ಮೈಸೂರಿನಲ್ಲಿ ಆಪರೇಷನ್ ಚೀತಾದಿಂದ ಅರಿವು ಕಾರ್ಯಕ್ರಮ

ಮೈಸೂರು, ನವೆಂಬರ್ 18:- ಸದ್ಯ ಮೈಸೂರಿನಲ್ಲಿ ಸಂಚಾರಿ ಪೊಲೀಸರು ಆಪರೇಷನ್ ಚೀತಾ ಶುರುವಿಟ್ಟುಕೊಂಡಿದೆ. ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳ ಪೊಲೀಸರು ಸೇರಿಕೊಂಡು ಅನಿರೀಕ್ಷಿತವಾಗಿ ಸಂಚಾರ ತಪಾಸಣೆ ಕಾರ್ಯಾಚರಣೆಯನ್ನು "ಆಪರೇಷನ್ ಚೀತಾ" ಎಂಬ ಹೆಸರಿನಡಿ ಆರಂಭಿಸಲಾಗಿದೆ.

ಆಪರೇಷನ್ ಚೀತಾ ಕಾರ್ಯಾಚರಣೆಯಲ್ಲಿ ನಗರದ ಎಲ್ಲಾ ಸಂಚಾರ ಮತ್ತು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಠಾಣೆಗಳ ಅಧಿಕಾರಿಗಳು ನಗರಾದಾದ್ಯಂತ ಪ್ರಮುಖವಾದ ಸ್ಥಳಗಳಲ್ಲಿ ನಿಂತು ವಿವಿಧ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ ತಪಾಸಣೆ ನಡೆಸುತ್ತಿದ್ದಾರೆ. ಇನ್ನು ಇವರ ವಿರುದ್ಧ ಪ್ರಕರಣಗಳನ್ನು ದಾಖಲಿಸದೇ, ಈ ಸವಾರರಿಗೆ ಪೊಲೀಸರು ಸ್ನೇಹಭಾವದಿಂದ, ವಾಹನ ಸವಾರರು ಅನುಸರಿಸಬೇಕಾದ ಸಂಚಾರ ನಿಯಮಗಳು ಮತ್ತು ಹೊಂದಿರಬೇಕಾದ ಅಗತ್ಯ ದಾಖಲೆಗಳ ಬಗ್ಗೆ ತಿಳುವಳಿಕೆಯನ್ನು ನೀಡಿದರು.

Operation Cheetah: Violators must follow the rules

ಇನ್ನು ಈ ಕಾರ್ಯಾಚರಣೆಯಲ್ಲಿ ಒಟ್ಟು 3000 ಸಂಖ್ಯೆಯ ವಾಹನ ಸವಾರರಿಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗಿದೆ. ಈ ಕಾರ್ಯಾಚರಣೆಯನ್ನು ಮೈಸೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಡಿ.ಸಿ.ಪಿ. ಡಾ. ವಿಕ್ರಂ ವಿ ಅಮಟೆರವರ ಮಾರ್ಗದರ್ಶನದಲ್ಲಿ ನಗರದ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು ಕೈಗೊಂಡಿದ್ದು, ಈ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತ ಡಾ. ಎ. ಸುಬ್ರಮಣ್ಯೇಶ್ವರ ರಾವ್ ಶ್ಲಾಘಿಸಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+