ಮಹದೇವಪ್ಪ ಪತ್ರ ಸುನೀಲ್ ಗೆ ಮತ್ತೆ ಶುರು ಸಂಕಟ?
ಮೈಸೂರು, ಸೆಪ್ಟೆಂಬರ್ 13: ಅಕ್ರಮ ಮರಳು ಸಾಗಾಣಿಕೆಗೆ ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಮಹದೇವಪ್ಪ ಪುತ್ರನ ತಲೆಯ ಮೇಲೆ ಸಂಕಷ್ಟದ ತೂಗುಗತ್ತಿ ನೇತಾಡುವ ಸಂಭವವಿದೆ.
ಸಾಕಷ್ಟು ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಹೊಸ ಆದೇಶ ನೀಡಿದೆ. ನ್ಯಾಯಾಧೀಶ ಸುಧೀಂದ್ರ ನಾಥ್ ಆದೇಶ ಹೊರಡಿಸಿದ್ದಾರೆ, ಸುನಿಲ್ ಬೋಸ್ ಆರೋಪಿ ಎಂದು ಹೇಳಲಾಗಿದೆ. ರಾಜು ಈ ಪ್ರಕರಣದ 2ನೇ ಆರೋಪಿಯಾಗಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಅಲ್ಫೋನ್ಸಿಸ್ ಗೆ ಮರಳು ಗುತ್ತಿಗೆದಾರನಿಂದ ಲಂಚ ಪಡೆಯುವಂತೆ ಸುನಿಲ್ ಬೋಸ್ ಒತ್ತಡ ಹಾಕಿದ್ದ.ಲಂಚ ಸ್ವೀಕರಿಸುವಾಗ ಲೋಕಾಯುಕ್ತ ದಾಳಿ ಸಂದರ್ಭ ತಪ್ಪೊಪ್ಪಿಕೊಂಡು ಸುನಿಲ್ ಬೋಸ್ ವಿರುದ್ದ ಅಲ್ಫೋನ್ಸಿಸ್ ಲಿಖಿತ ದೂರು ದಾಖಲಿಸಿದ್ದ. ಸುನಿಲ್ ಬೋಸ್ ಕೋರ್ಟ್ ಹಾಜರಾಗಿ ವಿಚಾರಣೆ ಎದುರಿಸುವಂತೆ ಕೋರ್ಟ್ ಆದೇಶಿಸಿದೆ.











Click it and Unblock the Notifications