ಉದಯಗಿರಿ ಗಲಭೆಯಲ್ಲಿ ಬಂಧಿತರಾದವರು ಕಲಬುರ್ಗಿ ಜೈಲಿಗೆ
ಮೈಸೂರು, ಏಪ್ರಿಲ್ 24: ಕತುವಾ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಮೈಸೂರಿನ ಉದಯಗಿರಯಲ್ಲಿ ನಡೆಯುತ್ತಿದ್ದ ಮೆರವಣಿಗೆಯಲ್ಲಿ ಕಲ್ಲು ತೂರಾಟ ಮತ್ತು ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ 16 ಆರೋಪಿಗಳನ್ನು ಮೈಸೂರು ಜೈಲಿನಿಂದ ಕಲ್ಬುರ್ಗಿಗೆ ರವಾನಿಸಲಾಗಿದೆ.
ಏ.20ರಂದು ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ 04 ದೊಂಬಿ ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಉದಯಗಿರಿ ಪೊಲೀಸರು ಏ.21ರಂದು ಗೌಸಿಯಾನಗರದ ಮೊಹಮ್ಮದ್ ಇಸ್ಮಾಯಿಲ್(35), ಮೊಹಮ್ಮದ್ ಮಾಜ್(20), ಸುಹೇಲ್ ಷರೀಪ್(32), ಸೈಯದ್ ಹಫೀಜುಲ್ಲಾ (38), ) ವಸೀಂ ಪಾಷ(28), ಕಲ್ಯಾಣಗಿರಿಯ ಸೈಯದ್ ಜಾಕೀರ್(20), ಅಕ್ಬರ್ ಪಾಷ (24), ಬೀಡಿಕಾಲೋನಿಯ ಸೈಯದ್ ತೌಸಿಫ್(32), ಅಯಾಜ್ ಪಾಷ (30), ಅಜೀಜ್ ಸೇಠ್ ನಗರದ ಮೊಹಮ್ಮದ್ ಮಿಸ್ಬಾವುದ್ದೀನ್(26), ಅಹಮದ್ ಪಾಷ(60) ಮೊದಲಾದವರನ್ನು ಬಂಧಿಸಿದ್ದರು.

ಆ ನಂತರ ಏ.22ರಂದು ಲಷ್ಕರ್ ಮೊಹಲ್ಲಾದ ಮುಬಾರಕ್(22), ಬೀಡಿಕಾಲೋನಿಯ ಇಮ್ರಾನ್ ಪಾಷ(23), ಕಲ್ಯಾಣಗಿರಿನಗರ ಮೊಹಮ್ಮದ್ ಶಾಬಾಜ್(19), ಗೌಸಿಯಾನಗರದ ಖುರ್ರಂಪಾಷ(32) ಎಂಬುವರನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಏ.23ರಂದು ಗೌಸಿಯಾನಗರ ಕಲೀಂಪಾಷಾ(28) ಹೀಗೆ ಸುಮಾರು 16 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದರಿಂದ ಈಗ ಆರೋಪಿಗಳನ್ನು ಮೈಸೂರು ನಗರ ಕಾರಾಗೃಹ ಬದಲಿಗೆ ಕಲಬುರ್ಗಿ ನ್ಯಾಯಾಲಯಕ್ಕೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.
ಜನವರಿ ತಿಂಗಳಿನಲ್ಲಿ ಕಾಶ್ಮೀರದ ಕತುವಾದಲ್ಲಿ ಎಂಟುವರ್ಷದ ಮಗುವನ್ನು ಅಪಹರಿಸಿ, ಹಲವು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆಗೈಯ್ಯಲಾಗಿತ್ತು. ಈ ಘಟನೆ ದೇಶದಾದ್ಯಂತ ತಲ್ಲಣ ಸೃಷ್ಟಿಸಿತ್ತು.












Click it and Unblock the Notifications