ಕೊರೊನಾ ಭಯ; ಮೈಸೂರಲ್ಲಿ ಕೈದಿಗಳನ್ನೂ ಭೇಟಿ ಮಾಡುವಂತಿಲ್ಲ
ಮೈಸೂರು, ಮಾರ್ಚ್ 17: ಕೊರೊನಾ ವೈರಸ್ ಭೀತಿ ಈಗ ಎಲ್ಲೆಡೆ ಆವರಿಸಿದೆ. ಈ ಆತಂಕ ಜೈಲನ್ನೂ ಬಿಟ್ಟಿಲ್ಲ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಕೈದಿಗಳನ್ನು ಭೇಟಿಯಾಗಲು ಬರುವ ಸಂದರ್ಶಕರಿಗೂ ಭೇಟಿಯನ್ನು ಸ್ಥಗಿತಗೊಳಿಸಲಾಗಿದೆ.
ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಆದೇಶದಂತೆ ಇಂದಿನಿಂದ ಮುಂದಿನ ಆದೇಶ ಹೊರ ಬೀಳುವವರೆಗೂ ಕಾರಾಗೃಹದಲ್ಲಿರುವ ಬಂಧಿಗಳ ಸಂದರ್ಶನ, ಭೇಟಿಯನ್ನು ಮತ್ತು ಯಾವುದೇ ರೀತಿಯ ಊಟ, ತಿಂಡಿಗಳನ್ನು ತಂದುಕೊಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಬಂಧಿಗಳ ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕರು ಸಹಕರಿಸಲು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು ಮನವಿ ಮಾಡಿದ್ದಾರೆ.












Click it and Unblock the Notifications