ದಸರೆಯೇನೋ ಮುಗಿಯಿತು, ಕಸಮಯವಾಯ್ತು ಅಂಬಾವಿಲಾಸ ಅರಮನೆ
ಮೈಸೂರು, ಅಕ್ಟೋಬರ್ 20 : ನಾಡಹಬ್ಬದ ಸಂಭ್ರಮದಲ್ಲಿ ಕಳೆದ ಹತ್ತು ದಿನಗಳಿಂದ ನವವಧುವಿನಂತೆ ಸಿಂಗಾರಗೊಂಡಿದ್ದ ಮೈಸೂರು ಇಂದು ಮತ್ತೆ ಯಥಾಸ್ಥಿತಿಗೆ ಮರಳಿದೆ. ಜಂಬೂಸವಾರಿಯನ್ನು ಆರಂಭಗೊಳಿಸುವ ಸ್ಥಳ ಅರಮನೆಯ ಆವರಣವನ್ನು ಕಸವೇ ಆವರಿಸಿದಂತಿದೆ.
ಜಂಬೂಸವಾರಿ ಮೆರವಣಿಗೆ ಹೊರಡುವ ಮೂಲಕ ಹತ್ತುದಿನಗಳ ಕಾಲ ನಡೆದ ಸಂಭ್ರಮದ ದಸರಾಕ್ಕೆ ತೆರೆ ಬಿತ್ತು. ದಸರಾ ಜಂಬೂ ಸವಾರಿ ಮೆರವಣಿಗೆಯನ್ನು ವೀಕ್ಷಿಸಲು ಅರಮನೆಯ ಆವರಣದೊಳಗೆ ಜನರಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಆದರೆ ಜನತೆ ಮಾತ್ರ ಸ್ವಚ್ಛತೆಯ ಕುರಿತು ಕಿಂಚಿತ್ತೂ ಗಮನ ಹರಿಸಿಲ್ಲದಿರುವುದು ಮಾತ್ರ ವಿಪರ್ಯಾಸ.

ಇಂದು ಅರಮನೆಯ ಆವರಣದಲ್ಲಿಂದು ಎತ್ತ ನೋಡಿದರೂ ಕಸದ ರಾಶಿಯೇ ಕಂಡು ಬರುತ್ತಿದೆ. ಕುರುಕಲು ತಿಂಡಿ ತಿಂದು ಬಿಸಾಡಿದ ಪ್ಲಾಸ್ಟಿಕ್ ಕವರ್ ಗಳು, ತಂಪು ಪಾನೀಯಗಳ ಪ್ಯಾಕೇಟ್ ಗಳು, ನೀರಿನ ಬಾಟಲ್ ಗಳು ಎಲ್ಲೆಂದರಲ್ಲಿ ಬಿದ್ದು ಗಾಳಿಗೆ ಹಾರಾಡುತ್ತಿವೆ.

ನಿಗದಿತ ಸ್ಥಳದಲ್ಲಿ ಕಸದ ಡಬ್ಬವನ್ನಾದರೂ ಇಟ್ಟಿದ್ದರೆ ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲವೇನೋ. ಆದರೆ ಸಮೀಪದಲ್ಲಿ ಎಲ್ಲೂ ಕಸದ ಡಬ್ಬಿಗಳು ಇಲ್ಲದ ಕಾರಣ ಜನರು ತಾವು ತಂದ ಕಸಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದರು. ಅಕ್ಷರಸ್ಥರೇ ಈ ರೀತಿ ಕಸ ಬಿಸಾಡಿ ಹೊರಟರೆ ಇನ್ನು ಏನೂ ಅರಿಯದವರ ಪಾಡೇನು?

ಆಗಮಿಸುವ ಜನತೆ ತಾವೇ ಒಂದು ಕವರ್ ತಂದು ತಾವು ತಿನ್ನುವ, ಕುಡಿಯುವ ವಸ್ತುಗಳನ್ನು ಬಳಿಕ ತಮ್ಮ ಜೊತೆಯೇ ಕೊಂಡೊಯ್ದು ವ್ಯವಸ್ಥಿತವಾಗಿ ಕಸದ ಡಬ್ಬಕ್ಕೆ ಹಾಕುವ ಬದಲು ಈ ರೀತಿ ಇಲ್ಲಿಯೇ ಸುರಿದಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಇನ್ನಾದರೂ ನಮ್ಮ ಜನರು ಎಚ್ಚೆತ್ತುಕೊಂಡು ಮುಂದಿನ ದಿನಗಳಲ್ಲಿ ಈ ತೆರನಾದ ಘಟನೆಗಳು ಮರುಕಳಿಸದಂತೆ ನೋಡಿಕೊಂಡರೆ ಒಳಿತು.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ









Click it and Unblock the Notifications