ಮುಂದಿನ ವರ್ಷದಲ್ಲಿ ಮೈಸೂರಿಗರ ಕೈಲಿ ಪ್ಲಾಸ್ಟಿಕ್ ನೋಟು

ಮೈಸೂರು, ಆ.23 : ಜನರ ಕೈಗೆ ಪ್ಲಾಸ್ಟಿಕ್ ನೋಟು ಸಿಗುವ ಕಾಲ ಹತ್ತಿರವಾಗಿದೆ. 2015ಕ್ಕೆ ಕರ್ನಾಟಕದ ಮೈಸೂರು ಸೇರಿದಂತೆ ಐದು ನಗರಗಳಲ್ಲಿ ಪ್ರಾಯೋಗಿಕವಾಗಿ ಪ್ಲಾಸ್ಟಿಕ್‌ ನೋಟುಗಳನ್ನು ಚಲಾವಣೆಗೆ ತರಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಸಿದ್ಧತೆ ಆರಂಭಿಸಿದೆ.

ಕೆಲವು ದಿನಗಳ ಹಿಂದೆ ಶಿಮ್ಲಾದಲ್ಲಿ ಆರ್‌ಬಿಐ ಗವರ್ನರ್‌ ರಘುರಾಂ ರಾಜನ್‌ ಮೇ ಪಾಸ್ಟಿಕ್ ನೋಟುಗಳನ್ನು ಜಾರಿಗೆ ತರುವ ಬಗ್ಗೆ ಮಾಹಿತಿ ನೀಡಿದ್ದರು. ಸದ್ಯ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಿದ್ಧತೆಗಳನ್ನು ಆರಂಭಿಸಲಾಗಿದೆ. 10 ಲಕ್ಷ ನೋಟುಗಳನ್ನು ಮುದ್ರಣ ಮಾಡಲು ಟೆಂಡರ್ ಕರೆಯಲಾಗಿದೆ.

Money

ಐದು ನಗರಗಳಲ್ಲಿ ಈ ಯೋಜನೆಯನ್ನು 2015ರಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತದೆ. ನಂತರ ಇವುಗಳ ಸಾಧಕ-ಭಾಧಕಗಳನ್ನು ಪರಿಶೀಲನೆ ನಡೆಸಿದ ಬಳಿಕ ದೇಶಾದ್ಯಂತ ಪ್ಲಾಸ್ಟಿಕ್‌ ನೋಟು ಯೋಜನೆ ಜಾರಿಗೊಳ್ಳಲಿದೆ. ಕಳ್ಳ ನೋಟುಗಳ ಹಾವಳಿ ತಡೆಯಲು ಪ್ಲಾಸ್ಟಿಕ್‌ ನೋಟುಗಳಲ್ಲಿ ಅಗತ್ಯ ಭದ್ರತೆಗಳನ್ನು ಕೈಗೊಳ್ಳಲಾಗಿದೆ. [ಪ್ಲಾಸ್ಟಿಕ್ ನೋಟಿನ ಮಾಹಿತಿ ಇಲ್ಲಿದೆ ನೋಡಿ]

ಪ್ರಾಯೋಗಿಕವಾಗಿ ಪ್ಲಾಸ್ಟಿಕ್ ನೋಟು ಚಲಾವಣೆ ಕರ್ನಾಟಕದ ಮೈಸೂರು, ಕೇರಳದ ಕೊಚ್ಚಿ, ರಾಜಸ್ಥಾನದ ಜೈಪುರ, ಒಡಿಶಾದ ಭುವನೇಶ್ವರ, ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಜಾರಿಗೆ ಬರುತ್ತಿದೆ. ವಿವಿಧ ಪ್ರದೇಶಗಳ ಹವಾಮಾನ ವೈಪರಿತ್ಯ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅಧ್ಯಯನ ನಡೆಸಿ, ನಗರಗಳನ್ನು ಆಯ್ಕೆ ಮಾಡಲಾಗಿದೆ. [ದಸರಾ, ಕಾರ್ನಾಡರಿಗೆ ಅಧಿಕೃತ ಆಹ್ವಾನ]

ಪ್ರಯೋಜನಗಳು : ಆರ್‌ಬಿಐ ಜಾರಿಗೆ ತರಲು ಉದ್ದೇಶಿಸಿರುವ ಪ್ಲಾಸ್ಟಿಕ್‌ ನೋಟುಗಳು ಕಲೆಯಾಗುವುದಿಲ್ಲ. ಅಲ್ಲದೆ ಅಷ್ಟು ಸುಲಭವಾಗಿ ಹರಿಯುವುದಿಲ್ಲ. ಕಾಗದದ ನೋಟುಗಳಿಗಿಂತ ಪಾಲಿಮರ್‌ ಆಧರಿಸಿ ತಯಾರಿಸುವ ಪ್ಲಾಸ್ಟಿಕ್‌ ನೋಟುಗಳನ್ನು ಮುದ್ರಿಸುವುದು ದುಬಾರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+