ಕಬಿನಿ ನಾಲೆಯಲ್ಲಿ ಈಜಲು ಹೋಗಿ ನಂಜನಗೂಡು ತಾಲೂಕು ಬಿಎಸ್ಪಿ ಅಧ್ಯಕ್ಷ ಸಾವು

ಮೈಸೂರು, ಅಕ್ಟೋಬರ್ 12: ಕಬಿನಿ ನಾಲೆಯಲ್ಲಿ ಈಜಲು ಹೋಗಿದ್ದ ಬಿಎಸ್ಪಿ ಪಕ್ಷದ ನಂಜನಗೂಡು ತಾಲ್ಲೂಕು ಅಧ್ಯಕ್ಷ ರಾಮಚಂದ್ರ ಎಂಬುವವರು ಸಾವನ್ನಪ್ಪಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸಿಂಗಾರಿಪುರ ಗ್ರಾಮದ ಬಳಿಯಿರುವ ಕಬಿನಿ ನಾಲೆಯಲ್ಲಿ ತಗಡೂರು ರಾಮಚಂದ್ರ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ನಂಜನಗೂಡು ತಾಲ್ಲೂಕು ಸಿಂಗಾರಿಪುರ ಗ್ರಾಮದ ರಾಮಚಂದ್ರ (48) ಮೃತರಾಗಿದ್ದು, ಇವರು ಬಿಎಸ್ಪಿ ಪಕ್ಷದ ತಾಲೂಕು ಅಧ್ಯಕ್ಷರಾಗಿದ್ದರು. ಸಿಂಗಾರಿಪುರ ಮತ್ತು ಉಪ್ಪಿನಹಳ್ಳಿ ಮುಖ್ಯರಸ್ತೆಯಲ್ಲಿ ಬೆಳ್ಳಂಬೆಳಿಗ್ಗೆ ವಾಕ್ ಮುಗಿಸಿಕೊಂಡು ತೆರಳುತ್ತಿದ್ದರು.

Mysuru: Nanjanagudu Taluk BSP President Ramachandra Death For Went To Swimming In Kabini Cannel

ವಾಕಿಂಗ್ ನಂತರ ದೇಹದಲ್ಲಿ ಹೆಚ್ಚು ಬೆವರು ಕಾಣಿಸಿಕೊಂಡ ಹಿನ್ನೆಲೆ ಸಮೀಪದ ಕಬಿನಿ ರಾಮಚಂದ್ರ ನಾಲೆಯಲ್ಲಿ ಈಜಲು ಹೋಗಿ ರಾಮಚಂದ್ರ ಮೃತರಾಗಿದ್ದಾರೆ.

ಮೃತ ವ್ಯಕ್ತಿಯ ಜೊತೆಯಲ್ಲಿ ವಾಕ್ ಮಾಡುತ್ತಿದ್ದ ಗ್ರಾಮದ ಮತ್ತೊಬ್ಬ ಯುವಕನು, ನಾಲೆಯಲ್ಲಿ ಮುಳುಗಿದ ರಾಮಚಂದ್ರ ಕಾಣಿಸದ ಕಾರಣ ಗ್ರಾಮಸ್ಥರಿಗೆ ವಿಚಾರ ಮುಟ್ಟಿಸಿದ್ದಾರೆ.

ಮೃತ ವ್ಯಕ್ತಿಯ ಕುಟುಂಬಸ್ಥರು ಮತ್ತು ಗ್ರಾಮಸ್ಥರು ನಾಲೆಯ ಸಾಕಷ್ಟು ದೂರದವರೆಗೂ ಹುಡುಕಾಟ ನಡೆಸಿದ್ದರೂ ಶವ ಪತ್ತೆಯಾಗಿಲ್ಲ. ಈ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+