ಸೋಂಕಿತರ ಸಂಖ್ಯೆ ಹೆಚ್ಚಳ; ನಂಜನಗೂಡು ಸೀಲ್ ಡೌನ್‌ ಗೆ ಸಿದ್ಧತೆ

ಮೈಸೂರು, ಏಪ್ರಿಲ್ 22: ಜಿಲ್ಲೆಯಲ್ಲಿ ಮಂಗಳವಾರ ಎರಡು ಕೊರೊನಾ ಪ್ರಕರಣಗಳು ಪತ್ತೆಯಾಗುವ ಮೂಲಕ ಜುಬಿಲಿಯೆಂಟ್ ಜೆನರಿಕ್ಸ್ ಕಾರ್ಖಾನೆಯಿಂದ ಸೋಂಕಿತರಾದವರ ಸಂಖ್ಯೆ 70ಕ್ಕೆಏರಿದೆ.

Recommended Video

      ದಯವಿಟ್ಟು ಬೆಂಗಳೂರಲ್ಲಿರೋ ಹಸುಗಳಿಗೆ ಮೇವು ಕೊಟ್ಟು ಕಸಾಯಿ ಖಾನೆಗೆ ಹೋಗೋದನ್ನು ತಪ್ಪಿಸಿ | Ragini | Cow

      ನಂಜನಗೂಡು ತಾಲೂಕಿನಲ್ಲಿ 55 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ನಂಜನಗೂಡು ನಗರ ಪ್ರದೇಶದ ವ್ಯಾಪ್ತಿಯ 14 ಹಾಗೂ ಗ್ರಾಮಾಂತರ ಪ್ರದೇಶದ 11 ಸೇರಿದಂತೆ ಒಟ್ಟು 25 ವಲಯಗಳಲ್ಲಿ ಮಂಗಳವಾರದವರೆಗೆ 55 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಸೋಂಕಿತರು ವಾಸಿಸುವ ಮನೆಯ 100 ಮೀಟರ್‌ ಸುತ್ತಳತೆಯನ್ನು ಬಂಧನ ವಲಯ (ಕಂಟೈನ್ಮೆಂಟ್ ಜೋನ್‌) ಆಗಿ ಗುರುತಿಸಲಾಗುತ್ತಿದೆ.

      ಕೊರೊನಾ ಪರೀಕ್ಷೆಗೆ ಒಳಪಟ್ಟಿರುವ ಸ್ಯಾಂಪಲ್ ಗಳ ವರದಿ ಇಂದು ಹೊರಬೀಳಲಿದ್ದು, ಬಳಿಕ ಸೀಲ್ ಡೌನ್ ವಲಯಗಳನ್ನು ಘೋಷಿಸಿ ಜಾರಿಗೊಳಿಸಲಾಗುವುದು ಎಂದು ತಹಶೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ತಿಳಿಸಿದ್ದಾರೆ.

      Preparations To Seal Down Nanjanagudu

      ಈಗಾಗಲೇ ತಾಲೂಕಿನ ಹೆಬ್ಯಾ ಗ್ರಾಮವನ್ನು ಈಗಾಗಲೇ ಸೀಲ್ ‌ಡೌನ್‌ ಮಾಡಲಾಗಿದ್ದು, ಉಳಿದಂತೆ ದೇವರಸನಹಳ್ಳಿ, ಕೂಗಲೂರು, ಬ್ಯಾಳಾರು, ಬಸವನಪುರ, ದೇವೀರಮ್ಮನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರು ವಾಸಿಸುವ 100 ಮೀಟರ್‌ ಸುತ್ತಳತೆಯ ಪ್ರದೇಶವನ್ನು ಸೀಲ್ ಡೌನ್‌ ಮಾಡಲು ಸಿದ್ಧತೆ ನಡೆಸಲಾಗಿದೆ. ಇನ್ನು ನಗರ ಪ್ರದೇಶದ ಹೌಸಿಂಗ್ ‌ಬೋರ್ಡ್‌, ರಾಷ್ಟ್ರಪತಿ ರಸ್ತೆ, ಕೆಂಪೇಗೌಡ ಲೇಔಟ್‌, ಬಸವನಗುಡಿ ಬ್ಲಾಕ್‌ ಸೇರಿದಂತೆ ಕೆಲ ಬಡಾವಣೆಗಳಲ್ಲಿ ಸೋಂಕಿತರು ವಾಸಿಸುವ ಪ್ರದೇಶಗಳನ್ನು ಸೀಲ್ ‌ಡೌನ್‌ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

      ಸೀಲ್ ‌ಡೌನ್‌ ಆದ ಪ್ರದೇಶಗಳನ್ನು ಬ್ಯಾರಿಕೇಡ್ ಹಾಕಿ ಪ್ರವೇಶ ನಿಷೇಧಿಸಲಾಗುತ್ತದೆ. ಜನರಿಗೆ ಅಗತ್ಯವಾದ ತರಕಾರಿ, ದಿನಸಿ ಪದಾರ್ಥಗಳ ಪೂರೈಕೆ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+