ಮೈಸೂರು : 4 ವರ್ಷದ ಸನ್ಮಿತ್ ಶವವಾಗಿ ಪತ್ತೆ

ಮೈಸೂರು, ಜೂ. 12 : ಪಿರಿಯಾಪಟ್ಟಣದಿಂದ ಎರಡು ದಿನಗಳ ಹಿಂದೆ ಕಾಣೆಯಾಗಿದ್ದ 4 ವರ್ಷದ ಬಾಲಕ ಸನ್ಮಿತ್ ಶವವಾಗಿ ಪತ್ತೆಯಾಗಿದ್ದಾನೆ. ಶುಕ್ರವಾರ ಸನ್ಮಿತ್ ಶವ ಕೆರೆಯಲ್ಲಿ ಪತ್ತೆಯಾಗಿದೆ. ಹಣಕ್ಕಾಗಿ ಅಪಹರಣ ಮಾಡಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಪಿರಿಯಾಪಟ್ಟಣದ ಒಳಕೋಟೆ ನಿವಾಸಿ ಸೋಹನ್ ಎಂಬುವವರ ಪುತ್ರ ಸನ್ಮಿತ್ ಜೂ.10ರಂದು ಶಾಲೆಗೆ ತೆರಳಿದವನು ನಂತರ ನಾಪತ್ತೆಯಾಗಿದ್ದ. ಸನ್ಮಿತ್ ಪಿರಿಯಾಪಟ್ಟಣದ ಪುಷ್ಪಾ ಕಾನ್ವೆಂಟ್‌ನಲ್ಲಿ ಎಲ್‍ಕೆಜಿ ಓದುತ್ತಿದ್ದ. ಮಗ ಕಾಣೆಯಾಗಿರುವ ಬಗ್ಗೆ ಸನ್ಮಿತ್ ತಂದೆ ಪಿರಿಯಾಪಟ್ಟಣ ಠಾಣೆಗೆ ದೂರು ನೀಡಿದ್ದರು.

mysuru

ಪ್ರತಾಪ್ ಸಿಂಹ ಮನವಿ ಮಾಡಿದ್ದರು : ಸನ್ಮಿತ್ ಕಾಣೆಯಾಗಿದ್ದು ಈತನ ಬಗ್ಗೆ ಮಾಹಿತಿ ಸಿಕ್ಕರೆ ಕರೆ ಮಾಡಿ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಫೇಸ್‌ ಬುಕ್ ಮೂಲಕ ಜನರಿಗೆ ಮನವಿ ಮಾಡಿದ್ದರು. [ಪೊಲೀಸರಿಗೆ ವಾಟ್ಸಪ್ ಮೂಲಕ ದೂರು ಕೊಡಿ]

ತಂದೆ ಊಟ ಮಾಡಿಸಿ ಬಂದಿದ್ದರು : ಜೂನ್ 10ರಂದು ಸನ್ಮಿತ್ ತಂದೆ ಸೋಹನ್ ಮಧ್ಯಾಹ್ನ ಶಾಲೆಗೆ ತೆರಳಿ ಊಟ ಮಾಡಿಸಿ ಬಂದಿದ್ದರು. ನಂತರ ಸಂಜೆ ಶಾಲೆಗೆ ಮಗನನ್ನು ಕರೆದುಕೊಂಡು ಬರಲು ಹೋದಾಗ ಅಲ್ಲಿ ಸನ್ಮಿತ್ ಇರಲಿಲ್ಲ. ಶಾಲೆಯಲ್ಲಿ ವಿಚಾರಿಸಿದಾಗ ಸನ್ಮಿತ್ ಮಧ್ಯಾಹ್ನ ಶಾಲೆಗೆ ಬಂದಿಲ್ಲ ಎಂದು ಹೇಳಿದ್ದರು.

ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪಿರಿಯಾಪಟ್ಟಣ ಪೊಲೀಸರು ಗುರುವಾರ ಸನ್ಮಿತ್‌ಗಾಗಿ ಹುಡುಕಾಟ ನಡೆಸಿದ್ದರು. ಶುಕ್ರವಾರವೂ ಹುಡುಕಾಟ ಮುಂದುವರೆದಿತ್ತು. ಶುಕ್ರವಾರ ಸಂಜೆಯ ವೇಳೆಗೆ ಸನ್ಮಿತ್ ಶವ ಪುಷ್ಪಾ ಕಾನ್ವೆಂಟ್‌ನಿಂದ ಸ್ವಲ್ಪ ದೂರದಲ್ಲಿರುವ ಕಾಡಿನ ಕೆರೆಯಲ್ಲಿ ಪತ್ತೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+