ಮೈಸೂರಿನಲ್ಲಿ ಮಸಾಜ್ ನೆಪದಲ್ಲಿ ವೇಶ್ಯಾವಾಟಿಕೆ ದಂಧೆ:ಇಬ್ಬರ ಬಂಧನ

ಮೈಸೂರು, ಫೆಬ್ರವರಿ 6:ಮೈಸೂರು ನಗರ ಸಿ.ಸಿ.ಬಿ.ಪೊಲೀಸರ ಮಾಹಿತಿ ಮೇರೆಗೆ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ, ಬಂಬೂ ಬಜಾರ್ ರಸ್ತೆಯಲ್ಲಿರುವ ರಾಜಲಕ್ಷ್ಮೀ ಕಂಫರ್ಟ್ಸ್ ಮೇಲಿರುವ ರೆಡ್ ರೋಜ್ ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿ, ಮಸಾಜ್ ಮಾಡುವ ನೆಪದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವ್ಯಕ್ತಿಗಳಿಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಶಿವರಾಜ್ ಬಿನ್ ಈರಪ್ಪ (28), ಮಹದೇವ ಬಿನ್ ಮಹದೇವಪ್ಪ (32) ಎಂದು ಗುರುತಿಸಲಾಗಿದೆ.

ವೇಶ್ಯಾವಾಟಿಕೆಯಿಂದ ಸಂಪಾದಿಸಿದ್ದ 12,570 ರೂ.ನಗದು ಹಣ, ವೇಶ್ಯಾವಾಟಿಕೆಗೆ ಬಳಕೆ ಮಾಡಿದ್ದ 05 ಮೊಬೈಲ್ ಫೋನ್ ಗಳು ಮತ್ತು ಇತರೆ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ದಾಳಿಯಲ್ಲಿ ನೇಪಾಳ ಮೂಲದ ಓರ್ವ ಮಹಿಳೆಯನ್ನು ರಕ್ಷಿಸಲಾಗಿದೆ.

Prostitution:Arrested two persons in Mysuru

50 ಮೂಟೆ ಪಡಿತರ ಅಕ್ಕಿ ವಶಕ್ಕೆ
ಮತ್ತೊಂದು ಪ್ರಕರಣದಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮೈಸೂರಿನ ರಿಂಗ್ ರಸ್ತೆಯ ಓಂಕಾರ ಪೆಟ್ರೋಲ್ ಬಂಕ್ ಬಳಿ ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 50ಕೆ.ಜಿ.ತೂಕದ 250 ಚೀಲ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಲಾರಿ ಚಾಲಕ ಮತ್ತು ಕ್ಲೀನರ್ ನನ್ನು ಬಂಧಿಸಲಾಗಿದೆ.

ಬಂಧಿತರನ್ನು ಲಾರಿ ಚಾಲಕ ಹುಸೇನ್ ಮತ್ತು ಕ್ಲೀನರ್ ಮಹಮ್ಮದ್ ಷರೀಫ್ ಎಂದು ಗುರುತಿಸಲಾಗಿದ್ದು, ಇವರು ಕಿರುಗಾವಲು ಬಳಿಯ ರೈಸ್ ಮಿಲ್ ಒಂದರಿಂದ ಬಿಲ್ಲನ್ನು ತೋರಿಸಿದರಾದರೂ ಕೂಲಂಕುಷವಾಗಿ ಪರಿಶೀಲಿಸಿದಾಗ ಇದು ನಕಲಿ ಎಂಬುದು ತಿಳಿದು ಬಂದಿದೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಸಿದ್ದಿಕ್ ನಗರದ ಉಗ್ರಾಣವೊಂದರಿಂದ ಈ ಅಕ್ಕಿಯನ್ನು ಸಾಗಿಸುತ್ತಿರುವ ಮಾಹಿತಿ ಹೊರಬಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+