ಬಿಜೆಪಿಯಿಂದ ನನಗೆ ಯಾವುದೇ ಕರೆ ಬಂದಿಲ್ಲ:ನಟಿ ಸುಮಲತಾ

Recommended Video

      ಬಿಜೆಪಿಯಿಂದ ನನಗೆ ಯಾವುದೇ ಕರೆ ಬಂದಿಲ್ಲ:ನಟಿ ಸುಮಲತಾ | Oneindia Kannada

      ಮೈಸೂರು, ಮಾರ್ಚ್ 7:ನನಗೆ ಇದುವರೆಗೂ ಬಿಜೆಪಿಯಿಂದ ಸ್ಪರ್ಧೆ ಮಾಡುವಂತೆ ಯಾರೂ ಮಾತನಾಡಿಲ್ಲ. ಒಂದು ವೇಳೆ ಬಂದರೆ ನಾನು ಈ ಕುರಿತಾಗಿ ಜನರೊಂದಿಗೆ ಮಾತನಾಡಿ ನಿರ್ಧಾರ ಮಾಡುತ್ತೇನೆ ಎಂದು ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.

      ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದವರು ಇದುವರೆಗೂ ನನ್ನ ಬಳಿ ಬಂದು ಯಾರೂ ನೇರವಾಗಿ ಮಾತನಾಡಿಲ್ಲ. ಅವರ ಮನಸ್ಸಿನಲ್ಲಿ ಯಾವ ಆಲೋಚನೆ ಇದೆ ಎಂದು ನನಗೆ ಗೊತ್ತಿಲ್ಲ. ಸದ್ಯಕ್ಕೆ ಇದುವರೆಗೂ ಯಾರೂ ಸಂಪರ್ಕಿಸಿಲ್ಲ ಎಂದರು.

      ಜನರು ಯಾವ ಕ್ಷೇತ್ರದಿಂದ ಸ್ಪರ್ಧಿಸಿ ನಿಂತುಕೊಳ್ಳಬೇಕು ಎಂದು ತಿಳಿಸುತ್ತಾರೋ ನಾನು ಅವರ ಪರ ನಿಂತುಕೊಳ್ಳಲು ನಿರ್ಧಾರ ಮಾಡಿದ್ದೇನೆ ಎಂದ ಸುಮಲತಾ, ಆದರೆ ಯಾವ ದಾರಿಯಲ್ಲಿ ಹೋಗಬೇಕು ಎಂಬ ಗೊಂದಲ ಇದೆ. ಇದುವರೆಗೂ ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ಕೊಡುತ್ತದೆ ಎಂದು ಭಾವಿಸಿದ್ದೆ. ಸದ್ಯಕ್ಕೆ ಮುಂದಿನ ದಾರಿ ಏನು ಎಂದು ಜನರನ್ನು ಕೇಳುತ್ತೇನೆ. ಒಂದು ವೇಳೆ ನನಗೆ ಬಿಜೆಪಿಯಿಂದ ಆಫರ್ ಬಂದರೆ ಈ ರೀತಿ ಆಫರ್ ಬಂದಿದೆ. ಅದಕ್ಕೆ ನಿಮ್ಮ ನಿಲುವೇನು ಎಂದು ಅಭಿಮತ ಸಂಗ್ರಹಿಸುತ್ತೇನೆ ಎಂದರು.

      No one has ever spoken to contest from the BJP:Sumalatha

      ಅಂಬರೀಶ್ ನಂತರ ಅವರ ಪರವಾಗಿ ನಾನು ಸೂಕ್ತ ಎಂದು ಜನರಿಗೆ ಅನ್ನಿಸಿದೆ. ನಾನು ಮಂಡ್ಯ ಬಿಟ್ಟು ಬೇರೆ ಕಡೆ ಸ್ಪರ್ಧೆ ಮಾಡಲ್ಲ. ನನಗೆ ಬೇರೆ ಸಸ್ಥಾನದ ಅಗತ್ಯವಿಲ್ಲ. ಇಲ್ಲಿಯವರೆಗೂ ಕಾಂಗ್ರೆಸ್ ಕಾರ್ಯಕರ್ತರು ನಮಗೆ ಬೆಂಬಲ ನೀಡುತ್ತಿದ್ದಾರೆ. ಯಾಕೆಂದರೆ ಇದು ಅವರಿಗೆ ಅಸ್ತತ್ವದ ಪ್ರಶ್ನೆಯಾಗಿದೆ ಎಂದು ಸುಮಲತಾ ತಿಳಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+