ವಿಡಿಯೋ; ನಂಜನಗೂಡಿನಲ್ಲಿ ಇದು ಮಿನಿ ಪಾಕಿಸ್ತಾನ ಹೇಳಿಕೆ!
ಮೈಸೂರು, ಮೇ 05; ರಂಜಾನ್ ಮೆರವಣಿಗೆ ವೇಳೆ ನಂಜನಗೂಡಿನಲ್ಲಿ ವ್ಯಕ್ತಿಯೊಬ್ಬ ಉರ್ದುವಿನಲ್ಲಿ ನಮ್ಮ ಗ್ರಾಮ ಕವಲಂದೆ ಮಿನಿ ಪಾಕಿಸ್ತಾನ್ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ಭಾರೀ ವಿವಾದಕ್ಕೂ ಕಾರಣವಾಗಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಗ್ರಾಮದಲ್ಲಿ ನಡೆದ ರಂಜಾನ್ ಮೆರವಣಿಗೆ ಸಂದರ್ಭ ಈ ಘಟನೆ ನಡೆದಿದೆ. ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ದೊಡ್ಡಕವಲಂದೆ ಗ್ರಾಮದಲ್ಲಿ ಮುಸ್ಲಿಮರಿಗಿಂತ ಹಿಂದೂಗಳ ಸಂಖ್ಯೆ ಹೆಚ್ಚಿದೆ. ಹೀಗಿರುವಾಗ ಮಿನಿ ಪಾಕಿಸ್ತಾನ್ ಎಂದು ಹೇಳಿರುವುದು ಮುಸ್ಲಿಮರ ವಿಕೃತ ಮನಸ್ಥಿತಿಯನ್ನು ತೋರುತ್ತಿದೆ. ಅವರಿಗೆ ಭಾರತದ ಬಗ್ಗೆ ಕಿಂಚಿತ್ತೂ ಅಭಿಮಾನ ಇಲ್ಲದಿರುವುದು ಅವರ ಮಾತಿನಿಂದ ಸ್ಪಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಇಂತಹ ಹೇಳಿಕೆ ನೀಡಿದ ವ್ಯಕ್ತಿಯನ್ನು ಬಂಧಿಸಿ ದೇಶದ್ರೋಹದ ಕೇಸ್ ದಾಖಲಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಪರ ಸಂಘಟನೆಗಳವರು ಆಗ್ರಹಿಸಿದ್ದಾರೆ. ದೊಡ್ಡ ಕವಲಂದೆಯಲ್ಲಿ ರಂಜಾನ್ ಹಬ್ಬದ ದಿನ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಮೆರವಣಿಗೆಯಲ್ಲಿ ತೆರಳುವಾಗ ಈ ಘೋಷಣೆ ಕೂಗಲಾಗಿದೆ.
ಮೆರವಣಿಗೆ ಹೋಗುವುದನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಆಗ ವ್ಯಕ್ತಿಯೊಬ್ಬ ನಮ್ಮ ಗ್ರಾಮ ಕವಲಂದೆ ಮಿನಿ ಪಾಕಿಸ್ತಾನ್ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಿಂದೂ ಪರ ಸಂಘಟನೆಗಳವರು ವೈರಲ್ ಆಗಿರುವ ವಿಡಿಯೋ ದೇಶ ವಿರೋಧಿಗಳ ಮನಸ್ಥಿತಿಯನ್ನು ಬಿಂಬಿಸಿದೆ ಎಂದು ಖಂಡಿಸಿದ್ದಾರೆ. ಪೊಲೀಸರು ಸಹ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ್ದು ಈ ರೀತಿ ಹೇಳಿಕೆ ಕೊಟ್ಟು, ವಿಡಿಯೋ ಮಾಡಿರುವ ವ್ಯಕ್ತಿಯ ಪತ್ತೆ ಕಾರ್ಯದಲ್ಲಿ ಮುಂದಾಗಿದ್ದಾರೆ.












Click it and Unblock the Notifications