'ಹಿಂದೂಗಳೇ ಅಬೀದ್ ಪಾಷಾ ಟಾರ್ಗೆಟ್ ಆಗಿದ್ದರು'
ಮೈಸೂರು, ಆಗಸ್ಟ್ 20 : ಮೈಸೂರು ಬಿಜೆಪಿ ಕಾರ್ಯಕರ್ತ ರಾಜು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಬೀದ್ ಪಾಷಾ ಹಿಂದೂಗಳನ್ನು ಟಾರ್ಗೆಟ್ ಮಾಡಿದ್ದ. ಏಳು ಕೊಲೆ ಪ್ರಕರಣದಲ್ಲಿ ಆತ ಭಾಗಿಯಾಗಿದ್ದು, ಕೊಲೆಯಾದವರೆಲ್ಲರೂ ಹಿಂದೂಪರ ಸಂಘಟನೆಗೆ ಸೇರಿದವರಾಗಿದ್ದಾರೆ.
ಶನಿವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ರಾಜು ಹತ್ಯೆ ಪ್ರಕರಣದ ಬಗ್ಗೆ ವಿವರ ನೀಡಿದರು. 'ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಬೀದ್ ಪಾಷಾ ಪ್ರಮುಖ ಆರೋಪಿಯಾಗಿದ್ದಾನೆ' ಎಂದು ಹೇಳಿದರು.[ಮೈಸೂರು : ಬಿಜೆಪಿ ಕಾರ್ಯಕರ್ತ ರಾಜು ಹತ್ಯೆ ರಹಸ್ಯ ಬಯಲು]

'ಆಗಸ್ಟ್ 7ರಂದು ರಾಜು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಬೀದ್ ಪಾಷಾ ಬಂಧಿಸಲಾಗಿತ್ತು. ಮೈಸೂರಿನಲ್ಲಿ ನಡೆದ 2 ಕೊಲೆ ಪ್ರಕರಣ ಸೇರಿದಂತೆ ಒಟ್ಟು ಏಳು ಪ್ರಕರಣದಲ್ಲಿ ಆತ ಭಾಗಿಯಾಗಿದ್ದ ಎಂದರು. ಸಿಸಿಬಿ ಪೊಲೀಸರು ಅಬೀದ್ ಸಹಚರರಾದ ಅಯೂಬ್ ಖಾನ್ (27), ಮಹಮದ್ ಹನೀಫ್ (36), ಹಮೀದ್ ಖಾನ್ (27) ಎಂಬುವವರನ್ನು ಬಂಧಿಸಲಾಗಿದೆ' ಎಂದರು.[ಮೈಸೂರಲ್ಲಿ ರಾಜು ಹತ್ಯೆ : ಯಾರು, ಏನು ಹೇಳಿದರು?]
'ಅಬೀದ್ ಪಾಷಾ ಸಹಚರರ ಜೊತೆ ಸೇರಿ ಕೊಲೆಗಳನ್ನು ಮಾಡುತ್ತಿದ್ದ. ಕೋಮುಭಾವನೆಯಿಂದ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದ್ದ. ಅಬೀದ್ 7 ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು ಹತ್ಯೆಯಾದವರೆಲ್ಲ ಹಿಂದೂ ಸಂಘಟನೆಯವರು' ಎಂದು ದಯಾನಂದ ಅವರು ಹೇಳಿದರು.
ಅಬೀದ್ ಬಂಧನ : ಮಾರ್ಚ್ 13ರಂದು ನಡೆದ ರಾಜ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬೀದ್ ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಉಳಿದ ಕೊಲೆಯ ವಿವರಗಳು ಬಹಿರಂಗವಾಗಿವೆ. ಅಪಹರಣ, ಕೊಲೆ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ರಾಜು ವಿರುದ್ಧ ಅಬೀದ್ಗೆ ದ್ವೇಷವಿತ್ತು. ಉದಯಗಿರಿಯ ಮಸೀದಿಯಲ್ಲಿ ಹಂದಿ ಮಾಂಸ ಹಾಕಿದ ಘಟನೆಯಲ್ಲಿಯೂ ರಾಜು ಪಾತ್ರವಿದೆ ಎಂದು ಅಬೀದ್ ರಾಜು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ.
ಆದ್ದರಿಂದ, ದ್ವೇಷದ ಹಿನ್ನಲೆಯಲ್ಲಿ ಅಬೀದ್ ಸಹಚರರ ಜೊತೆ ಸೇರಿ ರಾಜು ಹತ್ಯೆ ಸಂಚು ರೂಪಿಸಿದ್ದರು. ಅದರಂತೆ 2016ರ ಮಾರ್ಚ್ 13ರಂದು ರಾಜು ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.
-
Bihar: ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ, ನೂತನ ಸಿಎಂ ಆಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಆಯ್ಕೆ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ












Click it and Unblock the Notifications