• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಳ್ಳರ ಪಾಲಿಗೆ ಸಿಂಹಸ್ವಪ್ನವಾದ ಮೈಸೂರಿನ 'ಗಜ' ಭಲೇ ಜೋರು

|
   Mysuru: ಮೈಸೂರು ಪೊಲೀಸ್ ಇಲಾಖೆಯ ಶ್ವಾನ ಗಜ ಅತ್ಯಂತ ಬುದ್ದಿವಂತ ಶ್ವಾನ | Oneindia Kannada

   ಮೈಸೂರು, ಮೇ.10:ನೋಡೋಕೆ ಹೀರೋ, ಫ್ರೆಂಡ್ಲಿ ವ್ಯಕ್ತಿತ್ವ, ಮೈಸೂರು ಪೊಲೀಸರ ಪಾಲಿಗೆ ಇವನೇ ಕಿಂಗ್. ಗಾಂಜಾ ಅಫೀಮು ಕಳ್ಳರಿಗೆ ಸಿಂಹ ಸ್ವಪ್ನ, ಕ್ರೀಡೆಯಲ್ಲಿ ಈತನನ್ನು ಮೀರಿಸುವವರಿಲ್ಲ. ಯಾರು ಇವನು ಎಂಬ ಕುತೂಹಲವಾ? ಅವನೇ ಮೈಸೂರು ಪೊಲೀಸ್ ಇಲಾಖೆಯ ದಕ್ಷ ಶ್ವಾನ ಗಜ.

   ಗಜ ಅಂದರೆ ಆನೆ ಅಲ್ಲ, ಶ್ವಾನದ ಹೆಸರು. ಪೊಲೀಸ್ ಇಲಾಖೆಯ ಶ್ವಾನ ದಳ ವಿಭಾಗದಲ್ಲಿ ತನ್ನ ಕಾರ್ಯಕ್ಷಮತೆಯಿಂದಲೇ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿರುವ ಲ್ಯಾಬ್ರಡಾರ್ ಜಾತಿಯ ಶ್ವಾನ ಇದಾಗಿದೆ. ಮೇ 4, 2011ರಂದು ಜನಿಸಿರುವ ಈ ಶ್ವಾನಕ್ಕೆ 3 ತಿಂಗಳ ಮರಿ ಇರುವಾಗಲೇ ಕಠಿಣವಾದ ತರಬೇತಿ ನೀಡಿ ಕಡೆಗೆ ನಾರ್ಕೋಟಿಕ್ ಡ್ರಗ್ ಪತ್ತೆ ಕಾರ್ಯಾಚರಣೆಯಲ್ಲಿ ಖಾಕಿ ಪಡೆ ಬಳಸಿಕೊಳ್ಳಲಾಗಿದೆ.

   ಸಾಕಿದ ನಾಯಿಗಳನ್ನೇ ಉಗ್ರರ ವಿರುದ್ಧದ ಹೋರಾಟಕ್ಕೆ ಕಾಣಿಕೆ ನೀಡಿದ ಮಹಿಳೆ

   ಕಳೆದ ಏಳೂವರೆ ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಹಲವು ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಯಶಸ್ವಿಯಾಗಿದೆ. ಈವರೆಗೂ ಮೂರು ಬಾರಿ ಗಾಂಜಾ ಅಫೀಮು ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಎರಡು ಬಾರಿ ಯಶಸ್ವಿಯಾಗಿದೆ.

   ಈ ಗಜ ಕ್ರೀಡಾಕೂಟದಲ್ಲೂ ನಂಬರ್ ಒನ್ ಎನಿಸಿಕೊಂಡಿದ್ದಾನೆ. ಇನ್ನು ಈ ಶ್ವಾನದ ಸಾಧನೆಯ ಹಿಂದೆ ಅದರ ತರಬೇತುದಾರ ಬಲರಾಮನ್ ಅವರ ಕೊಡುಗೆಯನ್ನು ನೆನೆಯಲೇಬೇಕು. ಈಗಲೂ ತನ್ನ ತರಬೇತುದಾರ ಬಲರಾಮನ್ ಹೇಳಿದ ಮಾತನ್ನು ಚಾಚೂ ತಪ್ಪದೆ ಪಾಲಿಸುವ ಈ ಗಜ ಹಲವು ಸ್ಟಂಟ್ ಗಳನ್ನು ಪ್ರದರ್ಶಿಸಿ ನೋಡುಗರನ್ನು ರಂಜಿಸುತ್ತದೆ.

   ಈ ಮುದ್ದು ಸ್ಕೂಬಿಗೆ ನಿವೃತ್ತಿಯಂತೆ... ಮೂಕ ಪ್ರಾಣಿಯ ಸೇವೆಗೆ ಸಲಾಂ!

   ದಕ್ಷಿಣ ವಲಯ ಕ್ರೀಡಾಕೂಟದಲ್ಲಿ ಮೂರು ಬಾರಿ ಗೋಲ್ಡ್ ಮೆಡಲ್, ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಗೋಲ್ಡ್ ಮತ್ತು ಸಿಲ್ವರ್ ಮೆಡಲ್ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ರನ್ನರ್ ಅಪ್ ಪದಕ ಗೆದ್ದು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಒಟ್ಟಾರೆ ಮೈಸೂರು ನಗರ ಶ್ವಾನದಳ ವಿಭಾಗದಲ್ಲಿ 10 ಶ್ವಾನಗಳಿವೆ.

   30 ಮಂದಿ ಜೀವ ಉಳಿಸಿ, ಬೆಂಕಿಯಲ್ಲಿ ಬೆಂದು ಪ್ರಾಣಬಿಟ್ಟ ಶ್ವಾನ

   ಅಲ್ಲದೇ ರಾಜ್ಯ ದಕ್ಷಿಣ ವಲಯದ ಪೋಲಿಸ್ ಇಲಾಖೆಯಲ್ಲಿರುವ 50ಕ್ಕೂ ಹೆಚ್ಚು ಶ್ವಾನಗಳ ಪೈಕಿ ಗಜನ ಬುದ್ದಿವಂತಿಕೆ ಹಾಗೂ ಶಕ್ತಿ ವಿಭಿನ್ನ. ಅವನ ಸಾಧನೆಯಿಂದ ಮತ್ತಷ್ಟು ಕಳ್ಳರ ಹೆಡೆ ಮುರಿಕಟ್ಟುವಂತಾಗಲಿ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Mysuru police department dog Gaja is the most brilliant animal out of 50 dogs.He is specialist in chasing the Ganja, Aphimu sellers. Also he has got so many medals in sports.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more