ಮೈಸೂರು: ಪೊಲೀಸರ ಶೂಟೌಟ್ ನಲ್ಲಿ ಗಂಧದ ಮರ ಸ್ಮಗ್ಲರ್ ಸಾವು

ಚಿರತೆ ಹಿಡಿಯಲು ಇಟ್ಟಿದ್ದ ಬೋನು ಕಾಯುತ್ತಿದ್ದ ಅರಣ್ಯಾಧಿಕಾರಗಳ ಕಣ್ಣಿಗೆ ಬಿದ್ದಿದ್ದ ಗಂಧದ ಮರಗಳ್ಳರು; ಅವರನ್ನು ತಡೆಯಲು ಹೋದ ಪೊಲೀಸರ ಮೇಲೆ ಗುಂಡಿನ ದಾಳಿ, ಪ್ರತಿದಾಳಿಯಲ್ಲಿ ಓರ್ವ ಕಳ್ಳನ ಸಾವು.

ಮೈಸೂರು, ಫೆಬ್ರವರಿ 12: ಜಿಲ್ಲೆಯ ದತ್ತಗಳ್ಳಿಯ ಬಳಿಯಿರುವ ಲಿಂಗಬಂಧಿ ಕೆರೆಯ ಬಳಿ ಶನಿವಾರ ರಾಜ್ಯ ಅರಣ್ಯಾಧಿಕಾರಿಗಳು ಹಾಗೂ ಗಂಧದ ಮರ ಕಳ್ಳ ಸಾಗಣೆದಾರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಕಳ್ಳಸಾಗಣೆದಾರ ಸಾವಿಗೀಡಾಗಿದ್ದಾನೆಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ, ಲಿಂಗಬಂಧಿ ಕೆರೆಯ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದ ಹಿನ್ನೆಲೆಯಲ್ಲಿ ಆ ಜಾಗದಲ್ಲಿ ಪಂಜರವೊಂದನ್ನು ಇರಿಸಿದ್ದ ಅರಣ್ಯಾಧಿಕಾರಿಗಳು, ಅದರ ಮೇಲೆ ದಿನದ 24 ಗಂಟೆ ನಿಗಾ ವಹಿಸಿದ್ದರು.

ಹೀಗೆಯೇ, ಶನಿವಾರವೂ ಅರಣ್ಯಾಧಿಕಾರಿಗಳು ದೂರದಿಂದ ಪಂಜರದ ಕಡೆಗೆ ಗಮನವಿಟ್ಟಿದ್ದಾಗ, ಸುಮಾರು ಎಂಟು ಮಂದಿಯುಳ್ಳ ತಂಡ ಕೆರೆಯ ಬಳಿಯಲ್ಲಿದ್ದ ಗಂಧದ ಮರಗಳನ್ನು ಕಡಿಯಲು ಮುಂದಾಗಿರುವುದು ಗಮನಕ್ಕೆ ಬಂದಿತ್ತು. ತಕ್ಷಣವೇ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು ಅವರನ್ನು ತಡೆದು, ಬಂಧಿಸಲು ಮುಂದಾಗುವಷ್ಟರಲ್ಲಿ ಇದನ್ನು ಗಮನಿಸಿದ ಕಳ್ಳರು ಪೊಲೀಸರತ್ತ ಗುಂಡಿನ ದಾಳಿ ನಡೆಸಿದ್ದಾರೆನ್ನಲಾಗಿದೆ.

ಆಗ, ಪೊಲೀಸರಿಂದ ನಡೆದ ಪ್ರತಿ ದಾಳಿಯಲ್ಲಿ ಒಬ್ಬ ಗಂಧದ ಮರದ ಕಳ್ಳಸಾಗಣೆಕೋರ ಮೃತ್ತಪಟ್ಟಿದ್ದಾನೆಂದು ಮೂಲಗಳು ಹೇಳಿವೆ. ಆದರೆ, ಈ ವೇಳೆ ಉಳಿದ ಏಳು ಜನರು ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆ ಮುಂದುವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+