ಮೈಸೂರಿನಲ್ಲಿ ಫೆ. 10, 17, ಮಾ. 3ರಂದು ಪಾಸ್ಪೋರ್ಟ್ ಮೇಳ
ಬೆಂಗಳೂರು, ಫೆಬ್ರವರಿ 8: ಬೆಂಗಳೂರು ಪ್ರಾದೇಶಿಕ ಪಾಸ್ಪೋರ್ಟ್ ಕೇಂದ್ರವು ಮೂರು ಪಾಸ್ಪೋರ್ಟ್ ಮೇಳಗಳನ್ನು ಮೈಸೂರಿನಲ್ಲಿ ಹಮ್ಮಿಕೊಂಡಿದೆ. ಮೈಸೂರಿನ ಪೋಸ್ಟ್ ಆಫೀಸ್ ಪಾಸ್ಪೋರ್ಟ್ ಸೇವಾ ಕೇಂದ್ರದಲ್ಲಿ ಈ ಮೇಳ ನಡೆಯಲಿದೆ.
ಫೆಬ್ರವರಿ 10 ಮತ್ತು 17 ಹಾಗೂ ಮಾರ್ಚ್ 3ರಂದು ಪಾಸ್ಪೋರ್ಟ್ ಮೇಳ ನಡೆಯಲಿದೆ. ಈ ಪಾಸ್ಪೋರ್ಟ್ ಮೇಳಗಳಿಗೆ ಕ್ರಮವಾಗಿ ಫೆಬ್ರವರಿ 5, 12 ಮತ್ತು 26ರಂದು ಅಪಾಯಿಂಟ್ಮೆಂಟ್ ಗಳನ್ನು ನೀಡಲಾಗುತ್ತದೆ.
ಈ ಪಾಸ್ಪೋರ್ಟ್ ಮೇಳದ ಬಗ್ಗೆ ಹೆಚ್ಚಿನ ಮಾಹಿತಿಗೆ ಆಸಕ್ತರು ವೆಬ್ಸೈಟ್ ಗೆ ಭೇಟಿ ನೀಡಿ, ಇಲ್ಲಿ ಬೆಂಗಳೂರು ಪಾಸ್ಪೋರ್ಟ್ ಕಚೇರಿ ಆಯ್ಕೆಯಡಿಯಲ್ಲಿ "ಪಾಸ್ಪೋರ್ಟ್ ಮೇಳ ರಿಕ್ವಾಯರ್ ಮೆಂಟ್" ಆಯ್ಕೆ ಮಾಡುವಂತೆ ಪ್ರಾದೇಶಿಕ ಪಾಸ್ಪೋರ್ಟ್ ಆಯುಕ್ತ ಭರತ್ ಕುಮಾರ್ ಕುತಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













Click it and Unblock the Notifications