ಫೋನ್ ಕದ್ದಾಲಿಕೆ; ಸಂಬಂಧ ಹಾಳುಮಾಡುವ ಹುನ್ನಾರ ಎಂದ ಸಾರಾ ಮಹೇಶ್

Recommended Video

      ತನಿಖೆ ಪೂರ್ಣವಾಗುವ ಮುನ್ನ ವರದಿ ಬಿಜೆಪಿ ಕೈಗೆ ಸಿಗಲು ಹೇಗೆ ಸಾಧ್ಯ?- ಸಾರಾ ಮಹೇಶ್

      ಮೈಸೂರು, ಸೆಪ್ಟೆಂಬರ್ 30: ಆದಿಚುಂಚನಗಿರಿ ಶ್ರೀ ನಿರ್ಮಲಾನಂದ ಸ್ವಾಮೀಜಿಗಳ ಫೋನ್‌ ಕದ್ದಾಲಿಕೆ ಆಗಿದೆ ಎಂಬ ಸಚಿವ ಆರ್ ಅಶೋಕ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಸಾರಾ ಮಹೇಶ್, "ಸಿಬಿಐ ತನಿಖೆ ಪೂರ್ಣಗೊಂಡ ನಂತರವಷ್ಟೇ ಸ್ಪಷ್ಟ ವಿವರ ತಿಳಿಯಲಿದೆ" ಎಂದಿದ್ದಾರೆ.

      ಮೈಸೂರಿನಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ಅಶೋಕ್‌ ಅವರು ಒಂದು ಹೇಳಿಕೆ ಕೊಡುತ್ತಾರೆ, ಪುನಃ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಮತ್ತೊಂದು ರೀತಿಯ ಹೇಳಿಕೆ ಕೊಡುತ್ತಾರೆ. ಇದರ ಹಿಂದೆ ಇರುವುದು ಬರೀ ರಾಜಕೀಯ ಉದ್ದೇಶ" ಎಂದು ಆರೋಪಿಸಿದರು.

      Sa Ra Mahesh Statement On Nirmalananda Swamiji Phone Tapping Incident

      "ಈಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ನಡುವಿನ ಸಂಬಂಧ ಹಾಳು ಮಾಡುವ ಪ್ರಯತ್ನ ನಡೆದಿದೆ, ಈಗ ಶ್ರೀಗಳ ವಿರುದ್ಧವೂ ಅದೇ ಪ್ರಯತ್ನ ನಡೆದಿದೆ" ಎಂದರು. "ಸರ್ಕಾರ ಬೀಳುವ ಸಂಭವವಿದೆ ಎಂದು ಗೊತ್ತಿದ್ದರೂ ಕುಮಾರಸ್ವಾಮಿ ಅವರು ಶ್ರೀಗಳ ಅಮೆರಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಾಜಿ ಪ್ರಧಾನಿ ದೇವೇಗೌಡ ಮತ್ತು ಶ್ರೀಗಳ ಸಂಬಂಧ ಚೆನ್ನಾಗಿದೆ. ಅದನ್ನು ಒಡೆಯುವ ವಿರೋಧಿಗಳ ಯತ್ನ ಫಲಿಸದು" ಎಂದು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+