ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ್ದ ಆರೋಪ; ಹುಣಸೂರಿನಲ್ಲಿ ಮೂವರ ಬಂಧನ

ಮೈಸೂರು, ಫೆಬ್ರವರಿ 07: ಬೆಂಗಳೂರಿನಿಂದ ಚುನಾವಣಾ ಸಮೀಕ್ಷೆ ನಡೆಸಲು ಬಂದಿದ್ದ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಗರ ಸಭೆ ಮಾಜಿ ಸದಸ್ಯ ಹಾಗೂ ಆತನ ಪುತ್ರರನ್ನು ಪೊಲೀಸರು ಬಂಧಿಸಿದ್ದಾರೆ. ಮುಜೀಬ್, ಬಷೀರ್ ಅಹಮ್ಮದ್ ಹಾಗೂ ಹಸೀಬ್ ಅಹಮ್ಮದ್ ಬಂಧಿತ ಆರೋಪಿಗಳು.

ಸ್ಥಳೀಯ ಚುನಾವಣೆ ಸಮೀಕ್ಷೆ ಮಾಡಲು ಹುಣಸೂರು ಪಟ್ಟಣದ ರೆಹಮತ್ ಮೋಹಲ್ಲಾ ಪ್ರದೇಶಕ್ಕೆ ಬಂದಿದ್ದ ಬೆಂಗಳೂರಿನ ಖಾಸಗಿ ನ್ಯೂಸ್ ಚಾನಲ್ ಸಿಬ್ಬಂದಿ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

Police Arrested Three For Assult On Media Persons In Hunasuru

ಆರೋಪಿಗಳು ಚಾನೆಲ್​ನ ಕ್ಯಾಮರಾ ಜಖಂ ಮಾಡಿದ್ದಷ್ಟೇ ಅಲ್ಲದೇ ಕ್ಯಾಮರಾ ಮ್ಯಾನ್ ಮೇಲೆ ಹಲ್ಲೆ ಮಾಡಿದ್ದಾರೆ. ಇನ್ನು ಕ್ಯಾಮರ ಮ್ಯಾನ್ ರಕ್ಷಣೆಗೆ ಬಂದ ವರದಿಗಾರರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಹುಣಸೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+