ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಉಳಿಸಿಕೊಳ್ಳಲು ಹರಸಾಹಸ: ಸಂಸದ ಪ್ರತಾಪ್ ಸಿಂಹ
ಮೈಸೂರು, ಜನವರಿ 26 : ಉತ್ತರ ಪ್ರದೇಶದಲ್ಲಿ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್‌ನವರು ಪ್ರಿಯಾಂಕಾಗಾಂಧಿ ಅವರನ್ನು ಕರೆ ತರುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಬರ್ಟ್‍ವಾದ್ರಾ ಎಂಬ ಕರಪ್ಷನ್ ಬ್ಯಾಗೇಜ್ ಹಿಡಿದು ಕೊಂಡು ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಬರುತ್ತಿದ್ದಾರೆ.
ಉತ್ತರ ಪ್ರದೇಶದಲ್ಲಿ ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳು ಕಾಂಗ್ರೆಸ್ ಅನ್ನು ತಮ್ಮ ಜೊತೆ ಸೇರಿಸಿಕೊಳ್ಳುತ್ತಿಲ್ಲವಾದ್ದರಿಂದ ಅಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹಾಗೂ ಪ್ರಿಯಾಂಕಾ ಗಾಂಧಿಯಿಂದ ತಮ್ಮ ಪಕ್ಷಕ್ಕೆ ಲಾಭವಾಗಬಹುದೆಂದು ಕಾಂಗ್ರೆಸ್‍ನವರು ಲೆಕ್ಕಾಚಾರ ಹಾಕಿರಬೇಕು ಎಂದು ಪ್ರತಾಪ್ ಸಿಂಹ ಹೇಳಿದರು.

ಪ್ರಿಯಾಂಕಾ ಗಾಂಧಿ ಮುಂದಿನ ದಿನಗಳಲ್ಲಿ ಅಲ್ಲಿನ ಜನರನ್ನು ಯಾವ ರೀತಿ ಎದುರಿಸುವರೆಂದು ಕಾದು ನೋಡೋಣ ಎಂದು ತಿಳಿಸಿದರು. ಬರ ಪರಿಸ್ಥಿತಿ ಅರಿಯದೆ ರೆಸಾರ್ಟ್‌ನಲ್ಲಿ ಕುಳಿತು ರಾಜಕೀಯ ಮಾಡುತ್ತಿದ್ದಾರೆಂದು ಹೇಳುತ್ತಿದ್ದ ಕಾಂಗ್ರೆಸ್ಸಿಗರು, ತಾವು ಮಾಡಿದ್ದೇನು? ರೆಸಾರ್ಟ್‌ಲ್ಲಿ ಶಾಸಕರನ್ನು ಕೂಡಿಟ್ಟು ಶಾಸಕರು ಬಡಿದಾಡಿಕೊಳ್ಳುವಂತೆ ಮಾಡಿರುವುದನ್ನು ಜನ ನೋಡುತ್ತಿದ್ದಾರೆ. ನಾವು ಅಭಿವೃದ್ಧಿಯತ್ತ ಗಮನ ನೀಡಿದ್ದೇವೆ ಎಂದು ಎದಿರೇಟು ನೀಡಿದರು.
ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳಿಗೆ ಗೌರವ ಕೊಡದ ವ್ಯಕ್ತಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗಕ್ಕೆ ಗೌರವ ಕೊಡುವುದನ್ನು ನಿರೀಕ್ಷೆ ಮಾಡುವುದಿಲ್ಲ. ಪ್ರಿಯಾಂಕ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ಧಗಂಗಾ ಶ್ರೀಗಳ ಶೋಕಾಚರಣೆಗೆ ಗೌರವ ನೀಡಿಲ್ಲ. ಸರ್ಕಾರಕ್ಕೆ ಶೋಕಾಚರಣೆ ಘೋಷಣೆ ಮಾಡಿತ್ತು. ಸ್ಟಾರ್ ಹೋಟೆಲ್ ನಲ್ಲಿ ದೇಶ ವಿರೋಧಿಗಳನ್ನು ಕರೆದುಕೊಂಡು ಬಂದು ಕಾರ್ಯಕ್ರಮ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇದೇ ತುರ್ತು ಪರಿಸ್ಥಿತಿಯ ಇಂದಿರಾ ಗಾಂಧಿಯ ಮನಸ್ಥಿತಿ ಕಾಣುತ್ತದೆ. ಪ್ರಿಯಾಂಕ ಖರ್ಗೆ ಹೆಸರಿನಲ್ಲಿಯೇ ಇಂದಿರಾ ಗಾಂಧಿ ಮೊಮ್ಮಗಳ ಹೆಸರಿದೆ. ಮಲ್ಲಿಕಾರ್ಜುನ ಖರ್ಗೆಯವರ ಮಗ ವಿದ್ಯಾವಂತ ಲಜ್ಜೆ ಇಲ್ಲದ ಹೇಳಿಕೆ ನೀಡಬಾರದಿತ್ತು. ಪ್ರಿಯಾಂಕ ಖರ್ಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.












Click it and Unblock the Notifications