ಮೈಸೂರು : ಸ್ವಾತಿ ಆತ್ಮಹತ್ಯೆಗೆ ಸಹಪಾಠಿ ಕಾರಣ

ಮೈಸೂರು, ಮೇ 12 : ಮೈಸೂರಿನ ಫಾರ್ಮಸಿ ವಿದ್ಯಾರ್ಥಿನಿ ಸ್ವಾತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಪಾಠಿಯನ್ನು ಪೊಲೀಸರು ಬಂಧಿಸಿದ್ದಾರೆ. ಅನಾಮಧೇಯ ಮೊಬೈಲ್ ನಂಬರಿನಿಂದ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದ ಆರೋಪಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದ ಎಂಬುದು ತನಿಖೆಯಿಂದ ಸಾಬೀತಾಗಿದೆ.

ಬಳ್ಳಾರಿ ಜಿಲ್ಲಾ ಪಂಚಾಯತ್ ಸದಸ್ಯರ ಪುತ್ರಿ ಸ್ವಾತಿ (22) ಏ.16ರಂದು ಕಾಲೇಜಿನ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾತಿ ಸಹಪಾಠಿ ಶಿವಮೊಗ್ಗ ಮೂಲದ ಆದರ್ಶ ಆರಾಧ್ಯನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. [ಸಲಿಂಗಕಾಮಿ ಗಂಡನ ಕಿರುಕುಳ, ವೈದ್ಯೆ ಆತ್ಮಹತ್ಯೆ]

Swathi

ನೇಣಿಗೆ ಶರಣಾಗುವ ಮುನ್ನ ಸ್ವಾತಿ, 'ಅನ್‌ನೋನ್ ನಂಬರ್‌ನಿಂದ ನನಗೆ ಅಶ್ಲೀಲ ಸಂದೇಶಗಳು ಬರುತ್ತಿವೆ. ಅವರು ಯಾರು ಎಂದು ಹುಡುಕಿ ಶಿಕ್ಷಿಸಿ. ನನ್ನನ್ನು ತುಂಬಾ ಇಷ್ಟಪಡುವ ಹುಡುಗನೊಬ್ಬನಿದ್ದಾನೆ, ಅವನು ಕಷ್ಟದಲ್ಲಿದ್ದು, ಆದರೆ ಅವನಿಗೆ ಸಹಾಯಮಾಡಿ' ಎಂದು ಡೆತ್‌ನೋಟ್ ಬರೆದಿಟ್ಟಿದ್ದಳು. [ಮೈಸೂರು : ಸತ್ತಂತೆ ನಾಟಕವಾಡಲು ಹೋಗಿ ಹೆಣವಾದ]

ಪ್ರಕರಣದ ವಿವರ : ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಸ್ವಾತಿ ಮತ್ತು ಬಂಧಿತ ಆರಾಧ್ಯ ಒಟ್ಟಿಗೆ ವ್ಯಾಸಂಗ ಮಾಡುತ್ತಿದ್ದರು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆರಾಧ್ಯ ಎರಡು ಸಿಮ್ ಕಾರ್ಡ್‌ಗಳನ್ನು ಹೊಂದಿದ್ದ. ಒಂದು ನಂಬರ್‌ನಿಂದ ಸ್ವಾತಿ ಜೊತೆ ಚೆನ್ನಾಗಿ ಮಾತನಾಡುತ್ತಿದ್ದ ಆತ, ಮತ್ತೊಂದು ನಂಬರ್‌ನಿಂದ ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿದ್ದ.

ಪೊಲೀಸರಿಗೆ ಸವಾಲು : ಸ್ವಾತಿ ಆತ್ಮಹತ್ಯೆ ಪ್ರಕರಣ ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ಡೆತ್‌ನೋಟ್ ಸಿಕ್ಕಿದ್ದರೂ ಆಕೆಯ ಮೊಬೈಲ್‌ನಲ್ಲಿ ಎಲ್ಲಾ ಸಂದೇಶ ಮತ್ತು ನಂಬರ್‌ಗಳನ್ನ ಡಿಲೀಟ್ ಮಾಡಲಾಗಿತ್ತು. ಸ್ವಾತಿ ಬ್ಯಾಗ್‌ನಲ್ಲಿ ಸಿಕ್ಕ ಪೆನ್‌ಡ್ರೈವ್‌ನಲ್ಲಿ ಮೊಬೈಲ್‌ನಲ್ಲಿ ಮಾತನಾಡಿದ್ದ ಕರೆಗಳ ರೆಕಾರ್ಡಿಂಗ್‌ಗಳನ್ನು ಸೇವ್ ಮಾಡಿದ್ದಳು. ಆದರ ಆಧಾರದ ಮೇಲೆ ಆರಾಧ್ಯನನ್ನು ಬಂಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+