ಪತಿಯ ಅನೈತಿಕ ಸಂಬಂಧ, ಪತ್ನಿ ಆತ್ಮಹತ್ಯೆಗೆ ಶರಣು

ಮೈಸೂರು, ಆ.06 : ಪತಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ. ಸರಸ್ವತಿಪುರಂ ಠಾಣಾ ಪೊಲೀಸರು ಪತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಮೈಸೂರಿನ ಟಿ.ಕೆ.ಲೇಔಟ್ ನಿವಾಸಿ ಲೇಖನ (25) ನೇಣಿಗೆ ಶರಣಾದ ಗೃಹಿಣಿ. ಒಂದು ವರ್ಷದ ಹಿಂದೆ ಬಸವರಾಜು ಕೈವಲ್ಯ ಜೊತೆ ಲೇಖನ ವಿವಾಹವಾಗಿತ್ತು. ಬಸವರಾಜು ಪೋಷಕರು ಲೇಖನಾಳಿಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪವೂ ಇದೆ.

Mysuru : Woman commits suicide due to husband's extra marital affairs

ಲೇಖನ ಪತಿ ಬಸವರಾಜುಗೆ ಬೇರೆ ಮಹಿಳೆ ಜೊತೆ ಅನೈತಿಕ ಸಂಬಂಧವಿತ್ತು. ಇದೇ ಕಾರಣಕ್ಕೆ ಪತಿ-ಪತ್ನಿ ಜೊತೆ ಜಗಳ ನಡೆಯುತ್ತಿತ್ತು. ಲೇಖನ ನಜರಾಬಾದ್ ಠಾಣೆಯಲ್ಲಿ ಪತಿ ವಿರುದ್ಧ ದೂರು ನೀಡಿದ್ದರು. ಪೊಲೀಸರು ಇಬ್ಬರನ್ನು ಕರೆದು ವಿಚಾರಣೆ ನಡೆಸಿದ್ದರು.

ಠಾಣೆಯಿಂದ ಬಂದ ಬಳಿಕ ಲೇಖನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಸ್ವತಿಪುರಂ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪತಿ ಬಸವರಾಜುನನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+