ಮೈಸೂರಲ್ಲಿ ಭಗವದ್ಗೀತೆ ಕುರಿತು ಬಹಿರಂಗ ಚರ್ಚೆ

ಮೈಸೂರು, ಜೂ. 18 : ಭಗವದ್ಗೀತೆ ಕುರಿತು ಎಡ ಹಾಗೂ ಬಲ ಪಂಥೀಯರ ನಡುವಿನ ಬಹಿರಂಗ ಚರ್ಚೆಗೆ ವೇದಿಕೆ ಸಿದ್ಧವಾಗಿದೆ. ಪೇಜಾವರ ಶ್ರೀಗಳು ಮತ್ತು ಚಿಂತಕ ಪ್ರೊಫೆಸರ್ ಕೆ.ಎಸ್.ಭಗವಾನ್ ಜೂನ್ 21ರಂದು ನಡೆಯುವ ಚರ್ಚೆಯಲ್ಲಿ ಮುಖಾಮುಖಿಯಾಗಲಿದ್ದಾರೆ.

ಕರ್ನಾಟಕ ದಲಿತ ವೆಲ್‍ಫೇರ್ ಟ್ರಸ್ಟ್ ಜೂನ್ 21ರಂದು ಮೈಸೂರಿನಲ್ಲಿ ಈ ಬಹಿರಂಗ ಚರ್ಚೆಯನ್ನು ಆಯೋಜಿಸಿದೆ. ಎರಡೂ ಬಣಗಳ ಜೊತೆ ಮಾತುಕತೆ ನಡೆಸಿದ್ದು, ಚರ್ಚಾ ವೇದಿಕೆಯಲ್ಲಿ ತಲಾ 7 ಜನರು ಇರುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯಕ್ರಮದ ಆಯೋಜಕ ಶಾಂತರಾಜು ಅವರು ಮಾಧ್ಯಮಗಳಿಗೆ ಹೇಳಿದ್ದಾರೆ. [ಶ್ರೀರಾಮ ಸ್ತ್ರೀಲೋಲನಂತೆ, ಮದ್ಯ ಸೇವಿಸುತ್ತಿದ್ದನಂತೆ!]

bhagavad gita

ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆ ಕುರಿತು ಪೇಜಾವರ ಶ್ರೀಗಳು ಮತ್ತು ಪ್ರೊ.ಕೆ.ಎಸ್.ಭಗವಾನ್ ಅವರ ನೇತೃತ್ವದಲ್ಲಿ ಚರ್ಚೆ ನಡೆಯಲಿದೆ. ಪೇಜಾವರ ಮಠದ ವಿಶ್ವೇಶತೀರ್ಥಸ್ವಾಮೀಜಿಗಳು ಚರ್ಚೆಗೆ ಆಗಮಿಸಲು ಸಮ್ಮತಿ ಸೂಚಿಸಿದ್ದಾರೆ. [ಭಗವದ್ಗೀತೆ ಸುಡಲು ಯತ್ನ]

ಮೈಸೂರು ವಿಶ್ವವಿದ್ಯಾಲಯದ ಆವರಣದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಈ ಬಹಿರಂಗ ಚರ್ಚೆ ನಡೆಯದೆ. ಆಯ್ದ ವೀಕ್ಷಕರಿಗೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿದೆ. ಒಟ್ಟು 300 ಜನರು ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಅವರಿಗೆ ಪಾಸ್ ವಿತರಣೆ ಮಾಡಲಾಗುತ್ತದೆ.

ಪ್ರೊ.ಭಗವಾನ್ ಅವರು ಏಕೆ : 'ಆಯುಧ ಹಿಡಿದ ಹಿಂದೂ ದೇವರುಗಳ ಪೂಜೆ ಮಾಡಬೇಡಿ. ಅಂತಹ ದೇವರುಗಳನ್ನು ಆರಾಧಿಸುವುದರಿಂದ ಆ ದೇವರುಗಳಲ್ಲಿನ ಉಗ್ರ ಸ್ವರೂಪವು ನಿಮ್ಮ ಮೇಲೂ ಆವಾಹನೆಯಾಗಬಲ್ಲದು'.

'ಹಿಂದೂಗಳಲ್ಲಿ ಶ್ರೀ ರಾಮಚಂದ್ರ ಎಂದರೆ ಮರ್ಯಾದಾ ಪುರುಷೋತ್ತಮ, ಪಿತೃವಾಕ್ಯ ಪರಿಪಾಲಕ, ಏಕಪತ್ನೀವ್ರತಸ್ಥ ಎನ್ನುವ ನಂಬಿಕೆಯಿದೆ. ಆದರೆ, ಅದೆಲ್ಲಾ ಸುಳ್ಳು' ಹೀಗೆ ಹಲವಾರು ಭಾರೀ ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವ ಭಗವಾನ್ ಬಹಿರಂಗ ಚರ್ಚೆಗೆ ಆಗಮಿಸುತ್ತಿದ್ದಾರೆ.

2015ರ ಫೆಬ್ರವರಿಯಲ್ಲಿ ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ. ಕೆ.ಎಸ್. ಭಗವಾನ್ ಭಗವದ್ಗೀತೆಯನ್ನು ಟೀಕಿಸಿದ್ದರು. ಪುಸ್ತಕವನ್ನು ಸುಡಲು ಯತ್ನಿಸಿದ್ದರು ಈ ಕುರಿತು ದೂರು ಸಹ ದಾಖಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+