ಟ ಸವಾರರಿಗೆ ಸಂಚಾರಿ ನಿಯಮದ ಪಾಠವನ್ನೂ ಮಾಡುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಪೊಲೀಸರು ಕ್ರಮ ವಹಿಸದೆ ಹೋದರೆ ಜನರನ್ನು, ಶಾಲಾ ಮಕ್ಕಳನ್ನು, ಬಡ ಕೂಲಿ ಕಾರ್ಮಿಕರನ್ನು ತುಂಬಿಕೊಂಡು ಸಂಚಾರ ಮಾಡುವ ವೇಳೆ ಚಾಲಕರ ಅಜಾಗೂರಕತೆಯಿಂದ ಏನಾದರೂ ಅನಾಹುತ ನಡೆದು ಸಾವು, ನೋವು ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಆದರೆ ಶಾಲಾ ಅವಧಿಯಲ್ಲಿ ತೆರೆಯುವ ಹಾಗೂ ಬಿಡುವ ವೇಳೆಯಲ್ಲಿ ಪೊಲೀಸರು ಇತ್ತ ಗಮನಹರಿಸಿದರೆ ಮುಂದೆ ನಡೆಯುವ ಅನಾಹುತಗಳನ್ನು ತಡೆಯಬಹುದಾಗಿದೆ.
ಕ್ರಮ ಕೈಗೊಳ್ಳುವುದು ಅಗತ್ಯ
ಇನ್ನು ಸಾರ್ವಜನಿಕರಿಗೆ ಖಾಸಗಿ ವಾಹನಗಳಲ್ಲಿ ತೆರಳುವುದು ಅನಿವಾರ್ಯವಾಗಿದೆ. ಸಾರಿಗೆ ಇಲಾಖೆಗೂ ಎಲ್ಲ ಕಡೆಗೆ ಬಸ್ ವ್ಯವಸ್ಥೆ ಕಲ್ಪಿಸುವುದು ಕಷ್ಟವೇ. ಹೀಗಾಗಿ ವಿದ್ಯಾರ್ಥಿಗಳು ಸಕಾಲದಲ್ಲಿ ಶಾಲಾ-ಕಾಲೇಜಿಗೆ ತೆರಳಲು, ಕೆಲಸಕ್ಕೆ ತೆರಳುವವರು ಸ್ವಂತ ವಾಹನ ಹೊಂದಿಲ್ಲದವರು ಖಾಸಗಿ ವಾಹನಗಳನ್ನು ಅವಲಂಬಿಸಲೇಬೇಕಾಗಿದೆ. ಆದ್ದರಿಂದ ಪೊಲೀಸರು ವಾಹನದ ಸಾಮರ್ಥ್ಯಕ್ಕಿಂತ ಪ್ಯಾಸೇಂಜರ್, ಆಟೋ, ಸರಕು ಸಾಮಾನು ಸಾಗಿಸುವ ವಾಹನಗಳಲ್ಲಿ ಜನರನ್ನು ತುಂಬಿಕೊಂಡು ಸಂಚಾರ ಮಾಡುವ ವಾಹನಗಳ ಮೇಲೆ ಕ್ರಮ ಕೈಗೊಳ್ಳಬೇಕಾಗಿದೆ.
ಇನ್ನು ವಾಹನ ಚಾಲಕರು ಮತ್ತು ಮಾಲೀಕರ ಮೇಲೆ ಸೂಕ್ತ ಕ್ರಮಕೈಗೊಂಡು ಯಾವುದೇ ವಾಹನ ಸವಾರರು ಸಾರಿಗೆ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ಅವರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಈ ಮೂಲಕ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಂದ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸುವ ಕೆಲಸವನ್ನು ಪೊಲೀಸರು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಮಾಡಬೇಕಾಗಿದೆ.
-
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications