ಕೊನೆಗೂ ಸಿಕ್ಕಿಬಿದ್ದರು ನಕಲೀ ಕೀ ಬಳಸಿ ಕನ್ನ ಹಾಕುತ್ತಿದ್ದ ಖದೀಮರು

ಮೈಸೂರು, ಅಕ್ಟೋಬರ್ 19: ಮೈಸೂರಿನಲ್ಲಿ ಕಳ್ಳತನದ ಎರಡು ಪ್ರತ್ಯೇಕ ಪ್ರಕರಣವನ್ನು ಬೇಧಿಸಿರುವ ವಿ.ವಿ.ಪುರಂ ಪೊಲೀಸರು ಮೂವರು ಮನೆಗಳ್ಳರನ್ನು ಬಂಧಿಸಿ ಅವರಿಂದ 12 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಗೋಕುಲಂ ನಿವಾಸಿ ಪ್ರಭು ಅವರು ಕಳ್ಳತನಕ್ಕೆ ಸಂಬಂಧಪಟ್ಟಂತೆ ದೂರು ದಾಖಲಿಸಿದ್ದರು. ನಕಲಿ ಕೀ ಬಳಸಿ ತಮ್ಮ ಮನೆಯಿಂದ ನಗದು ಹಾಗೂ ಚಿನ್ನಾಭರಣವನ್ನು ಕಳವು ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು. ದೂರಿನ ಮೇರೆಗೆ ಕ್ರಮ ಕೈಗೊಂಡ ಪೊಲೀಸರು ನಕಲಿ ಕೀಗಳನ್ನು ಬಳಸಿ ಕಳ್ಳತನ ಮಾಡುತ್ತಿದ್ದ ರಿಹಾನ್, ಹರೀಶ್, ರೀಗನ್ ಎಂಬ ಮೂವರನ್ನು ಬಂಧಿಸಿದ್ದಾರೆ. ಅವರಿಂದ 69 ಗ್ರಾಂನ ಚಿನ್ನದ ಒಡವೆಗಳು ಹಾಗೂ 48 ಸಾವಿರ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

 Police Arrested Theives Who Rob Using Fake Keys

ಮತ್ತೊಂದು ಪ್ರಕರಣದಲ್ಲಿ ಬೃಂದಾವನ ಬಡಾವಣೆಯಲ್ಲಿನ ಮನೆಯೊಂದರ ಬಾಗಿಲನ್ನು ಮೀಟಿ 8 ಲಕ್ಷ ರೂ. ಬೆಲೆ ಬಾಳುವ ಚಿನ್ನದ ಒಡವೆಗಳನ್ನು ಕಳವು ಮಾಡಿದ್ದ ಜೆ.ಪವನ್, ಜೆ.ಪ್ರವೀಣ ಅವರನ್ನು ಬಂಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+