ಕಾಂಗ್ರೆಸ್ ಮುಗಿಸಲು ಜೆಡಿಎಸ್ ಸಂಚು ರೂಪಿಸಿದೆ: ಬಿಎಸ್ ವೈ
ಮೈಸೂರು, ಜೂನ್ 6 : ಜೆಡಿಎಸ್ ನವರು ಬಹಳ ಬುದ್ಧಿವಂತರು. ಕಾಂಗ್ರೆಸ್ ಮುಗಿಸಲು ಅಪ್ಪ- ಮಕ್ಕಳು ದೊಡ್ಡ ಸಂಚು ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆರೋಪಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಮುಗಿಸಲು ಜೆಡಿಎಸ್ ನವರು ಸಂಚು ರೂಪಿಸಿದ್ದಾರೆ. ಇವರ ಸಂಚಿಗೆ ಕಾಂಗ್ರೆಸ್ ಬಲಿಯಾಗುತ್ತಿದೆ ಎಂದು ಟೀಕಿಸಿದರು.
ನಾನು ಕುಮಾರಸ್ವಾಮಿ ಬಜೆಟ್ ಮಂಡಿಸುವುದನ್ನು ನೋಡಬೇಕು. ಒಂದೆರಡು ತಿಂಗಳು ಕಾದು ನೋಡೋಣ. ಜಯನಗರ ಹಾಗೂ ವಿಧಾನಪರಿಷತ್ ನಲ್ಲೂ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ.

ಅವರೇನಾದರೂ ಮಾಡಲಿ, ನಮ್ಮ ಪ್ರಯತ್ನ ನಿಲ್ಲುವುದಿಲ್ಲ. ಹಲವು ಕಡೆ ವಿಧಾನ ಪರಿಷತ್ ಚುನಾವಣಾ ಪ್ರಚಾರಕ್ಕೆ ಹೋಗಬೇಕಿತ್ತು. ಹವಾಮಾನ ವೈಪರೀತ್ಯದಿಂದ ಪ್ರಯಾಣ ರದ್ದು ಮಾಡಿದ್ದೇನೆ. ಇದರಿಂದ ಪ್ರಚಾರಕ್ಕೆ ನಾನು ಹೋಗಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.












Click it and Unblock the Notifications