ಅಶ್ಲೀಲ ವೆಬ್ ಸೈಟ್ ನಲ್ಲಿ ಮೈಸೂರು ವಿದ್ಯಾರ್ಥಿನಿಯರ ಚಿತ್ರ!
ಮಾನಸ ಗಂಗೋತ್ರಿ ವಿವಿಯ ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಕೆಲ ವಿದ್ಯಾರ್ಥಿನಿಯರ ಭಾವಚಿತ್ರವನ್ನು ಅಶ್ಲೀಲ ವೆಬ್ ಸೈಟ್ ಗೆ ಅಪ್ಲೋಡ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೈಸೂರು, ಏಪ್ರಿಲ್ 19: ನಿನ್ನೆ (ಏಪ್ರಿಲ್ 18) ತಾನೇ ಕುಲಪತಿ ದಯಾನಂದ ಮಾನೆ ಅನಗತ್ಯವಾಗಿ ಲೇಡೀಸ್ ಹಾಸ್ಟೆಲ್ ಗೆ ಪದೇ ಪದೇ ತೆರಳುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಯಾಗಿದ್ದ ಮೈಸೂರು ವಿವಿ ಇಂದು ಮತ್ತೊಮ್ಮೆ ಸುದ್ದಿಯಾಗಿದೆ.
ಮೈಸೂರಿನ ಪ್ರತಿಷ್ಠಿತ ಮಾನಸ ಗಂಗೋತ್ರಿ ವಿವಿಯ ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಕೆಲವು ವಿದ್ಯಾರ್ಥಿನಿಯರ ಭಾವಚಿತ್ರವನ್ನು ಅಶ್ಲೀಲ ವೆಬ್ ಸೈಟ್ ಗೆ ಅಪ್ಲೋಡ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.[ಮೈಸೂರು ವಿವಿ ಹಂಗಾಮಿ ಕುಲಪತಿಗೆ ಲೇಡಿಸ್ ಹಾಸ್ಟೇಲ್ ನಲ್ಲೇನು ಕೆಲಸ?!]

ಕೆಲ ದಿನಗಳಿಂದ ಈ ವಿದ್ಯಾರ್ಥಿನಿಯರ ಮೊಬೈಲ್ ಫೋನ್ ಗೆ ಅನಾಮಧೇಯ ಕರೆಗಳು ಹಾಗೂ ಅಶ್ಲೀಲ ಸಂದೇಶಗಳು ಬರತೊಡಗಿದವು. ಇದರಿಂದ ಆತಂಕಗೊಂಡ ವಿದ್ಯಾರ್ಥಿನಿಯರು, ಇದರ ಹಿನ್ನೆಲೆ ಬೆನ್ನಟಿದಾಗ ಅಶ್ಲೀಲ ವೆಬ್ ಸೈಟ್ ಒಂದಕ್ಕೆ ಇವರ ಭಾವಚಿತ್ರ ಹಾಗೂ ದೂರವಾಣಿ ಸಂಖ್ಯೆಯನ್ನು ಅಪ್ಲೋಡ್ ಮಾಡಿರುವುದು ತಿಳಿಯಿತು.[ಡೆಡ್ ಸ್ಟೋರೆಜ್ ನತ್ತ ಕೆಆರ್ ಎಸ್ ಜಲಾಶಯ]
ಇದರಿಂದ ಆತಂಕಗೊಂಡ ವಿದ್ಯಾರ್ಥಿಗಳು ಮಂಗಳವಾರ ಬೆಳಗ್ಗೆ ತರಗತಿಗೆ ಹಾಜರಾಗುತ್ತಿದ್ದಂತೆ ವಿಭಾಗದ ಮುಖ್ಯಸ್ಥರನ್ನು ಭೇಟಿಯಾಗಿ ಈ ಬಗ್ಗೆ ಅಳಲು ತೋಡಿಕೊಂಡರು. ವಿದ್ಯಾರ್ಥಿನಿಯರ ಖಾಸಗಿ ಮೊಬೈಲ್ ಫೋನ್ ಸಂಖ್ಯೆಗೆ ಕರೆ ಹಾಗೂ ಸಂದೇಶ ಬರುತ್ತಿರುವುದರಿಂದ ಇದು ವಿದ್ಯಾರ್ಥಿನಿಯರನ್ನು ಬಲ್ಲವರೇ ಮಾಡಿರುವ ಕೃತ್ಯ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವುದಾಗ ವಿವಿಯ ಆಡಳಿತ ಮಂಡಳಿ ತಿಳಿಸಿದೆ.











Click it and Unblock the Notifications