ಪಟ್ಟದ ಕತ್ತಿಯಿಟ್ಟು ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭ
ಮೈಸೂರು, ಸೆ. 25 : ಮೈಸೂರು ದಸರಾ ಗುರುವಾರ ಬೆಳಗ್ಗೆ ಉದ್ಘಾಟನೆಗೊಂಡ ನಂತರ ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್ಗೂ ಚಾಲನೆ ಸಿಕ್ಕಿದೆ. ದೊರೆ ಇಲ್ಲದ ದಸರಾ ದರ್ಬಾರ್ಗೆ ಈ ಬಾರಿ ಪಟ್ಟದ ಕತ್ತಿ ನೇತೃತ್ವ ವಹಿಸಿದ್ದು,ಸಿಂಹಾಸನದ ಮೇಲೆ ಪಟ್ಟದ ಕತ್ತಿಯನ್ನು ಇಟ್ಟು, ಪೂಜಿಸಿ ಖಾಸಗಿ ದರ್ಬಾರ್ ಆರಂಭಿಸಲಾಯಿತು.
ಮೈಸೂರು ಸುತ್ತಮುತ್ತಲಿನ ದೇವಾಲಯಗಳಿಂದ ಅರ್ಚರು ಪ್ರಸಾದವನ್ನು ಹಿಡಿದು ಅರಮನೆಗೆ ಆಗಮಿಸಿದ ನಂತರ ಖಾಸಗಿ ದರ್ಬಾರ್ಗೆ ಚಾಲನೆ ಸಿಕ್ಕಿತು. ಸಿಂಹಾಸನಕ್ಕೆ ಮೊದಲು ಪೂಜೆ ಸಲ್ಲಿಸಿದ ಅರ್ಚರು ಅದಕ್ಕೆ ಪ್ರಸಾದವನ್ನು ಸಮರ್ಪಿಸಿದರು. ನಂತರ ಸಿಂಹಾಸನದ ಮೇಲೆ ಪಟ್ಟದ ಕತ್ತಿಯಿಟ್ಟು ಒಂಭತ್ತು ದಿನಗಳ ದರ್ಬಾರ್ಅನ್ನು ಆರಂಭಿಸಲಾಯಿತು. [ಮೈಸೂರು ದಸರಾಕ್ಕೆ ಚಾಮುಂಡಿ ಬೆಟ್ಟದಲ್ಲಿ ಚಾಲನೆ]

ರಾಣಿ ಪ್ರಮೋದಾ ದೇವಿ ಅವರ ಮಾರ್ಗದರ್ಶನದಲ್ಲಿ ಆರಂಭವಾದ ಖಾಸಗಿ ದರ್ಬಾರ್ ಆಚರಣೆಗಳಲ್ಲಿ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಹೋದರಿ ಗಾಯತ್ರಿ ದೇವಿ ಪುತ್ರ ಕಾಂತರಾಜ ಅರಸ್ ಪಾಲ್ಗೊಂಡಿದ್ದರು. ಶ್ರೀಕಂಠದತ್ತ ಒಡೆಯರ್ ನಿಧನದ ನಂತರ ಉತ್ತರಾಧಿಕಾರಿ ನೇಮಕವಾಗದ ಕಾರಣ, ಪಟ್ಟದ ಕತ್ತಿ ಇಟ್ಟು ಈ ಬಾರಿ ಖಾಸಗಿ ದರ್ಬಾರ್ ನಡೆಸಲಾಗುತ್ತಿದೆ. [ಮೈಸೂರು ದಸರಾ ಚಿತ್ರಗಳನ್ನು ನೋಡಿ]
1971, 1972, 1973, 1974ರಲ್ಲಿ ರಾಜರಿದ್ದರೂ ಪಟ್ಟದ ಕತ್ತಿ ಇಟ್ಟು ದರ್ಬಾರ್ ನಡೆಸಲಾಗಿತ್ತು. ಈ ಬಾರಿ ರಾಜನಿಲ್ಲದ ಕಾರಣ ಪಟ್ಟದ ಕತ್ತಿಯನ್ನಿಟ್ಟು ಖಾಸಗಿ ದರ್ಬಾರ್ ನಡೆಸಲಾಗುತ್ತಿದೆ ಎಂದು ಇತಿಹಾಸ ತಜ್ಞ ಪ್ರೊ.ಪಿ.ವಿ. ನಂಜರಾಜ ಅರಸ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
-
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral












Click it and Unblock the Notifications