ಮೈಸೂರುː 17 ವರ್ಷದ ಬಾಲಕನಿಂದ ಅತ್ಯಾಚಾರ
ಮೈಸೂರು, ನ.8: 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿ 17 ವರ್ಷದ ಬಾಲಕನನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.
ತನ್ನ ಸ್ನೇಹಿತನ ಜತೆಗೂಡಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ನಡೆಸಿದ್ದವ ಸ್ಥಳೀಯರಿಂದ ಥಳಿಸಿಕೊಂಡು ಪೊಲೀಸ್ ಠಾಣೆ ಸೇರಿದ್ದಾನೆ. ಆರೋಪಿಗಳನ್ನು ನರಸಿಂಹರಾಜಪುರ ಪೊಲೀಸರ ಕೈ ಗೆ ಒಪ್ಪಿಸಲಾಗಿದೆ.[ಸಾಮಾಜಿಕ ತಾಣದಲ್ಲಿ ಅತ್ಯಾಚಾರ ತಡೆ ಚಳವಳಿ]

ನವೆಂಬರ್ 3ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂರನೇ ತರಗತಿ ವಿದ್ಯಾರ್ಥಿನಿ ಮೇಲೆ ಆರೋಪಿ ತನ್ನ ಮನೆಯಲ್ಲೇ ಅತ್ಯಾಚಾರ ಎಸಗಿದ್ದಾನೆ. ಘಟನೆಯಲ್ಲಿ ಆರೋಪಿಯ ಸ್ನೇಹಿತನ ಪಾತ್ರ ಕಂಡುಬರದಿದ್ದರಿಂದ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೌರ್ಜನ್ಯಕ್ಕೆ ಒಳಗಾದ ಬಾಲಕಿಯ ತಾಯಿ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದಳು. ಕೆಲಸಕ್ಕೆ ಹೊರಗೆ ಹೋಗುತ್ತಿದ್ದ ತಂದೆ ಬಾಲಕಿಯನ್ನು ಪಕ್ಕದ ಮನೆಯೊಂದರಲ್ಲಿ ಬಿಟ್ಟು ತೆರಳುತ್ತಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ್ದ ಬಾಲಕ ದೌರ್ಜನ್ಯ ಎಸಗಿದ್ದಾನೆ.[ಕಾಮುಕರಿಂದ ಮಕ್ಕಳ ರಕ್ಷಿಸಲು ಲಾವಣ್ಯ ಹೋರಾಟ]
ಬಾಲಕಿಯ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು ಆಕೆಯ ಚಿಕ್ಕಮ್ಮ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ನಂತರ ಬಾಲಕಿ ನಡೆದ ಘಟನೆ ಹೇಳಿದ್ದಾಳೆ. ಇದರಿಂದ ಕೆರಳಿದ ಸ್ಥಳೀಯರು ಆರೋಪಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.












Click it and Unblock the Notifications